ಪುಟ:ರಜನೀ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

26 ರಜನೀ ಆಗ ಐಶಿಕ ಅಂದರೆ ಈಶ್ವರ ಸಂಬಂಧವಾದ ನಿಯಮವು ವಿಚಿತ್ರವಾದುದೆಂದು ನಾನು ಅರಿತಿರಲಿಲ್ಲ. ಮನುಷ್ಯನ ಬುದ್ದಿಗೆ ಅತೀತವಾದುದು, ನಾವು ಯಾವುದನ್ನು ದಯೆಯೆಂದು ಹೇಳುತ್ತೇವೋ ಈಶ್ವರನ ಅನಂತವಾದ ಜ್ಞಾನದಲ್ಲಿ ಅದು ದಯೆಯೆಂದು ಆಗಲಾರದು. ನಾವು ಯಾವುದನ್ನು ಪೀಡನವೆಂದು ಹೇಳುತ್ತೇವೋ ಈಶ್ವರನ ಅನಂತ ವಾದ ಜ್ಞಾನದಲ್ಲಿ ಅದು ಪೀಡನವಲ್ಲ. ಆಗ ಈ ಸಂಸಾರದಲ್ಲಿರುವ ಅನಂತವಾದ ಚಕ್ರವು ದಯಾದಾಕ್ಷಿಣ್ಯ ಶೂನ್ಯವಾದುದೆಂತಲೂ ಆ ಚಕ್ರವು ನಿಯಮಿತವಾದ ಮಾರ್ಗದಲ್ಲಿ ಅನತಿಕ್ಷುಣ್ಣವಾದ ರೇಖೆಯಲ್ಲಿ ಅಹರಹ ತಿರುಗುತಲಿದೆ ಎಂತಲೂ ಅದರ ದಾರುಣವಾದ ವೇಗವಾದ ಮಾರ್ಗಕ್ಕೆ ಸಿಕ್ಕಿದವನು ಅಂಧನಾಗಲಿ, ಖಂಜನಾಗಲಿ, ಆರ್ಶ ನಾಗಲಿ, ಯಾರೇ ಆಗಲಿ, ಅವನು ಸಿಕ್ಕಿ ದಮಾತ್ರಕ್ಕೆ ಪುಡಿಚೂರ್ಣವಾಗಿ ಹೋಗ ವನೆಂತಲೂ ತಿಳಿದಿರಲಿಲ್ಲ. ನಾನು ಅಂಧಳಾದ ನಿಸ್ಸಹಾಯಕಳೆಂದು ಗೊತ್ತಿದ್ದು ಅನಂತವಾದ ಸಂಸಾರದ ಚಕ್ರದ ಪಧವನ್ನು ಬಿಟ್ಟು ಹೊರೆಟಿನೇತಕ್ಕೆ ? ನಾನು ಹೀರಾಲಾಲನ ಜತೇಲಿ ಪ್ರಶಸ್ತವಾದ ರಾಜಮಾರ್ಗದಲ್ಲಿ ಹೊರಟೆನು. ಅವನ ಪದಶಬ್ದವನ್ನು ಅನುಸರಣಮಾಡಿಕೊಂಡು ನಡೆದೆನು. ಎಲ್ಲಿಯದೋ ಒಂದು ಘಡಿಯಾರವು ಒಂದು ಘಂಟೆ ಹೊಡೆಯಿತು. ಮಾರ್ಗೋದಲ್ಲಿ ಯಾರೂ ಇಲ್ಲ. ಯಾವ ಶಬ್ದವೂ ಇಲ್ಲ. ಒಂದೆರಡು ಗಡಿ'ಗಳು ಹೋಗುವ ಶಬ್ದ, ಒಬ್ಬಿಬ್ಬರು ಕುಡಿದು ಜ್ಞಾನತಪ್ಪಿದ ಹೆಂಗಸರ ಅಸಂಬದ್ಧವಾದ ಗೀತಶಬ್ದ - ನಾನು ಇದ್ದಕ್ಕಿದ್ದ ಹಾಗೆ ಹೀರಾ ಲಾಲನನ್ನು ಕುರಿತು, ಹೀರಾಲಾಲ ಬಾಬು ! ನಿನ್ನ ಮೈಯಲ್ಲಿ ಎಂತಹ ಬಲವುಂಟು ? ಎಂದು ಕೇಳಿದೆ. ಹೀರಾಲಾಲನು ವಿಸ್ಮಿತನಾಗಿ, ಏತಕ್ಕೆ ? ಎಂದು ಕೇಳಿದನು. ನಾನು-ಸುಮ್ಮನೆ ಕೇಳುತ್ತೇನೆ. ಹೀರಾಲಾಲ-ಶಕ್ತಿಯು ಕಡಮೆಯಾದುದಲ್ಲ. ನಾನು ನಿನ್ನ ಕೈಯಲ್ಲಿರುವ ಕೋಲು ಯಾತರದು ? ಹೀರಾಲಾಲ-ತಾಳೆ ಮರದ ಕೋಲು. ನಾನು-ಅದನ್ನು ಮುರಿಯಬಲ್ಲೆಯಾ ? ಹೀರಾಲಾಲ -ಸಾಧ್ಯವೆ ? ಯಾರಿಂದಲೂ ಸಾಧ್ಯವಿಲ್ಲ. ನಾನು-ನನ್ನ ಕೈಗೆ ಕೊಡು, ನೋಡೋಣ,