ಪುಟ:ರಂಗಣ್ಣನ ಕನಸಿನ ದಿನಗಳು.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಷ್ಟು ರಂಗಪ್ಪ

೩೭

“ನಮ್ಗೆ ಪರ್‌ ಮರಿ ಗಿರ್‌ ಮರಿ ಇಸ್ಕೊಲ್ ಖಂಡಿತ ಬ್ಯಾಡ್ ಬುದ್ದಿ! ಅದೆಂತದೋ ಏನೋ, ನಮ್ಮ ಸರ್ಕಾರಿ ಇನ್ ಪೆಂಟ್ರ ಇಸ್ಕೊಲೇ ಆನ್ಲೈಕು, ಎಂಗಾನ ಮಾಡ್ರಲಾ.?

ಇನ್ ಫೆಂಟ್ರ ಸ್ಕೂಲಿಗೆ ಸೈನ್ಯದ ಇಲಾಖೆಗೆ ಅರ್ಜಿ ಕೊಡಬೇಕು. ನಾವು ಈ ಅರ್ಜಿ ತೆಗೆದುಕೊಳ್ಳೋದಿಲ್ಲ.”

ಅದ್ಯಾಕ್ಸಾಮಿ ನಮ್ಮಳ್ಳಿಗೆ ಮಾತ್ರ ಕೊಡಾಕಿಲ್ಲ? ಎಲ್ಲಾ ಹಳ್ಳಿಗೂ ಇನ್ ಪೆಂಟ್ರ ಇಸ್ಕೊಲ್ ಕೊಟ್ಟಿ, ನಾವೇನ್ ಸೋಮಿ ಪಾಪ ಮಾಡಿದ್ದು ? ಕಂದಾಯ ನಾವೂನೂ ಕೊಡಾಕಿಲ್ವಾ?

ರಂಗಣ್ಣನಿಗೆ ಆಗ ಜ್ಞಾನೋದಯವಾಯಿತು. ಗೌಡರು ಕೇಳುತ್ತಿರುವುದು ಇನ್ ಫೆಂಟ್ ಸ್ಕೂಲು (Infant School) ಇನ್ ಫೆಂಟ್ರಿ ಸ್ಕೂಲ್” (Irtfantry School) ಅಲ್ಲ ಎಂದು ಅರ್ಥವಾಯಿತು. ಹಳ್ಳಿ,ಯವರ ಉಚ್ಚಾರಣೆ ಹಾಗೆ ; ಉಚ್ಚಾರಣೆಯಂತೆ ಬರೆದಿದ್ದಾರೆ - ಎಂಬುದೆಲ್ಲ ಬುದ್ಧಿಗೆ ಹೊಳೆಯುತ್ತಲೂ ರಂಗಣ್ಣನಿಗೆ ಫಕ್ಕನೆ ನಗು ಬಂದು ಬಿಟ್ಟಿತು. * ನಾನೊಬ್ಬ ಮಡೆಯ ' ಎಂದುಕೊಂಡನು.

ನಿಮ್ಮ ಹಳ್ಳಿ ಇಲ್ಲಿಗೆ ಎಷ್ಟು ದೂರ ?

ಇಲ್ಲೇ ಸೊ ಮಿ ! ಆಚೆಯ ಕೆರೆ ದಾಟಿದರೆ ಒಂದು ಮೈಲಿ ಆಗುತ್ತೋ ಏನೋ ? :

ರಂಗಣ್ಣ ಶಂಕರಪ್ಪನನ್ನು ಕರೆದು ವಿಚಾರಿಸಿದನು. ಕೆಂಪಾಪುರಕ್ಕೆ ಐದು ಮೈಲಿ ದೂರ ಆಗ ಬಹುದು ; ನಾಳೆ ಅದರ ಹತ್ತಿರದ ಗುಂಡನ ಹಳ್ಳಿಯ ಸ್ಕೂಲ್ ತನಿಖೆ ಇದೆ ; ಅಲ್ಲಿಂದ ಹಾಗೆಯೇ ಹೋಗಿ ನೋಡಿಕೊಂಡು ಬರಬಹುದು ಎಂದು ಶಂಕರಪ್ಪ ಹೇಳಿದನು. ರಂಗಣ್ಣನು ಅರ್ಜಿದಾರರನ್ನು ನೋಡಿ, “ ಒಳ್ಳೆಯದು. ನಾಳೆ ಬೆಳಗ್ಗೆ ಹತ್ತೂವರೆ ಗಂಟೆಗೆ ಬರುತ್ತೆೇವೆ. ಕಟ್ಟಡ ವಗೈರೆ ಏನು ಆನುಕೂಲವಿದೆಯೋ ನೋಡಿ, ಆಮೇಲೆ ನಿಷ್ಕರ್ಷೆ ಮಾಡುತ್ತೇವೆ' ಎಂದು ಹೇಳಿದನು.

ಎಲ್ಲಾ ಅನ್ಕೂಲಾನು ಮೋಸ್ತೈತೆ ಸೋಮಿ, ಎಂಗಾನಾ ಮಾಡಿ ನಮ್ಮಳ್ಳಿಗೆ ಒಂದು ಇನ್ ಪಂಟ್ರ ಇಸ್ಕೊಲ್ ತಮ್ಮ ಕಾಲ್ದಾಗೆ ಕೊಡಬೇಕು' ಎಂದು ಅವರು ಹೇಳಿ ಕೈ ಮುಗಿದು ಹೊರಟು ಹೋದರು.