ಪುಟ:ರಂಗಣ್ಣನ ಕನಸಿನ ದಿನಗಳು.pdf/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಂತವೀರಸ್ವಾಮಿಗಳ ಆತಿಥ್ಯ

೩೦೯

'ತಾವೇನೂ ಅಂತಹ ಅಪರಾಧಗಳನ್ನು ನಡೆಸಿಲ್ಲ. ಸ್ವಾರ್ಥಕ್ಕಾಗಿ ತಾವೇನೂ ಮಾಡಲಿಲ್ಲ. ಏನಿದ್ದರೂ ತಪ್ಪುಗಳು ನಮ್ಮ ಕಡೆಯವು. ಎಂದು ಕಲ್ಲೇಗೌಡರು ಹೇಳಿದರು.

'ಸಾರ್ವಜನಿಕ ಜೀವನದಲ್ಲಿ ನಾವು ನಿಸ್ಪೃಹರಾಗಿರಬೇಕು, ಪ್ರಾಮಾಣಿಕರಾಗಿರಬೇಕು ಎಂಬುದನ್ನು ನಮಗೆ ಕಲಿಸಿಕೊಟ್ಟಿರಿ, ನಾವು ನಿಮಗೆ ಕೃತಜ್ಞರಾಗಿದ್ದೇವೆ !' ಎಂದು ಕರಿಯಪ್ಪನವರು ಹೇಳಿದರು.

ಸ್ವಾಮಿಗಳು, ' ಶ್ರೇಯೋಸ್ತು ! ಶ್ರೇಯೋಸ್ತು' ಎಂದು ಹರಸಿ ಪಾರುಪತ್ಯಗಾರನನ್ನು ಕರೆದರು, ಆತ ಬಂದಮೇಲೆ, ಹಾಲೂ ಹಣ್ಣ ತೆಗೆದುಕೊಂಡು ಬಾ ' ಎಂದು ಅಪ್ಪಣೆ ಮಾಡಿದರು. ಆತ ಹೊರಟು ಹೋದಮೇಲೆ ' ಈ ಶಾಂತಿ ಸಂಧಾನಕ್ಕಾಗಿಯೇ ನಿಮ್ಮನ್ನು ಈ ಏಕಾಂತ ಸ್ಥಳಕ್ಕೆ ನಾವು ಕರೆಸಿಕೊಂಡೆವು. ನಾವು ಈ ಆಶ್ರಮ ಸ್ವೀಕಾರ ಮಾಡಿದ ಪ್ರಾರಂಭದಲ್ಲಿ ಹೀಗೆ ಶಾಂತಿ ಸಂತೋಷಗಳು ನೆಲಸಿದ್ದು ದೈವಾನುಗ್ರಹ. ಈಗ ನಮ್ಮ ದೇಶ ಒಂದು ಪರ್ವಕಾಲದಲ್ಲಿದೆ. ನಾವು ಸುಸಂಘಟಿತರಾಗಿ ದ್ವೇಷಾಸೂಯೆಗಳಿಲ್ಲದೆ ಇರಬೇಕು. ಮುಂದೆ ಪ್ರಜಾಧಿಕಾರ ಆಚರಣೆಗೆ ಬಂದಾಗ ದೇಶಾಭ್ಯುದಯವನ್ನು ಸಾಧಿವುದು ಮುಖಂಡರನ್ನು ಆಶ್ರಯಿಸಿ ಕೊಂಡಿರುತ್ತದೆ. ಆದ್ದರಿಂದ ಮುಖಂಡರು ವಿದ್ಯಾವಂತರಾಗಿ ಲೌಕಿಕ ವಿದ್ಯೆಯಲ್ಲಿ ಸಮರ್ಥರಾಗಿ ನೀತಿಯಲ್ಲಿ ಸನ್ಮಾರ್ಗಿಗಳಾಗಿ ಆಡಳಿತದಲ್ಲಿ ದಕ್ಷರಾಗಿ, ಪ್ರಜೆಗಳಿಗೆ ಆದರ್ಶ ಪ್ರಾಯರಾಗಿರಬೇಕು, ಅಧಿಕಾರಿಗಳನ್ನು ಗೌರವದಿಂದ ಕಂಡು, ಯೋಗ್ಯತೆಗೆ ಮನ್ನಣೆ ಕೊಡುತ್ತ, ಸ್ನೇಹದಿಂದ ಒಲಿಸಿಕೊಂಡು ಸುಸೂತ್ರವಾಗಿ ಕೆಲಸಗಳನ್ನು ನಡೆಸಬೇಕು' ಎಂದು ಉಪದೇಶ ಮಾಡಿದರು. ಪಾರುಪತ್ಯಗಾರನು ಹಾಲೂ ಹಣ್ಣು ಸಕ್ಕರೆಗಳನ್ನು ತಂದಿಟ್ಟು ಹೊರಟು ಹೋದನು. ಸ್ವಾಮಿಗಳ ಅಪ್ಪಣೆಯಂತೆ ಮೂರು ಲೋಟಗಳಲ್ಲಿ ಹಾಲನ್ನು ಕರಿಯಪ್ಪ ನವರು ಸುರಿದರು ; ಬಾಳೆಯ ಹಣ್ಣುಗಳ ಸಿಪ್ಪೆಗಳನ್ನು ಕಲ್ಲೇಗೌಡರು ಸುಲಿದರು.

'ನೀವು ಮೂವರೂ ಈ ಫಲಾಹಾರ ಸ್ವೀಕಾರ ಮಾಡಿರಿ' ಎಂದು ಸ್ವಾಮಿಗಳು ಅಪ್ಪಣೆ ಮಾಡಿದರು. ಅದರಂತೆ ಆ ಮೂವರೂ ತೆಗೆದುಕೊಂಡರು. ತರುವಾಯ ಸ್ವಾಮಿಗಳಿದ್ದು, ಈ ಕರಿಯಪ್ಪನವರೇ ! ನೀವೂ ಸರಕಾರ