ಪುಟ:ರಂಗಣ್ಣನ ಕನಸಿನ ದಿನಗಳು.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೬

ರಂಗಣ್ಣನ ಕನಸಿನ ದಿನಗಳು

ಗಳನ್ನು ಇನ್‌ಸ್ಪೆಕ್ಟರಿಗಾಗಿ ಶ್ಯಾನುಭೋಗರು ಮಾಡಿಸಿದ್ದರು. ಅಡಿಗೆ ಚೆನ್ನಾಗಿತ್ತು. ಊಟ ಮಾಡುತ್ತಿದಾಗ ರಂಗಣ್ಣ ಮೇಷ್ಟರ ಮಾತೆತ್ತಿ ಆತ ಹಜಾಮರ ಜಾಕಿ ಎಂಬುದು ತಿಳಿದೂ ನಿಮ್ಮ ಆಕ್ಷೇಪಣೆ ಇಲ್ಲದಿರುವುದು ಆಶ್ಚರ್ಯ' ಎಂದು ಹೇಳಿದನು.

'ಸ್ವಾಮಿ.! ಈಗಿನ ಕಾಲವೇ ಹೀಗೆ, ನಾನಾ ಜಾತಿಯವರು, ಆದಿಕರ್ಣಾಟಕರು ಮೊದಲಾದವರೆಲ್ಲ ಸರ್ಕಾರದ ನೌಕರಿಯಲ್ಲಿದ್ದಾರೆ, ಉಪಾಧ್ಯಾಯರು, ಅಮಲ್ದಾರರು, ಡೆಪ್ಯುಟಿ ಕಮಾಷನರು, ಕೌನ್ಸಿಲರು, ಎಲ್ಲರೂ ನಾನಾ ಜಾತಿ, ಆದಿಕರ್ಣಾಟಕರೂ ನಾಳೆ ಕೌನ್ಸಿಲರು, ದಿವಾನರು ಆಗುತ್ತಾರೆ, ಏನು ಮಾಡುವುದು ಸ್ವಾಮಿ ? ರೈಲಿನಲ್ಲಿ, ಬಸ್ಸಿನಲ್ಲಿ ಯಾವ ಜಾತಿಯವರು ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ ? ಎಂದು ಈಗ ನಾವು ಹೇಳುತ್ತೇವೆಯೇ ? ಕೇಳಿದರೆ ತಾನೆ ಏನು ? ಪರಿಹಾರವಿದೆಯೆ? ಕಾಲಕ್ಕೆ ತಕ್ಕ ಹಾಗೆ ಹೊಂದಿಕೊಂಡು ಹೋಗಬೇಕು ಸ್ವಾಮಿ, ಕೆಲವು ಸ್ಕೂಲುಗಳಲ್ಲಿ ಆದಿ ಕರ್ಣಾಟ ಕರು ಮೇಷ್ಟರಿದ್ದಾರೆ. ತಮಗೇ ಗೊತ್ತಿದೆಯಲ್ಲ.)

'ಶ್ಯಾನುಭೋಗರೇ ! ನಿಮ್ಮಷ್ಟು ತಿಳಿವಳಿಕೆ, ಸೈರಣೆ ನಮ್ಮ ಜನಗಳಿಗೆಲ್ಲ ಇದ್ದರೆ ದೇಶ ಉದ್ದಾರವಾದೀತು.

'ಎಲ್ಲರಿಗೂ ತಿಳಿವಳಿಕೆ ಬರುತ್ತದೆ ಸ್ವಾಮಿ. ತಾನಾಗಿ ಒಳಗಿಂದ ಬರದಿದ್ದರೆ ಹೊರಗಿಂದ ಬಲಾತ್ಕರ ಮಾಡಿ ತುಂಬುತ್ತಾರೆ.'

'ಈಗ ಆ ಮೇಷ್ಟು ಆ ಕೆಲಸ ಮಾಡುತ್ತಿರುವುದು ನಮ್ಮ ಇಲಾಖೆಯ ರೂಲ್ಸಿಗೆ ವಿರುದ್ಧ, ಮೇಷ್ಟ್ರ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಿಡಿ ಎಂದು ಹೇಳಿದ್ದೇನೆ'

'ಇದೇನು ಸ್ವಾಮಿ ನಿಮ್ಮ ಇಲಾಖೆಯ ರೂಲ್ಕು ! ಜೀವನಕ್ಕೆ ಸಾಕಾಗುವಷ್ಟು ಸಂಬಳ ಕೊಡುವುದಿಲ್ಲ, ಏನೂ ಇಲ್ಲ. ಹದಿನೈದು ರೂಪಾಯಿಗಳಲ್ಲಿ ಒಬ್ಬನ ಜೀವನ ನಡೆಯುವುದೇ ಕಷ್ಟ. ಇನ್ನು ಹೆಂಡತಿ ಮಕ್ಕಳನ್ನು ಕಟ್ಟಿಕೊಂಡವರು ಹೇಗೆ ಜೀವನ ಮಾಡಬೇಕು ? ಏನೋ ತನ್ನ ಕಸುಬಿನಿಂದ ಎರಡು ರೂಪಾಯಿ ಸಂಪಾದಿಸಿಕೊಂಡರೆ ರೂಲ್ಸು ಮಾತು ಆಡುತ್ತೀರಿ. ಈಗ ಆ ಮೇಷ್ಟರಿಗೇನು, ಆ ಕಟ್ಟಡ ಅವನು