ಪುಟ:ರಂಗಣ್ಣನ ಕನಸಿನ ದಿನಗಳು.pdf/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦೦

ರಂಗಣ್ಣನ ಕನಸಿನ ದಿನಗಳು

'ನೀವು ನಿಮ್ಮ ಸರ್ಜ್ ಸೂಟನ್ನೋ ಸಿಲ್ಕ್ ಸೂಟನ್ನೋ ಹಾಕಿಕೊಂಡು ನನ್ನ ಮುಂದೆ ಸ್ವಲ್ಪ ಇನ್ ಸ್ಪೆಕ್ಟರ್‌ ಠೀವಿ ಮಾಡಿ ! ಆಗ ನನ್ನಉತ್ತರ ದೊರೆಯುತ್ತೆ !' ಎಂದು ನಗುತ್ತಾ ಆಕೆ ಎದ್ದು ಹೋದಳು. ಹಾಲಿನಲ್ಲಿ ಗಲಾಟೆ ಮಾಡುತ್ತಿದ್ದ ಮಕ್ಕಳ ಕೈಯಿಂದ ಊದುಗೊಳವೆ ಮತ್ತು ಜಾಗಟೆಗಳನ್ನು ಕಿತ್ತು ಕೊಂಡಳು, ಗಂಡನ ರುಮಾಲನ್ನು ತಂದು ನಿಲುಕಟ್ಟಿನ ಕೊಕ್ಕೆಗೆ ಹಾಕಿದಳು.