ಪುಟ:ರಂಗಣ್ಣನ ಕನಸಿನ ದಿನಗಳು.pdf/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಪಪ್ರಚಾರ

೧೮೫

ಸೇರಿಸಿ, ಎಲ್ಲರಿಗೂ ತಿಳಿವಳಿಕೆ ಕೊಟ್ಟು ಚೆನ್ನಾಗಿ ಕೆಲಸ ಮಾಡುತ್ತಿದ್ದಾರಲ್ಲ ನಿಮ್ಮ ಇನ್ಸ್ಪೆಕ್ಟರು ! ಆಕ್ಷೇಪಣೆಗೆ ಏನೂ ಕಾರಣವಿಲ್ಲವಲ್ಲ !- ಎಂದು ಅಪ್ಪಣೆ ಕೊಡಿಸಿದರು.'

ಸರಿ, ಒಂದು ಆರೋಪಣೆಯಂತೂ ಆಯಿತು. ಇನ್ನೇನಿದೆ ನನ್ನ ಮೇಲೆ ??

ಇನ್ನೇನಿದೆ ಸ್ವಾಮಿ ! ಪುಂಡ ಪೋಕರಿಗಳ ಮಾತು ! ಅವಕೈಲ್ಲ ಬೆಲೆ ಕೊಡುವುದಕ್ಕಾಗುತ್ತದೆಯೆ ??

“ನೀವು ಏತಕ್ಕೆ ಮುಚ್ಚಿಟ್ಟು ಕೊಳ್ಳುತ್ತೀರಿ? ನನಗೆ ಆಗದವರು ಅರ್ಜಿಗಳನ್ನು ಹಾಕಿದ್ದಾರೆ. ಅವು ವಿಚಾರಣೆಗೆ ಬಂದೇ ಬರುತ್ತವೆ. ದೊಡ್ಡ ಸಾಹೇಬರು ಒಂದೋ ಇಲ್ಲಿಗೆ ಬರುತ್ತಾರೆ, ಇಲ್ಲವೋ ನನ್ನನ್ನೇ ಕರೆಸಿಕೊಳ್ಳುತ್ತಾರೆ. ನನ್ನ ಸಮಜಾಯಿಷಿಗಳನ್ನು ಕೇಳಿ ತಿಳಿದುಕೊಳ್ಳುತ್ತಾರೆ.

ಅದು ಯಾರು ಸ್ವಾಮಿ ಆ ತಿಮ್ಮಮ್ಮ ಎಂಬೊ ಹೆಂಗಸು ? ಹಿಂದೆ ಆಕೆಯನ್ನು ಈ ರೇಂಜು ಬಿಟ್ಟು ವರ್ಗ ಮಾಡಿಸಿದ್ದರೆ, ಪುನಃ ನೀವು ಆಕೆಯನ್ನು ಇಲ್ಲಿಗೆ ಕರೆಸಿಕೊಳ್ಳಬೇಕು ಎಂದು ಪ್ರಯತ್ನ ನಡೆಸುತ್ತಿದ್ದೀರಂತೆ! ಆಕೆಗೂ ನಿಮಗೂ ಕಾಗದಗಳು ಓಡಾಡುತ್ತಿವೆಯಂತೆ !?

ಈ ಅಪವಾದವೊಂದನ್ನು ನನ್ನ ತಲೆಗೆ ಕಟ್ಟಿದ್ದಾರೋ !?

ಅದೇನು ಸ್ವಾಮಿ ಆ ವಿಚಾರ ? ತಾವು ದೊಡ್ಡ ಮನುಷ್ಯರು. ಅಂಥ ಕೆಟ್ಟ ಚಾಳಿ ತಮ್ಮಲ್ಲಿ ಏನೂ ಇಲ್ಲ ಎಂಬುದನ್ನು ನಾನು ಬಲ್ಲೆ, ಆದರೂ ಸ್ವಲ್ಪ ಗಲಾಟೆ ಎದ್ದಿದೆ.

ಗೌಡರೇ ! ಆಕೆ ಯಾರೋ ನನಗೆ ಗೊತ್ತಿಲ್ಲ, ಆಕೆಯ ಮುಖವನ್ನೇ ನಾನು ನೋಡಿದವನಲ್ಲ. ರಿಕಾರ್ಡು ಮೂಲಕ ಮಾತ್ರ ಆಕೆಯನ್ನು ನಾನು ಬಲ್ಲೆ. ಆ ಚರಿತ್ರೆ ನಿಮಗೆ ಪೂರ್ತಿಯಾಗಿ ಹೇಳುತ್ತೇನೆ ಕೇಳಿ : ಹಿಂದೆ ಇದೇ ಊರಿನಲ್ಲಿ ಗರ್ಲ್ಸ್ ಸ್ಕೂಲಿನಲ್ಲಿ ಆಕೆ ಇದ್ದಳಂತೆ. ಊರಿನ ಮುನಿಸಿಪಲ್ ಕೌನ್ಸಿಲರು- ಒಬ್ಬರು ದೊಡ್ಡ ಮನುಷ್ಯರು ಆಕೆಯ ರಕ್ಷಕರು, ಆಕೆಗೆ ಮೂರು ನಾಲ್ಕು ಮಕ್ಕಳು; ಎಲ್ಲವೂ ಆ ದೊಡ್ಡ