ಪುಟ:ರಘುಕುಲ ಚರಿತಂ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Fಳಿ ಶ್ರೀ ಶಾ ರ ದ . ತಪಸ್ವಿಗಳು-ಶತ್ರುಘ್ರನನ್ನು ಬಹಳವಾಗಿ ಕೊಂಡಾಡಿದರು, ಹೊಗಳಿಕೆಯು ಬೇಕಿಲ್ಲದೆ ನಾಚಿಕೆಯಿಂದ ತಗ್ಗಿಸಿದ ಶತ್ರುಘ್ನನ ವಿಕ್ರಮ ಭೂಷಣವಾದ ತಿರವು ಶAಭಿಸುತಲಿದ್ದಿತು, ಮಹಾ ವೀರರಿಗೆ ಇಂತಹ ನಾಚಿಕೆಯೇ ತೋwವಹವಲ್ಲವೆ ? ಬಳಿಕ ವಿಷಯಗಳಲ್ಲಿ ನಿಸ್ಸಹನಾಗಿ, ಸರಿ ವದ ಆಕಾರದಿಂದಸವ ವಿಕ್ರಮ ಭೂಷಣನಾದ ಶತ್ರುಘ್ರನು- ಯಮುನಾ ನದಿಯ ದಡದಲ್ಲಿ ಮಧುರೆಯೆಂಬೊಂದು ನಗರವನ್ನು ಕಟ್ಟಿದನು, ಆ ಮಧು ರಾನಗರಿಯು - ಮೇಲಿನಿಸಿದ ದೊರೆಯಿಂದ ಬೆಳಗುತ ಪುರಜನರ ಸಂಪದ ಗಳಿ೦ದ, ಸ್ವರ್ಗದಲ್ಲಿ ಹಿಡಿಯದೆ ಹೆಚ್ಚಿದ ಜನರಿಂದ ಬೇರೊಂದಾಗಿ ನೆಲೆ ಗೊಂಡ ನಗರದಂತೆ ಶೋಭಿಸುತಲಿದ್ದಿತು, ಆ ನಗರದಲ್ಲಿ ಒಂದುವೇಳ ಶತ್ರುಘ್ನನು- ಅರಮನೆಯ ಚಂದ್ರ ಶಾಲೆಯಲ್ಲಿ ನಿಂತು, ಜಕ್ಕವಕ್ಕಿಗಳಿಂದ ಬಲುಆಂದವಾಗಿರುವ ಕಾಳಿಂದಿಯ ಹೊಳೆಯನ್ನು ನೋಡಿದನು, ಜಡ ಬಂಗಾರದಿಂದೊಡಗೂಡಿದ ಭೂದೇವಿಯು ಹರಳಿನಂತಿರುವುದೆಂದು ಆನೂ ಬಿಸಿದನು. - ದಶರಥನಿಗೂ, ಜನಕಭೂಪತಿಗೂ ಸಖನೆನಿಸಿ, ಮಂತ್ರ ದ್ರನೆನಿಸಿರುವ ವಾಲ್ಮೀಕಿಯು - ವೈದೇಹಿಯ ಯಮಳರಾದ ತರಳರಿಗೆ ಜನಕ ದಕಶನರಲ್ಲಿ ತನಗಿರುವ ಪ್ರೀತಿಗನುಗುಣವಾಗಿ ಜಾತಕರವೇ ಮೊದ ಲಾದ ಸಂಸ್ಕಾರಗಳನ್ನು ವಿಧಿ ಪ್ರಕಾರವಾಗಿ ನೆರವೇರಿಸಿದನು. ಆದಿ ಕವಿ ಯಾದ ವಾಲ್ಮೀಕಿಯು – ಅಭಿಮಂತ್ರಿಸಿದ ಕುಶಗಳಿಂದಲೂ, ಲವಗಳಿ೦ ದಲೂ (ಗೋವಾಲ) ಆ ಶಿಶುಗಳಿಗೆ ಗರ್ಭೋಪದ್ರವವನ್ನು ಪರಿಹರಿಸಿದ್ದ ನಾದುದರಿಂದ ಕುಶಲವರೆಂದೇ ಕ್ರಮವಾಗಿ ನಾಮಕರಣವನ್ನು ಮಾಡಿ ದ್ದನು, ಆ ಮೇಲೆ ಅವರಿಗೆ ಸಾಂಗವಾಗಿ ವೇದಾಧ್ಯಯನವನ್ನು ಮಾಡಿ ಸಿದನು, ಅದುವರೆಗೆ ಆ ಬಾಲಕರು ಬಾಲ್ಯವನ್ನು ದಾಟಿದರು. ಬಳಿಕ ಕವಿಯು - ಕವಿಗಳಿಗೆ ಮೊದಲನೆಯ ಮಾರ್ಗವೆನಿಸಿ ತನ್ನ ಕೃತಿಯಾಗಿ ರುವ ರಾಮಾಯಣ ಕಾವ್ಯವನ್ನು ಸಾರಾಯಣಮಾಡಿಸಿದನು. ತರುವಾಯ ಆ ಕುಮಾರರು- ತಮ್ಮ ತಾಯಿಯ ಬಳಿಯಲ್ಲಿ ಕಾವ್ಯ ರೂಪದಿಂದಿರುವ ರಾಮನ ಮಧುರವಾದ ವೃತ್ತಾಂತವನ್ನು ಇಂಪಾಗಿ ಹಾಡುತ್ತಾ, ಆಕೆಗೆ ಆತನ ಆಗಲಿಕೆಯಿಂದುಂಟಾಗಿದ್ದ ಮನೋವ್ಯಥೆ