ಪುಟ:ರಂಗಣ್ಣನ ಕನಸಿನ ದಿನಗಳು.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕನಸು ದಿಟವಾಯಿತು

೧೫

ಇಷ್ಟೆಲ್ಲಾ ಹಣ ಖರ್ಚಾಯಿತು. ಇನ್ನು ಒಂದು ನೂರು ರೂಪಾಯಿ ಖರ್ಚು ಮಾಡಿದರೆ ಅವರಿಗೂ ಬಟ್ಟೆ ಬರೆ ಆಗುತ್ತದೆ' ಎಂದು ಆಕೆಯ ಒತ್ತಾಯವಾಯಿತು.

' ಕೈಯಲ್ಲಿರುವ ಹಣವೆಲ್ಲ ಖರ್ಚಾಗಿಹೋಯಿತು. ಬ್ಯಾಂಕಿನಲ್ಲಿ ಇನ್ನೂರು ರೂಪಾಯಿ ಸಾಲವಾಯಿತು. ಪ್ರಯಾಣದ ವೆಚ್ಚಗಳಿಗೆ ಮಾತ್ರ ಹಣವಿದೆ. ಹುಡುಗರಿಗೆಲ್ಲ ಆಮೇಲೆ ಬಟ್ಟೆ ಬರೆಗಳನ್ನು ಒದಗಿಸೋಣ, ಇನ್ನೆರಡು ತಿಂಗಳು ಕಾಲ ತಾಳು.'

' ಖಂಡಿತ ಆಗೋದಿಲ್ಲ. ಖರ್ಚಿನಲ್ಲಿ ಖರ್ಚು ಆಗಿ ಹೋಗಲಿ. ಇನ್ನೂ ಒಂದು ನೂರು ರೂಪಾಯಿ ಬ್ಯಾಂಕಿನಿಂದ ತನ್ನಿ : ಮುಂದೆ ನಿಮ್ಮ ಸಂಸಾರವನ್ನು ಬಹಳ ಹಿಡಿತದಿಂದ ನಡೆಸಿ ಹಣವನ್ನು ಉಳಿಸಿ ಕೊಡುತ್ತೇನೆ. ಈ ಸಾಲವೆಲ್ಲ ತೀರಿ ಹೋಗುತ್ತದೆ.'

ರಂಗಣ್ಣನು ವಿಧಿಯಿಲ್ಲದೆ ಮತ್ತೆ ಹಣವನ್ನು ತಂದು ಮಕ್ಕಳಿಗೂ ಬಟ್ಟೆ ಬರೆಗಳನ್ನು ಒದಗಿಸಿದನು. ಹೀಗೆ ಎಲ್ಲ ಏರ್ಪಾಟುಗಳೂ ಆದುವು. ತಿಮ್ಮರಾಯಪ್ಪನ ಮನೆಗೆ ಹೋಗಿ ಎಲ್ಲವನ್ನೂ ತಿಳಿಸಿದ್ದಾಯಿತು, ಅವನಿಂದ ಬೀಳ್ಕೊಂಡದ್ದಾಯಿತು.