ಪುಟ:ರಂಗಣ್ಣನ ಕನಸಿನ ದಿನಗಳು.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಷ್ಟ್ರ ಮುನಿಸಾಮಿ

೭೫

ಹಳ್ಳಿಯವರ
'ಸ್ಕೂಲಿಗೆ ಬೇರೆ ಕಟ್ಟಡ ಇದೆಯೇ ಮೇಷ್ಟೆ ? 'ಅದೇ ಬಂಡಾಟ ಸಾರ್ ಈ ಹಳ್ಳಿಲಿ, ಬೇರೆ ಕಟ್ಟಡ ಇಲ್ಲ. ಪಂಚಾಯ್ತಿ ಕಟ್ಟಡ ಆಗಿಲ್ಲ, ಪಂಚಾಯ್ತಿಯವರನ್ನು ಕೇಳಿದರೆ ಎಂಗಾನಾ ಮಾಡಿಕೊಂಡು ಹೋಗು, ಇ ಸ್ಕೂಲಿಗೆ ಕಟ್ಟಡ ಇಲ್ಲ- ಅನ್ನುತ್ತಾರೆ'

ನೀವು ಕ್ಷೌರದವರಾಗಿ ಮೇಷ್ಟರಾಗಿದ್ದೀರಲ್ಲ. ಆಕ್ಷೇಪಣೆ ಇಲ್ಲವೇ ?

'ನಾನು ಅವರ ಮಕ್ಕಳನ್ನು ಮುಟ್ಟೋದಿಲ್ಲ ಸಾರ್. ಜೊತೆಗೆ ನನ್ನ ಉಡುಪು, ಠೀಕು ನೋಡಿ ಅವರೇ ಮೆಚ್ಚು ಕೋತಾರೆ ನಾನೂ ಚೊಕ್ಕಟವಾಗಿದ್ದೇನೆ. ಈ ಸ್ಕೂಲ್ ಕಟ್ಟಡ ಹೇಗಿದೆ ನೋಡಿ ಸಾರ್ ! ಎಷ್ಟು ಚೆನ್ನಾಗಿಟ್ಟು ಕೊಂಡಿದ್ದೇನೆ ! ತಮ್ಮ ಶಿಷ್ಯ ! ?

'ಅದಕ್ಕೇನೆ ಪುಕಾರು ಬರಲಿಲ್ಲ ಅಂತ ಕಾಣುತ್ತೆ.?

'ಪಂಚಾಯ್ತಿ ಮೆಂಬರುಗಳಿಗೆಲ್ಲ ಪುಕಸಟ್ಟೆ ಕ್ಷೌರ ಮಾಡುತ್ತೇನೆ ಸಾರ್ ! ಪುಕಾರು ಯಾಕೆ ಮಾಡ್ತಾರೆ ಅವರ ಮಕ್ಕಳಿಗೆಲ್ಲ ಚೆನ್ನಾಗಿ ಪಾಠ ಹೇಳಿಕೊಟ್ಟಿದ್ದೇನೆ. ನನ್ನ ಕ೦ಡರೆ ಈ ಊರಿನವರಿಗೆ ವಿಶ್ವಾಸ ಇದೆ ಸಾರ್.'

ಈ ಮಾತುಗಳು ಮುಗಿಯುವ ಹೊತ್ತಿಗೆ ರಂಗಣ್ಣನಿಗೆ ದಿವ್ಯವಾದ ಕ್ರಾಪ್' ಕಟ್ಟೂ ಕ್ಷೌರವೂ ಆದುವು. ಕೂದಲಿಗೆ ಸರಿಮಳಿಸುವ ಕೂದಲೆಣ್ಣೆ, ಕೆನ್ನೆಗಳಿಗೆ ಸ್ಪೋ ಹಚ್ಚಿ ಮುನಿಸಾಮಿ ರಂಗ್ ಮಾಡಿದನು ! ಶ್ಯಾನುಭೋಗರು ಬಂದು ಕೈ ಮುಗಿದರು, " ಏನು ಶ್ಯಾನುಭೋಗರೇ, ಸ್ನಾನ ಮಾಡ ಬೇಕಲ್ಲ, ನೀರು ಕಾಸಿಟ್ಟಿದೀರಾ ? ?

'ಕಾಸಿಟ್ಟ ದೇನೆ ಸ್ವಾಮಿ. ದಯಮಾಡಬೇಕು. ನಮ್ಮ ಹಳ್ಳಿಯಲ್ಲಿ ತಾವು ಮೊಕ್ಕಾಂ ಮಾಡಿದ್ದು ಬಹಳ ಸಂತೋಷ, ಬಡವರ ಮನೆಗೆ ನೀವೇಕೆ ಬಂದೀರಿ ?'

ರಂಗಣ್ಣ ಶ್ಯಾನುಭೋಗರ ಮನೆಗೆ ಹೋಗಿ ಸ್ನಾನಾದಿಗಳನ್ನು ತೀರಿಸಿಕೊಂಡನು. ಆ ಮೇಲೆ ಊಟ. ಆ ದಿವಸ ತೊವ್ವೆ, ಮಜ್ಜಿಗೆ ಹುಳಿ, ಆಂಬೊಡೆ, ನಿಂಬೆಹಣ್ಣಿನ ಚಿತ್ರಾನ್ನ, ರವೆ ಪಾಯಸ- ಇವು