ಪುಟ:ರಂಗಣ್ಣನ ಕನಸಿನ ದಿನಗಳು.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಷ್ಟ್ರ ಮುನಿಸಾಮಿ

೬೭

'ಇಸ್ಕೋಲ್ ಇನ್ಚ್ ಪೆಟ್ರಾ ! ಸರಿ ಸೋಮಿ. ಗಾಡಿ ಅತ್ತಿಕೊಂಡು ತುಳೀತಿದ್ರೆ ಅಂಡು ಉರಿಯಾಕಿಲ್ವಾ? ಏನು ಸೋಮಿ ??

ರಂಗಣ್ಣನಿಗೆ ನಗು ಬಂತು. ಕಾವ್ಯಗಳಲ್ಲಿ ಹೇಳುವಂತೆ ಸಂಸ್ಕೃತ ಪದ ಉಪಯೋಗಿಸಿದರೆ ಗಂಭೀರವಾಗಿರುತ್ತದೆ, ಮೋಹಕವಾಗಿರುತ್ತದೆ. ಹಳ್ಳಿಯವನು ಕನ್ನಡದ ಮಾತನ್ನೇ ಆಡಿದನು !

'ಉರೀತೈತಪ್ಪಾ ! ಏನು ಮಾಡೋದು ಹೇಳು ಮೇಷ್ಟು ಸರಿಯಾಗಿ ಬರುತ್ತಾರೋ ಇಲ್ಲವೋ, ಪಾಠ ಹೇಗೆ ಮಾಡ್ತಾರೋ ಏನೋ, ನೋಡ ಬೇಕೋ ಬೇಡವೋ ? ನಮ್ಮ ಕೆಲಸ ನಾವು ಮಾಡ ಬೇಡವೇ??

'ಅದ್ಯಾ ಕ್ಸೋಮಿ ನೀವು ಆ೦ಡುರಿಸಿಕೊಂಡು ಅಂಗೆಲ್ಲ ಸುತ್ತಾಡೋದು ? ಮೇಷ್ಟೆನು ಕಳ್ರಾ ? ಕೆಲಸ ಮಾಡ್ತವ್ರೆ, ನಮ್ಮೂರಾಗೂ ಒಬ್ಬ ಮೇಷ್ಟು ಆ, ಬೆಳಗಾನ ಆರು ಗಂಟೆಗೆಲ್ಲ ಬಾಕಲ್ ತಕ್ಕೊಂಡು ಕೆಲ್ಸ ಮಾಡಿ.”

ರಂಗಣ್ಣನಿಗೆ ಏನು ಉತ್ತರ ಕೊಡಬೇಕೆಂಬುದು ಗೊತ್ತಾಗಲಿಲ್ಲ. 'ಮೇಷ್ಟು ಸ್ಕೂಲಿನಲ್ಲಿದ್ದಾರೋ ?” ಎಂದು ಕೇಳಿದನು.

'ಹುಂ ಸೋಮಿ ಅವ್ರೆ. ನಡಕೊಂಡೇ ಹೋಗಿ ಸೋಮಿ ; ಬೈಸ್ಕೂಲ್ ಹೆಚ್ಚಾಗಿ ತುಳಿದ್ರೆ ದೇಹಕ್ಕೆ ಉಷ್ಣಾ ಆಗ್ತೈತೆ, ಮೈಗೊಳ್ಳೇದಲ್ಲ.' ಎಂದು ಹೇಳಿ ಗೌಡನು ಮುಂದಕ್ಕೆ ಹೊರಟನು.

ದಾರಿ ಚೆನ್ನಾಗಿಲ್ಲದ್ದರಿಂದ ರಂಗಣ್ಣ ನಡೆದುಕೊಂಡೇ ಹೋಗಬೇಕಾಯಿತು, ಆ ಮುದುಕ ಹೇಳಿದ ಬುದ್ಧಿವಾದ ರಂಗಣ್ಣನಿಗೆ ಕಣ್ಣು ಬಿಡಿಸಿತು, " ಹಳ್ಳಿಯ ಜನ ಅನ್ನುತ್ತೇವೆ. ಅವರಲ್ಲಿ ಎಷ್ಟು ವಿವೇಕವಿದೆ ? ಮೇಷ್ಟೆನು ಕಳ್ರಾ? ಎಂದು ನನಗೆ ಕೇಳಿದನಲ್ಲಾ. ನಮ್ಮ ಮನಸ್ಸಿನಲ್ಲಿರೋದು ಅದೇ ಭಾವನೆ ತಾನೆ ? ಮನಕ್ಕೆ ಮನವೇ ಸಾಕ್ಷಿ. ಉಪಾಧ್ಯಾಯರನ್ನು ಗೌರವದಿಂದ ಕಾಣಬೇಕು ಎಂದು ಉಪದೇಶ ಮಾಡುವ ನಾನು ಕಳ್ಳತನದ ಪತ್ತೆಗೆ ಹೊರಟ ಪೊಲೀಸಿನವನಾದೆ. ಇದು ನೀಚ ಕೆಲಸ, ಆದರೆ ಕೆಲವರು ಕಳ್ಳಾಟ ಆಡುತ್ತಾರಲ್ಲ, ಅದನ್ನು