ಪುಟ:ರಂಗಣ್ಣನ ಕನಸಿನ ದಿನಗಳು.pdf/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪರಾಶಕ್ತಿ ದರ್ಶನ

೧೭೭

ಎಳತನದಲ್ಲಿ ತಾಯಿಯರಬೇಕು, ಯೌವನದಲ್ಲಿ ಹೆಂಡತಿ ಇರಬೇಕು. ಮುಪ್ಪಿನಲ್ಲಿ ಸೊಸೆಯಿರಬೇಕು ! ನಿಮ್ಮನ್ನೊಂದು ಪ್ರಶ್ನೆ ಕೇಳುತ್ತೇನೆ. ಉತ್ತರ ಕೊಡಿ. ನಿಮ್ಮ ಸಾಹೇಬರುಗಳೆಲ್ಲ ಬರಿಯ ಗಂಡಸರೇ ಏಕಿರಬೇಕು ? ಹೇಳಿ ನನಗೆ.?

ಸ್ವಲ್ಪ ಸಮಾಧಾನಮಾಡಿಕೊ, ಗದರಿಸಿ ಕೇಳಬೇಡ, ನಿನಗೆ ಉತ್ತರ ನಾನು ಹೇಳಲಾರೆ. ಹೆಂಗಸರೂ ತಕ್ಕಷ್ಟು ವಿದ್ಯಾ ವತಿಯರಾಗಿ ಹೆಚ್ಚು ಸಂಖ್ಯೆಯಲ್ಲಿ ದೊರೆತರೆ ಅವರೂ ಸಾಹೇಬರುಗಳಾಗಿ ಬರಬಹುದು. ಆ ಕಾಲವೂ ಬರಬಹುದು ಎಂದು ಕಾಣುತ್ತೆ.?

“ಮುಖ್ಯ ಕಾರಣ ನಾನು ಹೇಳುತ್ತೇನೆ ಕೇಳಿ : ಗಂಡಸರಿಗೆ ಹೆಂಗಸನ್ನು ಮರ್ಯಾದೆಯಿಂದ ಕಾಣುವ ಸಭ್ಯತೆ ಹುಟ್ಟೊಡನೆ ಬರಲಿಲ್ಲ ; ಓದೊಡನೆ ಬರಲಿಲ್ಲ. ನಿಮ್ಮ ಬಿ.ಎ., ಎಂ. ಎ. ಡಿಗ್ರಿಗಳೇಕೆ ? ಸುಡೋದಕ್ಕೆ !”

ಈ ದಿನ ನಾನು ಎಡಮಗ್ಗುಲಲ್ಲಿ ಎದ್ದೆನೋ ಏನೋ ? ನನ್ನ ಗ್ರಹಚಾರ ಬಿಡಿಸುತ್ತಾ ಇದ್ದೀಯೆ ? ಈಗ ನಾನು ಸ್ನಾನಕ್ಕೆ ಹೊರಡಲೋ ಬೇಡವೋ ? ಹೊಟ್ಟೆಯಲ್ಲಿ ಹಸಿವು. ಹೊತ್ತು ಮಧ್ಯಾಹ್ನವಾಗಿ ಹೋಯಿತು.”

“ಆ ಬಡ ಹೆಂಗಸು ನಿನ್ನೆಯಿಂದ ಅನ್ನವಿಲ್ಲದೆ ಸಾಯುತ್ತಿದಾಳಲ್ಲ ! ಆ ಹೆಣ್ಣು ಹೆಂಗಸು ಹನ್ನೆರಡು ಮೈಲಿ ನಡೆದು ಕೊಂಡು ಬಂದಿದ್ದಾಳಲ್ಲ! ಅವಳ ಕಷ್ಟಕ್ಕೆ ಮೊದಲು ಪರಿಹಾರ ಹೇಳಿ, ಆಮೇಲೆ ನಿಮ್ಮ ಸ್ನಾನ, ಆಟ !

ಈಗ ಆಕೆ ಎಲ್ಲಿದ್ದಾಳೆ ?”

ಅಡಿಗೆಯ ಮನೆಯಲ್ಲಿದ್ದಾಳೆ.'

ಏನು ಕೆಲಸ ಮಾಡಿದೆ ! ಈ ನಮ್ಮ ಮಾತುಗಳನ್ನೆಲ್ಲ ಆಕೆ ಕಿವಿಯಲ್ಲಿ ಕೇಳಿದಳೋ ಏನೋ ? ನಮ್ಮ ಮಾನ ಹೋಯಿತಲ್ಲ ! ಮೊದಲೇ ನೀನು ಹೇಳ ಬಾರದಾಗಿತ್ತೇ ?

“ಆಕೆ ಒಳಗಡೆ ಇದ್ದಾಳೆ, ಕೇಳಿದರೆ ಏನು ದೋಷ ? ಇದರಲ್ಲಿ ಗುಟ್ಟೇನಿದೆ ?