ಪುಟ:ರಂಗಣ್ಣನ ಕನಸಿನ ದಿನಗಳು.pdf/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭೪

ರಂಗಣ್ಣನ ಕನಸಿನ ದಿನಗಳು

“ಏಕೆ ಹೇಳಿಕೊಳ್ಳಬಾರದು ? ನೀವು ಅವಿವೇಕ ಮಾಡಬಹುದು, ಆಕೆ ಬಂದು ಹೇಳಿಕೊಳ್ಳಕೂಡದೇ ? ಆಕೆ ಮಾಡಿದ ಅಂತಹ ಅಪರಾಧವೇನು ? ಹೆಂಗಸು, ಅನಾಥೆ, ವಿಧವೆ, ದಿಕ್ಕಿಲ್ಲದವಳು ! ಹೊಟ್ಟೆ ಪಾಡಿಗೆ ನಿಮ್ಮ ಇಲಾಖೆಗೆ ಸೇರಿಕೊಂಡು ಮಕ್ಕಳಿಗೆ ಯಥಾಶಕ್ತಿ ಪಾಠ ಹೇಳಿಕೊಡುತ್ತಿದ್ದರೆ ನೀವು ಹೋಗಿ ಜುಲ್ಮಾನೆ ಹಾಕುವುದೇ ? ಆಕೆ ಹೇಳಿಕೊಂಡು ಅತ್ತಾಗ ನಾನು ನಂಬಲಿಲ್ಲ. ನೀವು ಅಂಥಾವರು ಅಲ್ಲವಲ್ಲ; ಯಾರಿಗೂ ಸಾಮಾನ್ಯವಾಗಿ ಜುಲ್ಮಾನೆ ಹಾಕುವುದಿಲ್ಲವಲ್ಲ ; ರೇ೦ಜಿನಲ್ಲಿ ಮೇಷ್ಟರುಗಳೆಲ್ಲ ನಿಮ್ಮನ್ನು ಕೊಂಡಾಡುತ್ತಿದ್ದಾರಲ್ಲ ; ಹೀಗಿರುವಲ್ಲಿ ಹೆಂಗಸಿಗೆ, ಅದರಲ್ಲೂ ವಿಧವೆಗೆ ನೀವು ದಂಡನೆ ಮಾಡಿರಲಾರಿರಿ. ಎಂದು ನಾನು ಹೇಳಿದೆ. ಆಕೆ ನಿಮ್ಮ ಆರ್ಡರನ್ನು, ನೀವೇ ರುಜು ಮಾಡಿರುವ ಆರ್ಡರನ್ನು ನನಗೆ ತೋರಿಸಿದಳು. ಇನ್ನು ನಂಬದೆ ಹೇಗಿರಲಿ ? ಮೊದಲು ಆ ಜುಲ್ಮಾನೆ ವಜಾಮಾಡಿ ಆಮೇಲೆ ಸ್ನಾನಕ್ಕೆ ಟವಲುಗಳನ್ನು ತೆಗೆದು ಕೊಳ್ಳಿ !?

ಕಚೇರಿಯ ವಿಷಯಗಳಲ್ಲಿ ಮನೆಯ ಹೆಂಗಸರು ಕೈ ಹಾಕಬಾರದು !?

“ಅದಕೊಸ್ಕರವೇ ನೀವು ಅವಿವೇಕ ಮಾಡಿದ್ದು ! ನಿಮ್ಮ ಅವಿವೇಕ ತಿದ್ದುವುದಕ್ಕೆ ನಾನು ಬಾರದೆ ಬೀದಿಯ ಹೆಂಗಸು ಬರಬೇಕೇ ? ಹೆಂಗಸರು ! ಎಂದು ಏಕೆ ಹಳಿಯುತ್ತಿದ್ದೀರಿ? ಹೆಂಗಸಿಗಿರುವ ಸೈರಣೆ, ಏವೇಕ, ಬುದ್ಧಿಶಕ್ತಿ ಗಂಡಸಿಗೆಲ್ಲಿದೆ ? ನೀವು ನಿಮ್ಮ ಈ ಕಚೇರಿಯ ವಿಷಯಕ್ಕೆ ನನ್ನನ್ನು ಆಲೋಚನೆ ಕೇಳಿದ್ದಿದ್ದರೆ ನಾನು ಸರಿಯಾಗಿ ಸಲಹೆ ಕೊಡುತ್ತಿದ್ದೆ. ಹೆಂಗಸರು ಕೈಹಾಕಬಾರದಂತೆ ! ನಿಮ್ಮ ಮಕ್ಕಳನ್ನು ನೀವು ಎರಡು ದಿನ ಸುಧಾರಿಸಬಲ್ಲಿರಾ? ನಾನು ಕಣ್ಮುಚ್ಚಿ ಕೊಂಡರೆ ಆಗ ಗೊತ್ತಾಗುತ್ತೆ ಗಂಡಸಿನ ಬಾಳು !”

ತಿಪ್ಪನಹಳ್ಳಿಯ ದೃಶ್ಯ ಸ್ಮರಣೆಗೆ ಬಂದು ರಂಗಣ್ಣನಿಗೆ ಎದೆ ಝುಲ್ಲೆಂದಿತು | 'ಕೆಟ್ಟ ಮಾತನಾಡಬೇಡ! ಬೇಡ! ದಾರಿಯಲ್ಲಿ ಹೋಗುವ ಮಾರಿ ಮನೆ ಹೊಕ್ಕಂತೆ ಆಯಿತು. ನನಗೂ ನಿನಗೂ ಸಂಬಂಧವಿಲ್ಲದ ವ್ಯವಹಾರದಿಂದ ಈ ಮಾತು ಬೆಳೆಯುತ್ತಿದೆ' ಎಂದನು, ವಿಷಗಳಿಗೆಯಲ್ಲಿ