ಪುಟ:ರಂಗಣ್ಣನ ಕನಸಿನ ದಿನಗಳು.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೪

ರಂಗಣ್ಣನ ಕನಸಿನ ದಿನಗಳು

'ಅಯ್ಯೋ ಸೋಮಿ ! ನಂಗೆ ದುಡ್ಡು ಗಿಡ್ಡು ಬೇಡ, ಇದೇನು ದೊಡ್ಡದು. ಗಾಡಿ ಜನಾರ್ದನಪುರಕ್ಕೆ ಬರ್ತಿತ್ತು. ನೀವೇನೋ ಅನಿವಾರ್ಯ ಆಗಿ ಬಂದ್ರಿ, ಸುಮ್ ಸುಮ್ಗೆ ಬಂದೀರಾ ? ಇದಕ್ಕೆಲ್ಲ ದೊಡ್ಡದು ತೆಕ್ಕೊಂಡ್ರೆ ದೇವರು ಒಳ್ಳೇದ್ ಮಾಡಾಕಿಲ್ಲ ಸೋಮಿ' ಎಂದು ಹೇಳಿ ಬಿಟ್ಟನು.