ವಿಷಯಕ್ಕೆ ಹೋಗು

ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦ ರಾಜಾ ರಾಮಮೋಹನರಾಯರ ಜೀವಿತಚರಿತ್ರ ಆಗಾಗ್ಗೆ ಕಣ್ಣುಗಳನ್ನು ಮುಚ್ಚಿ ಕೊಳ್ಳುತ್ತಲಿದ್ದನು. ಈ ದಿನದ ಹಗಲೆಲ್ಲವೂ ಆತನಿಗೆ ಕಷ್ಟ ವಾಗಿಯೇ ಇದ್ದಿತು, ತನ್ನ ಬಳಿಯಲ್ಲಿ ಇಂಥವರಿರುವರೆಂಬುದೇ ಆತನಿಗೆ ತಿಳಿಯದು, ಆದರೂ ಕೂಗಿ ಹೇಳಿದಾಗ ಮಾತ್ರ ಜ್ಞಾನವನ್ನು ತಂದುಕೊಳ್ಳುತ್ತಿದ್ದನು. ಇದು ನನಗೆ ಭಯಾನ ಹವಾಗಿ ತೋರಿದ್ದರಿಂದ ನನ್ನ ಮನಸ್ಸಿನಲ್ಲಿ ಒಂದೊಂದು ವೇಳೆ ಆತನಿಗೆ ಆರೋಗ್ಯವುಂಟಾಗ ಬಹುದೆಂಬ ಆಶೆಯೂ, ಒಂದು ವೇಳೆ ಮರಣವು ಸಂಭವಿಸುವುದೇನೋ ಎಂಬ ಭಯವೂ ಉಂ ಟಾಗುತ್ತಿದ್ದುವು, ಮುಂದೆ ವೈದ್ಯನನ್ನು ಕರೆಯಿಸಿದರೆ ಒಳ್ಳೇದೆಂದು ಉದಯದಲ್ಲಿಯೇ ಹೇರ್‌ರವರು ನನ್ನೊಡನೆ ಹೇಳಲು, ಆ ಮಾತು ನನಗೂ ಸಮ್ಮತವಾಗಿದ್ದುದರಿಂದ ಡಾಕ್ಟರ್ ಕೀರ್ತ್ ಎಂಬ ವೈದ್ಯನನ್ನು ಡಾಕ್ಟರ್ ಸೀಬೆಟ'೯ ಎಂಬಾತನ ಸಂಗಡ ಕರೆದುಕೊಂಡು ಬಂದೆನು, ಆ ದಿನ ಶರೀರದಲ್ಲಿದ್ದ ಎಲ್ಲಾ ಯಾತನೆಗಳಿಗಿಂತಲೂ ತಲೆನೋವು ತುಂಬ ಬಾಧೆ ಪಡಿಸುತ್ತಲಿದ್ದಿತು, ತಲೆಗೆ ಪಟ್ಟು ಹಾಕಿದ್ದರಿಂದ ರಾತ್ರಿಯ ವೇಳೆಗೆ ಅದು ಶಮನವಾಯಿತು. ನಾನು ಇಷ್ಟು ಶ್ರದ್ಧೆ ತೆಗೆದುಕೊಳ್ಳುತ್ತಿರುವುದಕ್ಕಾಗಿ ರಾಜಾರಾಮಮೋಹನರಾಯರು ನನ್ನನ್ನು ಕೊಂಡಾಡಿ ಬಾರಿಬಾರಿಗೂ ನನ್ನ ಕೈಯನ್ನು ಮುದ್ದಿಡುತ್ತಿದ್ದರು, ಪ್ರಾತಃಕಾ ಲದಲ್ಲಿಯೇ ಆತನ ಶರೀರವನ್ನು ಬಿಸಿನೀರಿನಿಂದ ಶುಭ್ರವಾಗಿ ತೊಳೆಯಿಸಿದೆನು, ಆ ರಾತ್ರಿ ಸ್ವಲ್ಪ ಸೌಖ್ಯವಾಗಿ ಕಳೆಯಿತೆಂದು ತಿಳಿದೆನು, ಸೆಪ್ಟೆಂಬರ್ 24 ನೆ ಮಂಗಳವಾರ ಕಳೆದ ರಾತ್ರಿ ಹೇರ್‌ರವರು, ಮಿಸ್‌ ಹೇರ್‌, ರಾಜಾರಾವು, ಈ ಮೂವರೂ ರಾಮಮೋಹನನ ಹತ್ತಿರ ಕುಳಿತುಕೊಂಡರು. ನಾನು 11 ಘಂಟೆಯ ಹೊತ್ತಿಗೆ ಆತನನ್ನು ಅಗಲಿ ಹೋಗಿದ್ದು ಮರಳಿ ಪ್ರಾತಃಕಾಲ ಐದುಘಂಟೆಗ ಇಲ್ಲಿಯೇ ಬಂದು ಸೇರಿದೆನು, ನೆನ್ನೆಯ ರಾತ್ರಿಗಿಂತ ಸ್ವಲ್ಪ ಉತ್ತಮವಾಗಿದೆ. ಕೀರ್ತ್, ಪ್ರೀಬೆಟ್೯ ಇವರು ಹನ್ನೆರಡುಗಂಟೆಯ ಹೊತ್ತಿಗೆ ಬಂದರು. ಈ ಹಗಲಿನಲ್ಲಿ ಅಷ್ಟು ಕಷ್ಟ ವಾಗಿರಲಿಲ್ಲ. ಸ್ವಲ್ಪಮಟ್ಟಿಗೆ ನಿದ್ದೆಯ ಹತ್ತಿತ್ತು, ಆತನಿಗೆ ಮರಳಿ ಮುನ್ನಿ ನಂತೆ ಸ್ವಲ್ಪ ಬಾಧೆ ಹೆಚ್ಚುತ್ತ ಬಂದಿತು. ಸೆಪ್ಟೆಂಬರ್ 25 ನೆ ಬುಧವಾರರಾಮಮೋಹನನು ಬಹಳ ಹೊತ್ತು ನಿದ್ರಿಸಿದನು. ನಿನ್ನೆ ಯರಾತ್ರಿಗಿಂತ ಈ ರಾತ್ರಿಯಲ್ಲಿ ರಾಮಮೋಹನನಿಗೆ ಆರೋಗ್ಯವಾಗಿದೆ, ನಾಡಿಯು ನಿಮಿಷಕ್ಕೆ 10-13 ಸಾಲಿಯಂತೆ ಬಲಹೀನವಾಗಿ ಹೊಡೆದುಕೊಳ್ಳುತ್ತಲಿದೆ. ಹೇರ್ ಎಂಬಾ ತನು ಹತ್ತಿರದಲ್ಲಿಯೇ ಕಾದಿದ್ದು ಬೆಳಗಾಗಲಿಕ್ಕೆ ಮುಂಚೆ 3-4 ಗಂಟೆಗಳ ನಡುವೆ ನನಗೆ ರೋಗಿಯ ವಿವರವನ್ನು ಹೇಳಿ, ನಾಡಿಯಲ್ಲಿ ಕ್ಷಣೇ ಕ್ಷಣೇ ಬಲವು ತಗ್ಗುತ್ತಿರುವುದನ್ನು ಕುರಿತು ಸಂದೇಹಗೊಂಡನು, ಮೈ ತಣ್ಣಗಾಗುತ್ತಲಿತ್ತು ; ಆದರೂ ಕೊಂಚ ಉಣ್ಣೆಯ ಬಟ್ಟೆಗಳನ್ನು ಹೊದ್ದಿಸಿದ ಕೂಡಲೇ ಶಾಖವುಂಟಾಗುತ್ತ ಬಂದಿತು. ಆತನು ಮಾತನಾಡ ಲಾರದೆ ಇದ್ದನು. ಆದರೂ ಕರೆದಾಗ ಕಣ್ಣು ತೆರೆದು ನೋಡುತ್ತಿದ್ದನು. ನಾನು 12 ಗಂ ಟೆಗೆ ಬ್ರಿಸ್ಟಲ್ಲಿಗೆ ಬಂದು, ರಾತ್ರಿಯ ಊಟಕ್ಕೆ ಸ್ಟೀಪಲ್ ರ್ಟಗೋವಿಗೆ ಬಂದೆನು, ಅಷ್ಟು ಹೊತ್ತಿಗೆ ರಾಜಾ ರಾಮಮೋಹನನ ಸ್ಥಿತಿಯು ತುಂಬ ಆಲಸ್ಯವಾಗಿದ್ದಿತು. ನೆಲದಮೇಲೆ