ಪುಟ:ರಂಗಣ್ಣನ ಕನಸಿನ ದಿನಗಳು.pdf/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಪಪ್ರಚಾರ

೧೮೩

ತಮ್ಮಂಥ ಹಿತಚಿಂತಕ ಕೂ ಆಪ್ತ ರೂ ನನ್ನ ಬೆಂಬಲಕ್ಕಿರುವಾಗ ಹೆಸರು ಪ್ರಖ್ಯಾತಿಗೆ ಬಾರದೆ ಏನಾಗುತ್ತದೆ ? ' ಎಂದು ರಂಗಣ್ಣನೂ ನಗುತ್ತಾ ಉತ್ತರಕೊಟ್ಟನು,

ನನ್ನಿಂದ ತಮಗೇನೂ ಸಹಾಯವಾಗಿಲ್ಲ ಸ್ವಾಮಿ ! ಮೊನ್ನೆ ಬೆಂಗಳೂರಿಗೆ ಹೋಗಿದ್ದೆ. ಅಠಾರಾ ಕಚೇರಿಯಲ್ಲಿ ಕೆಲಸವಿತ್ತು. ದಿವಾನರು ನಮ್ಮ ತಾಲ್ಲೂಕಿನ ವರ್ತಮಾನಗಳನ್ನು ಪ್ರಸ್ತಾಪಮಾಡುತ್ತ ತಮ್ಮ ಹೆಸರನ್ನು ಹೇಳಿ, " ಏನು ಬಹಳ ಪುಕಾರುಗಳು ಬರುತ್ತಿವೆಯಲ್ಲ ಆ ಇನ್ ಸ್ಪೆಕ್ಟರ ಮೇಲೆ! ನಿಮಗೇನಾದರೂ ಅವರ ವಿಚಾರ ಗೊತ್ತೇ ? ಎಂದು ಕೇಳಿದರು ?

ರಂಗಣ್ಣ ಏನು ಮಾತನ್ನೂ ಆಡಲಿಲ್ಲ ; ಕುತೂಹಲವನ್ನೂ ತೋರಿಸಲಿಲ್ಲ. ಸರ್ಕಾರದವರೆಗೂ ತನ್ನ ಹೆಸರು ಹೋಯಿತಲ್ಲ ! ಏನೇನು ಚಾಡಿಗಳನ್ನು ಕಂಡವರೆಲ್ಲ ಹೇಳಿದ್ದಾರೆ, ಮೇಲಿನವರು ಸತ್ಯಾಂಶಗಳನ್ನು ತಿಳಿದುಕೊಳ್ಳದೆ ಏನು ದುರಭಿಪ್ರಾಯಗಳನ್ನಿಟ್ಟುಕೊಳ್ಳುತ್ತಾರೋ ಎಂಬುದಾಗಿ ಚಿಂತಿಸುತ್ತಿದ್ದನು, ದೊಡ್ಡ ಬೋರೇಗೌಡರು ತಮ್ಮ ಮಾತನ್ನು ಮುಂದುವರಿಸಿ, " ನಾನೇನನ್ನು ಹೇಳಲಿ ಸ್ವಾಮಿ ! ಆ ಕಲ್ಲೇಗೌಡ ಮತ್ತು ಕರಿಯಪ್ಪ ಮೇಲೆಲ್ಲ ತುಂಬಾ ಚಾಡಿಗಳನ್ನು ಹೇಳಿ ತನ್ನ ಹೆಸರು ಕೆಡಿಸಿ ಬಿಟ್ಟಿದ್ದಾರೆ! ' ಎಂದರು.

ನಾನು ಮಾಡಿರುವುದನ್ನು ಹೇಳಿದರೆ ನನ್ನ ಹೆಸರೇಕೆ ಕೆಡುತ್ತದೆ ಗೌಡರೇ ?

ಮಾಡಿದ್ದನ್ನು ಹೇಳುತ್ತಾರೆಯೇ ಸ್ವಾಮಿ ? ಮಾಡದೇ ಇರುವುದಕ್ಕೆ ಅವರು ಹೇಳುವುದು. ಜೊತೆಗೆ, ಮಾಡಿದ್ದಕ್ಕೆ ಬಣ್ಣ ಕಟ್ಟಿ ಇಲ್ಲದ ಆರೋಪಣೆಗಳನ್ನು ಮಾಡಿ ಹೇಳುವುದು ! ಚಾಡಿಕೋರರು ಮಾಡುವುದೇ ಅದು !

ಹೇಳಿದರೆ ಹೇಳಲಿ,! ಸರಕಾರಕ್ಕೆ ಕಣ್ಣು ಕಿವಿಗಳಿವೆ. ಸರಿಯಾಗಿ ನೋಡಿ ತಿಳಿದು ಕೊಳ್ಳುತ್ತಾರೆ, ಸರಿಯಾದವರಿಂದ ತಿಳಿದುಕೊಳ್ಳುತ್ತಾರೆ. ?