ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ೧೨೯ ಕೇಳಿ, ರಾಮಮೋಹನನು ಆ ಬ್ರಾಹ್ಮಣನ ಸಂಗಡ “ನಾವು ಒಳ್ಳೆ ವಸ್ತ್ರಗಳು ಮೈಮೇಲೆ ಇಲ್ಲದ ಮಾತ್ರದಿಂದ ಯೋಗ್ಯನಾದವನನ್ನು ಗುರುತು ಹಿಡಿಯಲಾರೆವೆಂದು ಮಂದಿರಕ್ಕೆ ಬಾರದೆ ಉಳಿದುಕೊಂಡಿರೇನು ? ಎಂದು ಕೇಳಿದನು. ಒಂದು ಕಡೆಯಲ್ಲಿ ಪ್ರತಿಪಕ್ಷದವರಿಂದ ಉಂಟಾಗುತಿದ್ದ ಕಷ್ಟಗಳನ್ನೂ ಒಂದೊಂದು ವೇಳೆ, ಹಣವಿಲ್ಲದುದರ ದೆಸೆಯಿಂದ ಉಂಟಾಗುತ್ತಿದ್ದ ತೊಂದರೆಗಳನ್ನೂ ಒಂದೊಂದುವೇಳೆ, ರಾಮಮೋಹನನು ಅನುಭವಿಸಬೇಕಾಗಿ ಬರುತ್ತಲಿತ್ತು, ಕಲ್ಕತ್ತೆಗೆ ಒಂದಮೇಲೆ ಬ್ರಹ್ಮ ಜ್ಞಾನ ಪ್ರಚಾರಕ್ಕೆ ಸ್ವಂತವಾಗಿ ಸ್ಥಾಪಿಸಿದ ಇಂಗ್ಲೀಷ್ ಪಾಠಶಾಲೆಗೂ, ವಿವಿಧ ಭಾಷೆಗಳಲ್ಲಿ ಅನೇಕ ಗ್ರಂಧಗಳನ್ನು ಬರೆದು ಮುದ್ರಿಸುವುದಕ್ಕೂ ಬರುದ್ರವ್ಯ ವೆಚ್ಚವಾಯಿತು, ವಿದ್ಯೆ ಯಾದರ, ನಾಗರಿಕತೆ ಯಾದರೂ ಲೇಶವೂ ಇಲ್ಲದ ಆ ದಿನಗಳಲ್ಲಿ ಈತನ ಗ್ರಂಧಗಳಿಗೆ ಬೆಲೆ ಕೊಟ್ಟು ಕೊಳ್ಳತಕ್ಕವರು ಯಾರಿದ್ದರು ? ಇದರಿಂದ ತನ್ನ ಉಪದೇಶಗಳನ್ನೂ, ತನ್ನ ಅಭಿಪ್ರಾಯಗಳನ್ನೂ ಜನಗಳಲ್ಲಿ ವ್ಯಾಪನೆ ಗೊಳಿಸುವುದೇ ಮುಖ್ಯೋದ್ದೇಶವಾಗಿ ಉಳ್ಳ, ರಾಮಮೋಹನನು ವೆಚ್ಚದ ವಿಷಯವನ್ನು ಕುರಿತು ಸ್ವಲ್ಪ ಮಾತ್ರ ಆಲೋಚಿಸದೆ, ಸಹಗಮನ ನಿಷೇಧವೇ ಮೊದಲಾದ ಸರ್ವಜನೋ ಪಯೋಗಕರಗಳರ ಕಾವ್ಯಗಳನ್ನು ಕುರಿತು ಪ್ರಜೆಗಳೆಲ್ಲರಿಗೂ ತಿಳಿಯಬೇಕಾದ ಮುಖ್ಯ ಗ್ರಂಧಗಳನ್ನೂ ಸಾವಿರಗಟ್ಟಳೆಯಾಗಿ ಅಚ್ಚು ಹಾಕಿಸಿ, ಅವುಗಳನ್ನು ಉಚಿತವಾಗಿ ಜನರಲ್ಲಿ ಹಂಚಿದನು. ಒಂದೊಂದು ಪ್ರಸ್ತುತವನ್ನು ಒಂದೊಂದು