ಪುಟ:ರಂಗಣ್ಣನ ಕನಸಿನ ದಿನಗಳು.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೮

ರಂಗಣ್ಣನ ಕನಸಿನ ದಿನಗಳು

ತಪ್ಪಿಸುವುದು ಹೇಗೆ ? ಏನಾದರೂ ಉಪಾಯ ಮಾಡಬೇಕಲ್ಲ~ ಎಂದು ಆಲೋಚನೆ ಮಾಡುತ್ತ ಆ ಬೋರೆಯನ್ನು ಇಳಿದು ನಾಲ್ಕು ಫರ್ಲಾಂಗು ದೂರ ಹೋದನು. ಎದುರಿಗೆ ಎರಡು ಫರ್ಲಾಂಗು ದೂರದಲ್ಲಿ ಸ್ಕೂಲು ಕಟ್ಟಡ ಕ೦ಡಿತು. ಮುಂದುಗಡೆ ಹುಡುಗರು ಬಿಸಿಲಿನಲ್ಲಿ ಆಟವಾಡುತ್ತಿದ್ದರು. ಬೆಳಗಿನ ವಿರಾಮ ಕಾಲವಾದ್ದರಿಂದ ಆ ಹುಡುಗರು ಹೊರಕ್ಕೆ ಬಂದಿದ್ದರು. ಇನ್ನು ಒಂದು ಫರ್ಲಾಂಗು ಹೋದಾಗ ಸ್ಕೂಲ್ ಮುಂದಿದ್ದ ಹುಡುಗರು ಕೆಲವರು ಇನ್ಸ್ಪೆಕ್ಟರ್ ಬರುವುದನ್ನು ನೋಡಿ ಸ್ಕೂಲೊಳಕ್ಕೆ ಓಡಿಹೋಗಿ ಮೇಷ್ಟರಿಗೆ ವರ್ತಮಾನ ಕೊಟ್ಟು ಬಿಟ್ಟರು. ಕೂಡಲೇ ಸ್ಕೂಲಿನ ಗಂಟೆಯನ್ನು ಬಾರಿಸಿದ ಸದ್ದು ಕೇಳಿ ಬಂತು. ಹೊರಗಿದ್ದ ಮಕ್ಕಳೆಲ್ಲ ಬುಡು ಬುಡನೆ ಒಳಕ್ಕೆ ಹೊರಟು ಹೋದರು. ರಂಗಣ್ಣ ಕಟ್ಟಡದ ಸಮೀಪಕ್ಕೆ ಬರುವ ಹೊತ್ತಿಗೆ ಒಳಗಿನಿಂದ ನಾಲ್ಕು ಜನ ಹಳ್ಳಿಯವರು ತಲೆಗೆ ಮುಸುಕಿಟ್ಟು ಕೊಂಡು ಹೊರಕ್ಕೆ ಬಂದವರು ಓಡಿ ಹೋದರೆಂದೇ ಹೇಳಬೇಕು; ಅಷ್ಟು ವೇಗವಾಗಿ ಹೊರಟುಹೋದರು. ತಾನು ಬರುವುದನ್ನು ತಿಳಿದು ಪಲಾಯನ ಮಾಡಿದರೆಂದು ರಂಗಣ್ಣ ತಿಳಿದುಕೊಂಡು ಪಾಠಶಾಲೆಯೊಳಕ್ಕೆ ಪ್ರವೇಶಿಸಿದನು. ಮಕ್ಕಳು ಮೌನವಾಗಿ ಎದ್ದು ನಿಂತು ನಮಸ್ಕಾರ ಮಾಡಿ ಸ್ವಾಗತಿಸಿದರು. ಮೇಷ್ಟು ಸಹ ವಂದಿಸಿ ದೂರದಲ್ಲಿ ನಿಂತುಕೊಂಡನು. ರಂಗಣ್ಣನು ಮಕ್ಕಳನ್ನು ಕುಳಿತುಕೊಳ್ಳ ಹೇಳಿ ಗಡಿಯಾರವನ್ನು ನೋಡಿದನು. ಇನ್ನೂ ಆಟದ ವಿರಾಮ ಹತ್ತು ನಿಮಿಷಗಳಿದ್ದು ವು. ಅಷ್ಟರಲ್ಲಿ ಮಕ್ಕಳಿಲ್ಲ ಆಟ ಬಿಟ್ಟು ಒಳಕ್ಕೆ ಬಂದರಲ್ಲ ಎಂದು ಯೋಚಿಸಿ ಪುನಃ ಅವರನ್ನೆಲ್ಲ ಆಟಕ್ಕೆ ಕಳಿಸಿದನು. ಬಳಿಕ ಕುರ್ಚಿಯ ಮೇಲೆ ಕುಳಿತು ಮೇಜಿನ ಅರೆಯನ್ನು ಎಳೆಯಲು ಪ್ರಯತ್ನ ಪಟ್ಟಾಗ ಆ ಮೇಜು ತಿರುಗಮುರುಗಾಗಿತ್ತು ! ಸೆಳೆಖಾನೆ ಆಚೆಯ ಬದಿಗಿತ್ತು ! ಮೇಷ್ಟೆ ? ಹಾಜರಿ ಕಿಜಿಸ್ಟರ್ ಇತ್ತ ಕೊಡಿ. ಇದೇಕ ಮೇಜನ್ನು ತಿರುಗಿಸಿ ಹಾಕಿದ್ದೀರಿ? ಸರಿಯಾಗಿ ಹಾಕಿ.?

“ಸ್ವಾಮಿ ! ಸೆಳೆಖಾನೆ ಆಚೆ ಕಡೆಗೆ ಬಂದರೆ ಸ್ವಾಮಿಯವರಿಗೆ ತೊಂದರೆ, ಕುರ್ಚಿಯನ್ನು ಹಿಂದಕ್ಕೆ ಎಳೆದುಕೊಳ್ಳಬೇಕಾಗುತ್ತ, ಸ್ವಾಮಿ