ಪುಟ:ರಂಗಣ್ಣನ ಕನಸಿನ ದಿನಗಳು.pdf/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪರಾಶಕ್ತಿ ದರ್ಶನ

೧೭೫

ಕೆಟ್ಟ ಮಾತು ಹೊರಟುಬಿಟ್ಟತಲ್ಲ?-ಎಂದು ರಂಗಣ್ಣ ಒಂದು ನಿಮಿಷ ಪೇಚಾಡಿದನು. “ ಕೇಳು. ನಾನು ಜುಲ್ಮಾನೆ ಹಾಕಿದವನಲ್ಲ. ಸಾಹೇಬರು ಹಾಕಿದ್ದು, ಆರ್ಡರನ್ನು ಆಕೆಗೆ ಕಳಿಸಿದೆ ; ಅಷ್ಟೇ. ಆ ದಿನ- ಸಾಹೇಬ ರೊಡನೆ ಸರ್ಕಿಟು ಹೋಗಿದ್ದು ಹಿಂದಿರುಗಿದ ದಿನ-ನಾನು ಸರಿಯಾಗಿ ಏಕೆ ಊಟ ಮಾಡಲಿಲ್ಲ ಎಂದು ನೀನು ಕೇಳಿದ್ದು ಜ್ಞಾಪಕ ವುಂಟೋ ಇಲ್ಲವೋ ? ಆಗ ನಡೆದದ್ದನ್ನೆಲ್ಲ ಆ ಸಾಯಂಕಾಲ ನಿನಗೆ ತಿಳಿಸಲಿಲ್ಲವೇ? ಸಾಹೇಬರು ಜುಲ್ಮಾನೆ ಹಾಕಲಾರರೆಂದು ನಾನು ನಂಬಿದ್ದೆ, ಏನು ಮಾಡುವುದು ? ಒಬ್ಬೊಬ್ಬರು ವಕ್ರಗಳು ಹೀಗೆ ಅಧಿಕಾರಕ್ಕೆ ಬಂದು ಬಿಡುತ್ತಾರೆ, ಆಗ ಕೈ ಕೆಳಗಿನವರಿಗೆ ಕಷ್ಟ. ಹಿಂದೆ ಇದ್ದ ಸಾಹೇಬರು ಒಳ್ಳೆಯವರಾಗಿದ್ದರು ; ಮುಂದೆ ಒಳ್ಳೆಯವರು ಬರಬಹುದು. ಸದ್ಯಕ್ಕೆ ಕಷ್ಟ ಅನುಭವಿಸಬೇಕು. ಈಗಿನ ಸಾಹೇಬರು ದುಡುಕು ; ಅವರದು ಕಠಿನ ಮನಸ್ಸು ; ಎತ್ತು ಈಯಿತು ಎಂದರೆ ಕೊಟ್ಟಿಗೆಯಲ್ಲಿ ಕಟ್ಟು - ಎಂದು ಮಾಡುವ ಮಹಾನುಭಾವರು ! ಏನು ಮಾಡಬೇಕು ? ಹೇಳು?

ನೀವು ಜುಲ್ಮಾನೆ ಹಾಕಿದ್ದೇನೂ ಅಲ್ಲವಲ್ಲ ? ನೀವು ಅವಿವೇಕ ಮಾಡಿದ್ದೆನೂ ಅಲ್ಲವಲ್ಲ ? ನನ್ನ ಮನಸ್ಸಿಗೀಗ ನೆಮ್ಮದಿಯಾಯಿತು ! ನೀವು ಅಂಥವರಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಬಲ್ಲೆ ! ಹೀಗಿರುವಲ್ಲಿ, ಆ ಹೆಂಗಸು ಬಂದು ಆರ್ಡರ್ ತೋರಿಸಿದಾಗ- ಮನಸ್ಸು ಮುರಿದು ಹೋಯಿತು. ನಿಮ್ಮನ್ನು ನಂಬುವುದು ಹೇಗೆ ? ಹೊರಕ್ಕೆ ನುಣ್ಣನೆ ಇದ್ದು ಒಳಗೆ ಮಿಣ್ಣನೆ ಕತ್ತು ಕುಯ್ಯುವ ಗಂಡನೊಡನೆ ಮನಸ್ಸು ಕೊಟ್ಟು ಮನಸ್ಸು ಪಡೆಯುವುದು ಹೇಗಮ್ಮ ? ಹೇಗೆ ? ಅದು ಹೇಗೆ ಸಂಸಾರ ಮಾಡುವುದು ?-ಎಂದೆಲ್ಲ ಬಹಳ ಆಲೋಚನೆ ಮಾಡಿದೆ. ಈಗ ನನಗೆ ಸಮಾಧಾನವಾಯಿತು ! ಹಾಗೆ ಅವಿವೇಕ ಮುಚ್ಚಿ ಕೊಂಡಿರುವ ನಿಮ್ಮ ಸಾಹೇಬರು ಯಾರು ? ನಾನು ಡೈರೆಕ್ಟರ್ ಆದರೆ ಮೊದಲು ಅವರನ್ನು ಕೆಲಸದಿಂದ ಡಿಸ್ಮಿಸ್ ಮಾಡಿಬಿಡುತ್ತೇನೆ !”

ಆ ಸಾಹೇಬರ ಚರಿತ್ರೆಯನ್ನೆಲ್ಲ ಕಟ್ಟಿಕೊಂಡು ನಮಗೇನು ? ಅಲ್ಪನಿಗೆ ಐಶ್ವರ್ಯ ಬಂದರೆ ಮರೆಯುವ ಹಾಗೆ, ಎರಡು ದಿನ