ಪುಟ:ರಂಗಣ್ಣನ ಕನಸಿನ ದಿನಗಳು.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬

ರಂಗಣ್ಣನ ಕನಸಿನ ದಿನಗಳಉ

ಶಂಕರಪ್ಪ ಒಳಗಿನ ಕೊಟಡಿಯಲ್ಲಿ ಹಳೆಯ ದಾಖಲೆಗಳನ್ನು ವಿಂಗಡಿಸುತ್ತಾ ಉತ್ತರಗಳು ಹೋಗಬೇಕಾದುವನ್ನು ಎತ್ತಿಡುತ್ತಿದ್ದಾನೆ. ರಂಗಣ್ಣ ಮುಂಭಾಗದ ಒಪ್ಪಾರದಲ್ಲಿ ಮೇಜಿನ ಮೇಲೆ ಕಚೇರಿಯ ಕಾಗದಗಳನ್ನಿಟ್ಟುಕೊಂಡು ಕುರ್ಚಿಯ ಮೇಲೆ ಕುಳಿತಿದ್ದಾನೆ. ಸಾಮಾನ್ಯವಾದೊಂದು ಸೂಟು, ತಲೆಗೆ ಸರಿಗೆ ರುಮಾಲು ಹಾಕಿಕೊಂಡಿದ್ದಾನೆ, ಆಗ ಸಮೀಪದ ಒಂದು ಹಳ್ಳಿಯಿಂದ ನಾಲ್ಕು ಜನ ಗೌಡರು ಒ೦ದು ಅರ್ಜಿಯನ್ನು ಕೈಯಲ್ಲಿ ಹಿಡಿದುಕೊಂಡು ಬಂದರು. ಪದ್ಧತಿಯಂತೆ ಎರಡೆರಡು ನಿಂಬೆಯ ಹಣ್ಣುಗಳನ್ನು ಒಪ್ಪಿಸಿ ಕೈಕಟ್ಟಿಕೊಂಡು ನಿಂತರು.

'ಯಾರಪ್ಪಾ ನೀವು ? ಯಾವ ಹಳ್ಳಿಯಿಂದ ಬಂದಿದ್ದೀರಿ ? ನಿಮಗೇನು ಬೇಕಾಗಿದೆ?' ಎಂದು ರಂಗಣ್ಣ ಕೇಳಿದನು. ಗೌಡನೊಬ್ಬನು ಅರ್ಜಿಯನ್ನು ಕೈಗೆ ಕೊಟ್ಟು, ನಮ್ಮಳ್ಳಿ ಗೊಂದು ಇನ್ ಫ್ರೆಂಟ್ರ ಇಸ್ಕೂಲ್ಕೊ ಡಬೇಕು ಮಾಸ್ವಾಮಿ !' ಎಂದನು. ರಂಗಣ್ಣನು ಅರ್ಜಿಯನ್ನು ಓದಿಕೊಂಡರೆ ಅದರಲ್ಲಿ ಗೌಡನು ಹೇಳಿದಂತೆಯೇ ಇನ್ ಫಂಟ್ರ ಸ್ಕೂಲಿಗೆ ಅರಿಕೆ ಇತ್ತು. ಇದೇನು! ಹಳ್ಳಿಯವರು ಇನ್ ಫಂಟ್ರಿ (Infantry) ಸ್ಕೂಲಿಗೆ ಅರ್ಜಿ ಕೊಡುತ್ತಾರೆ! ಪರವಾ ಇಲ್ಲ. ನಮ್ಮ ಜನರೂ ಸಹ ಸಿಪಾಯಿಗಳಾಗಬಯಸುತ್ತಾರೆ' - ಎಂದು ರಂಗಣ್ಣನು ಸಂತೋಷ ಪಟ್ಟುಕೊಂಡು, ಇನ್‌ಫೆಂಟ್ರಿ ಸ್ಕೂಲ್ ! ಇನ್ ಫಂಟ್ರಿ ಸ್ಕೂಲು ಬೇಕೇ?” ಎಂದನು.

'ಹೌದು ಸೋಮಿ|'

'ಇನ್ ಫಂಟ್ರಿ ಸ್ಕೂಲಿಗೆ ಬೇರೆ ಕಡೆ ಅರ್ಜಿ ಕೊಡಬೇಕು ಗೌಡರೆ, ನಾವು ಅದನ್ನು ಕೊಡುವುದಕ್ಕಾಗುವುದಿಲ್ಲ.'

'ಅಂಗೆಲ್ಲಾ ಹೇಳಬೇಡ್ರಿ ಬುದ್ದಿ ! ನೀವು ಕೊಡಾಕಿಲ್ಲ ಅಂದ್ರೆ ಮತ್ತಾರ್ ಕೊಟ್ಟಾರು ? ಖಂಡಿತ ಇನ್ಪೆಂಟ್ರ ಇಸ್ಕೊಲ್ ಕೊಟ್ಟೇ ತೀರಬೇಕು ತಮ್ಮ ಕಾಲ್ದಾ ಗೆ..?

'ಪ್ರೈಮರಿ ಸ್ಕೂಲು ಕೊಡುವ ವಿಚಾರ ಆಲೋಚನೆ ಮಾಡುತ್ತೇವೆ. ಇನ್‌ಫೆಂಟ್ರ ಸ್ಕೂಲನ್ನು ನಾವು ಕೊಡೋದಕ್ಕಾಗೋದಿಲ್ಲ. ?