ಪುಟ:ರಂಗಣ್ಣನ ಕನಸಿನ ದಿನಗಳು.pdf/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭೬

ರಂಗಣ್ಣನ ಕನಸಿನ ದಿನಗಳು

ಅಧಿಕಾರದಲ್ಲಿ ಮೆರೆಯುತ್ತಾರೆ. ಕೈ ಕೆಳಗಿನವರ ಕಷ್ಟಗಳನ್ನೂ ಬಡತನವನ್ನೂ ನೋಡುವುದಿಲ್ಲ.'

ಅ೦ಥ ಅವಿವೇಕಿಗಳಿಗೆ ಜವಾಬ್ದಾರಿಯ ಕೆಲಸ ಏತಕ್ಕೆ ಕೊಡಬೇಕು? ಸರಕಾರದವರು ಆಲೋಚನೆ ಮಾಡಬೇಡವೇ? ಅವಿವೇಕಿಯಿಂದ ಎಷ್ಟು ಜನರಿಗೆ ಈ ಕಷ್ಟ !?

ಹಾಗೆಲ್ಲ ಸರಕಾರದವರನ್ನು ಟೀಕಿಸಬೇಡ. ಈ ನಮ್ಮ ಮಾತು ಹೊರಗಿನವರ ಕಿವಿಗೆ ಬಿದ್ದರೆ ನಮಗೆ ತೊಂದರೆಯಾಗುತ್ತೆ ? ನಿನಗೆ ಈ ದಿನ ಬಹಳ ಕೋಪ ಬಂದಿದೆ. ಇಷ್ಟು ಕೋಪ ನಿನ್ನಲ್ಲಿದೆ ಎಂದು ನಾನು ತಿಳಿದಿರಲಿಲ್ಲ.

“ನಿಮಗೇನು ತೊಂದರೆಯಾದೀತು ? ಹೇಳಿ, ಕೆಲಸದಿಂದ ತೆಗೆದು ಬಿಡುತ್ತಾರೆಯೆ? ತೆಗೆದುಬಿಡಲಿ ! ಬುದ್ಧಿಯಿದ್ದವರು ಹೇಗಾದರೂ ಜೀವನ ನಡೆಸುತ್ತಾರೆ. ನಿಮಗಿರುವ ಬುದ್ಧಿಯಲ್ಲಿ ಇದಕ್ಕೆ ನಾಲ್ಕರಷ್ಟು ಸಂಪಾದಿಸಬಹುದು! ಅವರು ಅವಿವೇಕ ಮಾಡಬಹುದು; ಯಾರೂ ಟೀಕಿಸಕೂಡದು- ಎಂದು ಹೇಳುತ್ತೀರಲ್ಲ ! ಸರಿಯೇ ? ಬರಿಯ ಗ೦ಡಸರ ಆಡಳಿತ ! ಕಡೆಗೆ ಒಬ್ಬಳೇ ಒಬ್ಬಳು ಹೆಂಗಸು ಸರಕಾರದಲ್ಲಿದ್ದಿದ್ದರೆ ಎಷ್ಟೋ ವಿವೇಕ ಇರುತ್ತಿತ್ತು ! ?

* ಸ್ತ್ರೀ ಬುದ್ಧಿಃ ಪ್ರಳಯಾಂತಿಕಾ ಎಂದು ಕೇಳಿಲ್ಲವೇ ನೀನು ? ಹೆಂಗಸರು ಆಡಳಿತ, ಸರಕಾರ ನಡೆಸುವುದಕ್ಕಾಗುತ್ತದೆಯೇ ? )

ಏನು ? ಸ್ತ್ರೀ ಬುದ್ಧಿ, ಪ್ರಳಯ ಗಿಳಯ ಎಂದು ಆಡುತ್ತಿದ್ದೀರಿ ? ಕೈ ಹಿಡಿದ ಹೆಂಡತಿಯನ್ನು ಜೂಜಿನಲ್ಲಿ ಸೋತುಬಿಡುವ ಗಂಡಸು, ಕೈ ಹಿಡಿದ ಹೆ೦ಡತಿಯನ್ನು - ಏಳು ತಿಂಗಳ ಗರ್ಭಿಣಿಯನ್ನು - ಕಾಡುಪಾಲು ಮಾಡುವ ಗಂಡಸು, ದೊಡ್ಡ ವಿವೇಕಿಗಳು ! ರಾಜರ್ಷಿಗಳು ! ಅಲ್ಲವೇ ? ಇದಕ್ಕಿಂತ ಅವಿವೇಕ ಲೋಕದಲ್ಲುಂಟೇ ? ಗಂಡಸು ಮಾಡುವ ಅವಿವೇಕ ಅನ್ಯಾಯಗಳನ್ನೆಲ್ಲ ಹೊಟ್ಟೆಯಲ್ಲಿಟ್ಟುಕೊಂಡು ಸೈರಣೆಯಿಂದ ಸಂಸಾರ ನಡೆಸುವ ನಮ್ಮಂಥ ಪತಿವ್ರತೆಯರ ಪ್ರಭಾವದಿಂದ ಒಂದಿಷ್ಟು ಮಳೆ ಬೆಳೆ ಗಳನ್ನಾದರೂ ಕಾಣುತ್ತಿದ್ದೀರಿ ! ಸ್ತ್ರೀ ಬುದ್ಧಿ ! ಎಂದು ಹಳಿಯುತ್ತೀರಾ ನೀವು ? ಗಂಡಸರದೇ ಯಾವಾಗಲೂ ವಕ್ರಬುದ್ಧಿ! ಅವರನ್ನು ತಿದ್ದುವುದಕ್ಕೆ