ಸೌಮ್ಯ:-(ಆತುರದಿಂದ) ಯುವಾನನೇ ಏನಾಗಿದೆ ? ಇದೇಕೆ ಹೀಗೆ ಆರ್ತನಾಗಿರುತ್ತೀಯೆ? ಬೇಗ ಹೇಳು.
ಯುವಾನ:-ಕುಮಾರನಿಗೂ ಮತ್ತು ನಮಗೂ ಗ್ರಹಚಾರವು ಕ್ರೂರವಾಗಿ ತಿರುಗಿದೆ. ಪ್ರತಿಯೊಂದು ವಿಚಾರವೂ ವಿಷಮವಾಗಿಯೇ ಪರಿಣಮಿಸಿರುತ್ತದೆ. ಸಾಲದುದಕ್ಕೆ ಈ ನಟ್ಟಿರುಳಲ್ಲಿ ನೀವು ಇಲ್ಲಿರುವುದಂತೂ ಹೇಳಿ ಕೇಳುವಂತೆಯೇ ಇಲ್ಲ.
ರಮಾ:-- (ಭಯಚಕಿತನಾಗಿ), ಭಗವತ್ಸಹಾಯವಿದ್ದರೆ, ಎಲ್ಲವೂ ಸುಖರೂಪವಾಗಿಯೇ ತಿರುಗುವುವು. ಅದಿಲ್ಲವಾದರೆ ಯಾರು ಹೇಗಿ
ದ್ದರೂ ಕಷ್ಟವು ತಪ್ಪಿದುದಲ್ಲ. ಅದಿರಲಿ; ವಿಚಾರವೇನೆಂಬುದನ್ನು ಸ್ಪಷ್ಟಪಡಿಸು,
ಯುವಾನ:-(ಕಂಪಿತಸ್ವರದಿಂದ) ಕುಮಾರ ! ಏನು ಹೇಳಲಿ ? ನಾನು ನಾಳೆಯ ಪಾಠವನ್ನು ಮನನಮಾಡಿಕೊಳ್ಳುತ್ತ ನನ್ನ ಕಿರುಮನೆಯಲ್ಲಿ ಒಳಗೆ ಕುಳಿತಿದ್ದೆನು, ಗುರುಗಳು ನಳ, ಕಳಿಂಗ, ರವಿವರ್ಮರೊಡನೆ ಅಲ್ಲಿಗೆ ಬಂದು ನನ್ನನ್ನು ಕೂಗಿದರು, ನಾನು ಸಂಗತಿಯೇನೆಂಬುದನ್ನು ತಿಳಿಯದೆ, ಭಯ ಕೌತುಕದಿ೦ದ ಗುರುಗಳ ಮುಂದೆ
ಬಂದು ನಿಂತೆನು.
ರಮಾ:-(ಆತುರದಿಂದ) ಆಮೇಲಾಮೇಲೆ?
ಯುವಾನ:- ಆ ಬಳಿಕ, ಅವರು ನನ್ನನ್ನು ಕುರಿತು...“ರಮಾ ನಂದನೆಲ್ಲಿ ಹೋದನು? ಉಳಿದವರೆಲ್ಲಿರುವರು?” ಎಂದು ಕೇಳಿದರು. ನಾನು ಯಾರು ಎಲ್ಲಿ ಹೋಗಿರುವರೋ ನನಗೆ ತಿಳಿಯದೆಂದು ಮೆಲ್ಲನೆ ಹೇಳಿದೆನು, ಗುರುಗಳು ಮತ್ತೂ ಆಗ್ರಹದಿಂದ ನನ್ನನ್ನೂ ಹಿಂದೆಯೇ ಬರುವಂತೆ ಹೇಳಿ, ರವಿವರ್ಮಾದಿಗಳೊಡನೆ' ನಿನ್ನ ಕಿರುಮನೆಯ ಕಡೆಗೆ ನಡೆದರು, ನಾನೂ ಕೂಡ ಮರುಮಾತಿಲ್ಲದೆ ಅವರ ಹಿಂದೆಯೇ ಹೋದೆನು ?
ರಮಾ:-ಆ ಬಳಿಕ?
ಪುಟ:ರಮಾನಂದ.djvu/೧೦೧
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೮೨
ಸತೀಹಿತೈಣೀ