ಪುಟ:ರಂಗಣ್ಣನ ಕನಸಿನ ದಿನಗಳು.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೮

ರಂಗಣ್ಣನ ಕನಸಿನ ದಿನಗಳು

ಕೆಲವು ನಿಮಿಷಗಳ ನಂತರ ಗೊಪಾಲ ಕಾಫಿ ಮತ್ತು ಬೋಂಡಾಗಳನ್ನು ತಂದು ಮೇಜಿನ ಮೇಲಿಟ್ಟನು. 'ಶಂಕರಪ್ಪನವರಿಗೆ ಕೊಟ್ಟಿಯೋ ಇಲ್ಲವೋ ?' ಎಂದು ರಂಗಣ್ಣ ಕೇಳಿದನು.

ಅವರು ಅಡಿಗೆಯ ಮನೆಗೇನೆ ಬಂದು ತೆಕೋತಾರೆ. ಅಲ್ಲಿಯೇ ಅವರಿಗೆ ಇಟ್ಟಿದ್ದೇನೆ.'

ಮೇಷ್ಟ ರು ಯಾರಾದರೂ ಬಂದರೆ ನಾಲ್ಕು ಬೋಂಡ ಇಟ್ಟಿದ್ದೀಯೇನು ?

ಇಟ್ಟಿದ್ದೇನೆ.”

ಸರಿ, ಹೋಗು' ಎಂದು ಹೇಳಿ ರಂಗಣ್ಣನು ಉಪಾಹಾರ ಸ್ವೀಕಾರಕ್ಕೆ ತೊಡಗಿದನು.

ಉಪಹಾರ ಮುಗಿಯುವ ಹೊತ್ತಿಗೆ ದೊಡ್ಡ ಸರಿಗೆ ರುಮಾಲು, ಭಾರಿ ಸರಿಗೆ ಪಂಚೆ, ಒಳ್ಳೆಯ ಕೋಟು ಧರಿಸಿದ್ದ ಮನುಷ್ಯರೊಬ್ಬರು ಸ್ವಲ್ಪ ದೂರದಲ್ಲಿ ಬಂದು ನಿಂತರು. ರಂಗಣ್ಣ ಥಟ್ಟನೆ ಎದ್ದು ನಿಂತುಕೊಂಡು ನಮಸ್ಕಾರ ಮಾಡಿದನು. ಡಿಸ್ಟಿಕು ಬೋರ್ಡ್ ಮೆಂಬರೋ, ಪ್ರಜಾಪ್ರತಿನಿಧಿ ಸಭೆಯ ಮೆಂಬರೋ ಇರಬಹುದೆಂದು ನಿರ್ಧರಿಸಿದನು. ಹೊಸದಾಗಿ ಬಂದ ಇನ್ ಸ್ಪೆಕ್ಟರ್ ಸಾಹೇಬರನ್ನು ನೋಡಲು ಬಂದಿರುವರೆಂದು ತಿಳಿದುಕೊಂಡು, ಅವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು ಒಳ್ಳೆಯದೆಂದು, " ದಯಮಾಡಬೇಕು ? ಎಂದು ಎದುರಿಗಿದ್ದ ಕುರ್ಚಿಯನ್ನು ತೋರಿಸಿದನು.

ಪರವಾ ಇಲ್ಲ, ಬನ್ನಿ, ಕುರ್ಚಿಯ ಮೇಲೆ ಕುಳಿತುಕೊಳ್ಳಿ' ಎಂದು ಒತ್ತಾಯ ಮಾಡಿದಮೇಲೆ ಆತನು ಕುರ್ಚಿಯ ಮೇಲೆ ಕುಳಿತುಕೊಂಡನು. ಆದರೆ ಆ ಮನುಷ್ಯ ಏನೋ ಮುಜಗರ ಪಡುತ್ತಿದ್ದಂತೆ ಅವನ ಚರ್ಯೆಯಲ್ಲಿ ಕಂಡು ಬಂದಿತು. ಅಷ್ಟು ಹೊತ್ತಿಗೆ ತಟ್ಟೆಯಲ್ಲಿ ಬೊಂಡ ಮತ್ತು ಲೋಟದಲ್ಲಿ ಕಾಫಿಯನ್ನು ಗೋಪಾಲ ತಂದಿಟ್ಟನು. ತೆಗೆದುಕೊಳ್ಳಿ, ಸಂಕೋಚಪಟ್ಟು ಕೊಳ್ಳಬೇಡಿ' ಎಂದು ರಂಗಣ್ಣನು ಒತ್ತಾಯ ಮಾಡಿದನು. ಸರಿಗೆ ರುಮಾಲಿನ ಮನುಷ್ಯ ಅವುಗಳನ್ನು ಸೇವಿಸುತ್ತಾ