ಪುಟ:ರಂಗಣ್ಣನ ಕನಸಿನ ದಿನಗಳು.pdf/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೧೦

ರಂಗಣ್ಣನ ಕನಸಿನ ದಿನಗಳು

ಕಲ್ಲೇಗೌಡರೂ ಇನ್ ಸ್ಪೆಕ್ಟರಿಗೆ ಈ ಕ್ಷೇತ್ರವನ್ನೆಲ್ಲ ತೋರಿಸಿಕೊಂಡು ಬನ್ನಿ, ಯೋಗೀಶ್ವರರ ಗುಹೆಯನ್ನೂ ತೋರಿಸಿ ಸ್ಥಳ ಪುರಾಣವನ್ನು ಪರಿಚಯ ಮಾಡಿಕೊಡಿ. ಸಾಯಂಕಾಲ ನಾಲ್ಕು ಗಂಟೆಗೆ ಸಭೆಯನ್ನು ಸೇರಿಸಿ, ನಾವು ಆಗ ಬರುತ್ತೇವೆ. ಬಂದಿರುವ ಅತಿಥಿಗಳಿಗೆಲ್ಲ ಊಟ ಉಪಚಾರಗಳು ತೃಪ್ತಿಕರವಾಗಿ ನಡೆದ ಸಮಾಚಾರವನ್ನು ನಮಗೆ ತಿಳಿಸಬೇಕು ” ಎಂದು ಹೇಳಿದರು.

ರಂಗಣ್ಣನು ಉಪಾಯವಾಗಿ ಪೆನ್ಷನ್ ಕಾಗದಗಳ ಪ್ರಸ್ತಾಪ ಮಾಡಿ ಅವುಗಳನ್ನು ಮುಂದಿಟ್ಟು, ' ಗುಮಾಸ್ತ ಶಂಕರಪ್ಪ ಬಂದು ಕಾಣುತ್ತಾನೆ. ತಾವು ದೊಡ್ಡ ಮನಸ್ಸು ಮಾಡಿ ಈ ಕಾಗದಗಳಿಗೆ ರುಜು ಮೊದಲಾದುವನ್ನು ಮಾಡಬೇಕೆಂದು ಪ್ರಾರ್ಥಿಸುತ್ತೇನೆ. ಇವೆಲ್ಲಾ ತಮಗಾಗಿ ಅಲ್ಲ. ತಮ್ಮ ಸಂಸಾರ ಪೋಷಣೆಗೆ ಒದಗಿದಷ್ಟು ಹಣ ಒದಗಲಿ ?ಎಂದು ಹೇಳಿದನು. ಸ್ವಾಮಿಗಳು, ' ನೀವು ಬಹಳ ಉಪಾಯಗಾರರು ! ನಾನು ನಿಮಗೆ ಸೋತೆ' ಎಂದು ನಕ್ಕರು ಬಳಿಕ ರಂಗಣ್ಣ ಸ್ವಾಮಿಗಳಿಗೆ ನಮಸ್ಕಾರ ಮಾಡಿ ಹೊರಕ್ಕೆ ಬಂದನು. ಕಲ್ಲೇಗೌಡ ಮತ್ತು ಕರಿಯಪ್ಪ ಸ್ವಾಮಿಗಳಿಗೆ ಅಡ್ಡ ಬಿದ್ದು, ಎದ್ದು, ಕೈ ಮುಗಿದು ಹೊರಕ್ಕೆ ಬಂದರು. ಆ ಕ್ಷೇತ್ರ ಪರಿಚಯವನ್ನು ಮಾಡಿ ಕೊಡುತ್ತ ಯೋಗೀಶ್ವರರ ಗುಹೆ ಮೊದ ಲಾದುವನ್ನು ರಂಗಣ್ಣನಿಗೆ ತೋರಿಸುತ್ತ ಆ ಮುಖಂಡರು ಜೊತೆಯಲ್ಲಿ ಹೋಗುತ್ತಿದ್ದುದನ್ನು ಶಂಕರಪ್ಪನೂ, ಪೊಲೀಸ್ ಇನ್ ಸ್ಪೆಕ್ಟರೂ, ಅಮಲ್ದಾ ರರೂ ನೋಡಿ ಬೆರಗಾಗಿ ಹೋದರು ! ಅವರಿಗೆ ಆ ಮುಖಂಡರು ಅಲ್ಲಿಗೆ ಬಂದಿರುವರೆಂಬುದೇ ತಿಳಿದಿರಲಿಲ್ಲ ! ಆ ಮುಖಂಡರು ರಂಗಣ್ಣನಿಗೆ ಪರಮವೈರಿಗಳೆಂಬುದನ್ನು ಅವರೆಲ್ಲ ತಿಳಿದವರಾಗಿದ್ದರು. ಇದೇನು ! ಆ ಕ್ಷೇತ್ರ ಮಾಹಾತ್ಮೆಯೋ ! ನೂತನ ಸ್ವಾಮಿಗಳ ತಪಃ ಫಲವೋ ! ಹಿಂದೆ ಋಷ್ಯಾಶ್ರಮಗಳಲ್ಲಿ ಕಾಡುಮೃಗಗಳು ಪರಸ್ಪರ ವೈರವನ್ನು ಬಿಟ್ಟಿರುತ್ತಿದ್ದುವೆಂದು ಕೇಳಿದ್ದೆವು. ಈಗ ಪ್ರತ್ಯಕ್ಷವಾಗಿ ಇಲ್ಲಿ ದುರ್ಭರವೈರ ಶಾಂತವಾಗಿ ನಿಕಟಸ್ನೇಹ ಕಾಣುತ್ತಿದೆಯಲ್ಲ ! ಎಂದು ಆಶ್ಚರ್ಯಚಕಿತರಾದರು.

ಆ ದಿನದ ಔತಣದ ಏರ್ಪಾಟು ಚೆನ್ನಾಗಿತ್ತು. ಚಿರೋಟಿ, ಕೀರು,