ಸಾರಿ ಮಾತ್ರವಲ್ಲದೆ ಎರಡು ಮೂರು ಸಾರಿ ಕೂಡ ಮುದ್ರಿಸಿ ಬೆಲೆಯಲ್ಲದೆ ಕೊಟ್ಟು ಬಿಡುತ್ತಿದ್ದನು. ಇಷ್ಟು ಮಾತ್ರವ ಇದೆ ತನ್ನ ಉಪದೇಶದಿಂದ ಯೂನಿಟೀಲರ್ಯ ಮತದಲ್ಲ ಸೇರಿ ಮೊದಲಿನ ಉದ್ಯೋಗವನ್ನು ಪರಿತ್ಯಜಿಸಿದ ಏತಕ ದೊರೆಯ ಜೀವನಕ್ಕೊಸ್ಕರ ಹೆಲವು ಸಾರಿ ದ್ರವ್ಯಸಹಾಯ ಮಾಡು ತ್ಯಾ ಬಂದನು. ಇದಲ್ಲದೆ ಬಡಬಗ್ಗರಿಗೆ ಉಪಕುಸಿದ ದರಗಳು ಲೆಕ್ಕವಿಲ್ಲದೆ ಇದ್ದುವು. ಈ ವಿಷಯದಲ್ಲಿ ಬಾಬೂದೇವೇಂದ್ರನಾಧಾಕೂರವರು ಹೀಗೆ ಬರೆದಿರುವರು, ಬ್ರಾಹ್ಮ ಧರ ಪ್ರಚಾರಕ್ಕೆ ಆತನು ಮಾಡಿದ ವಿಶ್ವ ಪ್ರಯತ್ನಗಳ ಮೂಲಕ ಆತನ ಭಾಗ್ಯವೆಲ್ಲ ನಶಿಸಿತು. ವೃತ್ತಿಯು ಕೆಟ್ಟುಹೋಯಿತು, ಕೊನೆಗೆ ದೇಹಲಿಯ ರಾಜನಿಗೆ ಅಧೀನನಾಗಿ ಆತನು ಕೊಟ್ಟ ವೇತನದಿಂದ ಜೀವನ ಮಾಡಬೇಕಾಗಿ ಬಂದಿತು, ಸಹಗಮನಸಿಷೇಧಿಸಿದ್ದಾಂತಸುಬ್ಬರತ್ವ ಕ್ಯಾಗಿಯೂ, ಹಿಂದೂದೇಶೀಯರ ಕ್ಷೇಮಾಭಿವೃದ್ಧಿಗಾಗಿಯ, ಪಾಶ್ಚಾತ್ಯ ದೇಶಕ್ಕೆ ಹೋಗಿ ಅಲ್ಲಿ ತುಂಬ ಕಷ್ಟ ಪಟ್ಟು ಬೇಸರಗೊಳ್ಳದೆ ರಾತ್ರಿಯ, ಹಗಲೂ ಕೆಲಸಮಾಡಿ ತನ್ನ ದೇಹಾ ಗೋಗ್ಯವನ್ನು ಕೆಡಿಸಿಕೊಂಡು ವ್ಯಾಧಿಗ್ರಸ್ತನಾದನು. ಅಲ್ಲಿಗೆ ದೇಹಲಿಯ ರಾಜನಿಂದ ಸಹಾಯಸಿಕ್ಕದೆ ಹೋಯಿತು. ಅಗತ್ಯವಾದ ವೆಚ್ಚಗಳಿಗೆ ಸಾಕಾದಷ್ಟು ಹಣವಿಲ್ಲದೆ ಹೋದು ದು ಸಹ ಆತನ ದೇಹವನ್ನು ವಿಧಿಸೀಡಿತನಾಗಿ ಮಾಡಲಿಕ್ಕೆ ಒಂದು ಕಾರಣವಾಗಿತ್ತು. ಆ ಮಹಾತ್ಮನು ಈ ಕಷ್ಟಗಳನ್ನೆಲ್ಲಾ ನಮ್ಮ ಭವಿಷ್ಯತ್ಸುಖಕ್ಕೋಸ್ಕರವೇ ಅನುಭವಿಸಿದನೆಂದು 17
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೩೬
ಗೋಚರ