ಪುಟ:ರಂಗಣ್ಣನ ಕನಸಿನ ದಿನಗಳು.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮

ರಂಗಣ್ಣನ ಕನಸಿನ ದಿನಗಳು

ಕಂಡರೆ ನನಗೇನ ಭಯವಾಗುತ್ತದೆ. ಅದರಲ್ಲಿಯೂ ನಿಮ್ಮ ಕಾರ್ಯ ದರ್ಶಿಗಳಂಥ ಕದೀಮರನ್ನು ನಾನು ಹೇಗೆ ತಾನೆ ನಿಭಾಯಿಸುತ್ತೇನೆಯೋ ತಿಳಿಯದು, ಸದ್ಯ ನೀವುಗಳೆಲ್ಲ ಕರುಣೆಯಿಂದ ನನ್ನನ್ನು ಕಾಪಾಡಿ ಕೊಂಡು ಬರಬೇಕ೦ದು ಅರಿಕೆ ಮಾಡಿಕೊಳ್ಳುತ್ತೇನೆ' – ಎಂದು ಹೇಳಿ ದನು. ಕೂಡಲೇ ಸಭೆಯಲ್ಲಿ ಕರತಾಡನಗಳೂ ಹರ್ಷ ಸೂಚಕ ಧ್ವನಿಗಳೂ ತುಂಬಿ ಹೋದುವು. ಬಳಿಕ ನಾಲ್ಕು ಉಪಚಾರದ ಮಾತುಗಳನ್ನು ಹೇಳಿ ತನ್ನ ಕೈಲಾದಷ್ಟು ಮಟ್ಟಿಗೆ ಉಪಾಧ್ಯಾಯರ ಹಿತರಕ್ಷಣೆಯನ್ನು ಮಾಡುವು ದಾಗಿಯೂ ಎಲ್ಲರೂ ತಂತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕತೆಯಿಂದ ಮಾಡಬೇಕೆಂದೂ ತಿಳಿಸಿದನು. * ಮುಖ್ಯವಾಗಿ, ಉಪಾಧ್ಯಾಯರಿಗೆ ಹೇಳಬೇಕಾದ ಒಂದು ಮಾತಿದೆ. ನೀವುಗಳು ಯಾರೂ ಅರ್ಜಿಗಳನ್ನು ಸಲ್ಲಿ ಸುವುದಕ್ಕಾಗಲಿ ಅಹವಾಲುಗಳನ್ನು ಹೇಳಿಕೊಳ್ಳುವುದಕ್ಕಾಗಲಿ ನಿಮ್ಮ ನಿಮ್ಮ ಹಳ್ಳಿಗಳನ್ನು ಬಿಟ್ಟು ಜನಾರ್ದನ ಪುರಕ್ಕೆ ಬರಬೇಡಿ. ಆ ಬಗ್ಗೆ ಶ್ರಮವಹಿಸಬೇಡಿ ; ಹಣ ಖರ್ಚು ಮಾಡಬೇಡಿ. ಮನೆಯ ಮುಂದೆ, ಕಚೇರಿಯ ಮುಂದೆ ನಿಂತು ಕಾಯುವುದು ಉವಾಧ್ಯಾಯರ ಗೌರವಕ್ಕೆ ಬೇಕಾದ ವಿಷಯವನ್ನು ಕಾಗದದಲ್ಲಿ ತಿಳಿಸಿ ಟಾಲಿನಲ್ಲಿ ಹಾಕಿ. ನಿಮಗೆ ಖರ್ಚೆ ನೂ ಆಗುವುದಿಲ್ಲ. ತಕ್ಕ ಪರಿಹಾರವನ್ನು ನಾನೇ ಮಾಡಿ ಕೊಡುತ್ತೇವೆ, ಸರ್ಕಿಟಿನ ಕಾಲದಲ್ಲಿ ಮತ್ತು ಉಪಾಧ್ಯಾಯರ ಸಂಘಗಳ ಸಭೆ ನಡೆಯುವ ಕಾಲದಲ್ಲಿ, ನಾವೇ ನಮ್ಮ ಯೋಗಕ್ಷೇಮ ವನ್ನು ವಿಚಾರಿಸುತ್ತೇವೆ. ಧಾರಾಳವಾಗಿ ನಮ್ಮ ಹತ್ತಿರ ನಿಮ್ಮ ಕಷ್ಟ ದುಃಖಗಳನ್ನು ಆಗ ಹೇಳಿಕೊಳ್ಳಬಹುದು. ನಮ್ಮ ಗುಮಾಸ್ತರಿಗೆ ದಕ್ಷಿಣೆ ಕೊಟ್ಟು ಅನುಗ್ರಹ ಸಂಪಾದಿಸಲು ಪ್ರಯತ್ನ ಪಡಬೇಡಿ, ಏನಿದ್ದರೂ ನೇರವಾಗಿ ನಮ್ಮ ಬಳಿಗೆ ಬಂದು ಹೇಳಿಕೊಳ್ಳಿ, ನಿಮ್ಮ ಗೌರವವನ್ನು ಕಾಪಾಡಿಕೊಳ್ಳುವ ಹಾಗೆ ವರ್ತಿಸುತ್ತೀರೆಂದು ನಂಬುತ್ತೇವೆ' ಎಂದು ಹೇಳಿ ಕುಳಿತುಕೊಂಡನು. ಹೂವು ಗಂಧಗಳ ವಿನಿಯೋಗವಾಯಿತು. ಸಭೆ ಮುಕ್ತಾಯವಾಯಿತು. ಹಳಬರು ಹೊರಟು ಹೋದರು ; ಹೊಸಬರು. ಇನ್ ಸ್ಪೆಕ್ಟರ್‌ ಸ್ಥಾನದಲ್ಲಿ ಸ್ಥಾಪಿತರಾದರು.