ಪುಟ:ರಮಾನಂದ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ WW ರವಿ:- ಬಾರಯ್ಯ, ರಮಾನಂದ! ಇದೇನಿ೦ದು ಇಷ್ಟು ವಿಳಂಬ ಮೂಡಿದೆ? ರಮಾ:- ( ನಿಯತಸ್ಥಾನದಲ್ಲಿ ನಿಂತು ಕಿರುನಗೆಯಿಂದ ) :« ಏನಣ್ಣ? ವಿಳಂಬವೇಕೆ೦ದೆಯ? ಸಂಶಯವಿಚಾರದಲ್ಲಿದ್ದ ಅಣ್ಣನು, ವಿಚಾರ ವಿಮರ್ಶೆಯಿಂದ ಚಾಂಚಲ್ಯವನ್ನು ಳಿದು, ಕರ್ತವ್ಯವನ್ನು ಗಮನಿಸಿದ 5 ನೆಂಬ ಸಂತೋಷದಿಂದ, ವಿದ್ಯಾ ಪ್ರಭಾವವರ್ಣನೆಯಲ್ಲಿ ಸ್ವಲ್ಪಮಾ ತ್ರದ ಹೊತ್ತನ್ನು ಕಳೆದೆನು.” ರವಿ:- ಮಹನೀಯರ ಸಂಗತಿಯೇ ಶ್ರೇಯಸ್ಕರವಲ್ಲವೆ ? ಮಹಾತ್ಮನಾದ ನಿನ್ನ ಸಹವಾಸ-ಸದುಪದೇಶ ಬಲಗಳಿ೦ದ ಸ೦ದೇಹ ನಿವೃತ್ತಿಯೂ, ವಿದ್ಯಾಭ್ಯಾಸದಲ್ಲಿ ಆಸಕ್ತಿಯ ಉಂಟಾಗುವುದರಲ್ಲಿ 10 ಆಶ್ಚರ್ಯವೇನು ? ರಮಾ:-ನನ್ನಲ್ಲಿ ಅಷ್ಟರ ಮಹಾತ್ಮಿಯೇನಿರುವುದು? ಹೀಗೇಕೆ ಹೇಳುವೆ ? ರವಿ:- ಏನು-ಏಕೆ ಎಂದರೆ, ನಿನ್ನ೦ತೆ ಸರಸಪ್ರಸಂಗದ ಕೌಶ ಲ್ಯವು ನಮ್ಮಂತ ಹರಿಗೆ ಉಂಟಾಗುವುದೇನು? ಹೇಳು, ನೋಡುವ, 15 ರಮಾ:- ನನ್ನಲ್ಲಿ ಮಾತ್ರವೇ ಇದೆಯೆಂದು ಹೇಳಬಾರದು. ಅಭ್ಯಾಸ ಮಾಡುವವರೆಲ್ಲರಿಗೂ ಉಂಟಾಗುವುದು. - ರವಿ:- ( ತಲೆಯನ್ನಲ್ಲಾಡಿಸಿ ) ಅದೆಲ್ಲಾ ಸುಳ್ಳು ಮಾತು. ಇದಕ್ಕೆ ನೀನೊಬ್ಬನೇ ಪಾತ್ರನು. ರಮಾ:- ಅದೇಕೆ ಹಾಗೆ ಹೇಳುವಿರಿ ? 20 ರವಿ:- ಅದೇಕೆ೦ದರೆ- ಗುರುಗಳ ಪೂರ್ಣಾನುರಾಗಕ್ಕೆ ಪಾತ್ರನಾದವನು ನೀನೊಬ್ಬನೇ, ಆದುದರಿಂದಲೇ, ಸರಸ ಪ್ರಸಂಗದ ಆರ್ಹತೆಯು ನಿನ್ನಲ್ಲಿ ಮಾತ್ರವೇ ಇರುವುದೆಂದನು. ವಿದ್ಯಾ:- ( ನಕ್ಕು ) ಅಯ್ಯ ಪಂಚ ಭೂತಾತ್ಮಕವಾದ ಈ ದೇಹವು, ಮುಖ್ಯವಾಗಿ ಸತ್ವಗುಣಾತ್ಮಕವಾದ ಸೃಥ್ವಿಯನ್ನೂ, 25