ಪುಟ:ರಂಗಣ್ಣನ ಕನಸಿನ ದಿನಗಳು.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಜಂಬದ ಕೋಳಿ

೧೭

ಆಗಲಿ, ಚೆನ್ನಾಗಿ ಕೆಲಸಮಾಡುತ್ತಾ ಇರು. ಸಾಹೇಬರು ಪ್ರಮೋಷನ್ ಕೊಡುತ್ತಾರೆ' ಎಂದು ಮುಂತಾಗಿ ಮೇಷ್ಟ ರುಗಳನ್ನು ಏಕವಚನದಲ್ಲಿಯೇ ಆ ಇನ್ಸ್ಪೆಕ್ಟರ್‌ ಮಾತನಾಡಿಸುತ್ತಾರಲ್ಲ, ಉಪಾಧ್ಯಾಯರಿಗೆ ತಕ್ಕ ಗೌರವವನ್ನು ತೋರಿಸುವುದಿಲ್ಲವಲ್ಲ, ಜವಾನರಿಗಿಂತ ಕೀಳಾಗಿ ಹೀಗೆ ಸಂಬೋಧಿಸಬಹುದೇ? ಹಿಂದೆ ಭಾಭಾಸಾಹೇಬರು ಹಳ್ಳಿಯ ಸ್ಕೂಲುಗಳಿಗೆ ಭೇಟಿ ಕೊಡುತ್ತಿದ್ದಾಗ ಉಪಾಧ್ಯಾಯರನ್ನು - ಆಗ ಅವರಿಗೆ ತಿಂಗಳಿಗೆ ಐದೇ ರುಪಾಯಿ ಸಂಬಳ - ಬಹಳ ಮರ್ಯಾದೆಯಿಂದ ಮಾತನಾಡಿಸುತ್ತಿದ್ದರೆ೦ಬುದನ್ನು ಈಗಲೂ ಜನರು ಹೇಳುತ್ತಾರೆ '- ಎಂದು ಮೊದಲಾಗಿ ಮನಸ್ಸಿನಲ್ಲೇ ಹೇಳಿಕೊಳ್ಳುತ್ತ ಚಿಂತಿಸುತ್ತಿದ್ದನು. ಆದ್ದರಿಂದ ಆ ಉಪಾಧ್ಯಾಯರು ತನಗೆ ಕೈ ಮುಗಿದಾಗ, ' ಏನು ಮೇಷ್ಟರೆ ? ಆರೋಗ್ಯವಾಗಿದ್ದೀರಾ ? ನಿಮ್ಮ ಹಳ್ಳಿ ಇಲ್ಲಿಗೆ ಎಷ್ಟು ದೂರ ? ಪಾಠಶಾಲೆಯಲ್ಲಿ ಎಷ್ಟು ಜನ ಮಕ್ಕಳಿದ್ದಾರೆ ?' ಎಂದು ಮರ್ಯಾದೆಯಿಂದ ಮಾತನಾಡಿಸಿದನು. ಸಾಮಾನ್ಯ ಪಂಚೆಯ ಹಳೇ ಇನ್ಸ್ಪೆಕ್ಟರು ಸರ್ಜ್ ಸೂಟಿನ ಹೊಸ ಇನ್ ಸ್ಪೆಕ್ಟರನ್ನು ದುರುಗುಟ್ಟಿಕೊಂಡು ನೋಡುತ್ತ, “ಎಲ್ಲಿಯೋ ಎಳಸು. ಹೊಸದಾಗಿ ಕಣ್ಣು ಬಿಡುತ್ತಿದೆ'- ಎಂದು ಮನಸ್ಸಿನಲ್ಲಿಯೇ ಆಡಿಕೊಂಡರು.

ಸಭೆ ಸೇರಿತು. ವೇದಿಕೆಯ ಮೇಲೆ ಹೊಸಬರೂ ಹಳಬರೂ ಕುರ್ಚಿಗಳ ಮೇಲೆ ಕುಳಿತರು. ಪದ್ಧತಿಯಂತೆ ದೇವರ ಸ್ತೋತ್ರ, ಹುಡುಗಿಯರಿಂದ ಹಾಡು, ಸ್ವಾಗತ ಪದ್ಯಗಳು ಮತ್ತು ಭಾಷಣಗಳು ಆದುವು. ಹಳೆಯ ಇನ್ ಸ್ಪೆಕ್ಟ ರು ಉಪಾಧ್ಯಾಯರಿಗೆಲ್ಲ ದೊಡ್ಡದೊಂದು ಹಿತೋಪದೇಶವನ್ನು ಮಾಡಿದರು. ತರುವಾಯ ಹೊಸಬರು ಮಾತನಾಡಬೇಕೆಂದು ಉಪಾಧ್ಯಾಯರು ಪ್ರಾರ್ಥನೆ ಮಾಡಿಕೊಂಡರು. ಏನು ಮಾಡುವುದು? ಭಾಷಣಕ್ಕೆ ರಂಗಣ್ಣ ಸಿದ್ಧನಾಗಿ ಬಂದಿರಲಿಲ್ಲ. ನಾಲ್ಕು ಮಾತುಗಳನ್ನಾದರೂ ಹೇಳಬೇಕು. ಹಿಂದಿನ ಇನ್‌ಸ್ಪೆಕ್ಟರುಗಳಂತೆಯೇ ಕರುಣೆಯಿಂದ ಕಾಪಾಡಿಕೊಂಡು ಬರುವ ಭರವಸೆ ಕೊಡಬೇಕು. ಈಗ ನೋಡಿದರೇನೇ ಭಯವಾಗುತ್ತದೆ. ಮುಂದೆ ಹೇಗೆ ತಾನೆ ನಿಭಾಯಿಸುತ್ತೇವೊ ತಿಳಿಯದು :- ಎಂದು ಕುಚೋದ್ಯದ ಕಾರ್ಯದರ್ಶಿ ಕೈ ಮುಗಿದುಕೊಂಡು ಹೇಳಿದನು.

ಆಗ ರಂಗಣ್ಣನು ನಗುತ್ತ ಎದ್ದು ನಿಂತುಕೊಂಡು, 'ಉಪಾಧ್ಯಾಯರನ್ನು

2