ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಕಾರಣಾಂತರದಿಂದ ಅದು ಪ್ರಸಿದ್ಧಿಗೆ ಬರಲಿಲ್ಲ ಈ ಗ್ರಂಥವು ೧೮೩೮ ರಲ್ಲಿ ಕಲ್ಕತೆ ಯಲ್ಲಿ ಮುದ್ರಿತವಾಯಿತು, ಇದು ಯಾವಗ್ರಂಥಗಳನ್ನು ಖಂಡಿಸುವುದಕ್ಕಾಗಿ ಬರೆಯಲ್ಪ ಟೈ ತೋ ಆ ಗ್ರಂಧಗಳು ನಮಗೆ ಸಿಕ್ಕದೆ ಹೋದುದರಿಂದ ಆ ವಿಷಯವನ್ನು ಬಿಟ್ಟು ಕಥಾಭಾಗಕ್ಕೆ ಬರೋಣ. ರಾಮಮೋಹನನು ಹದಿಮೂರು ವರ್ಷಗಳ ತನಕ ಸರಕಾರದ ಉದ್ಯೋಗದಲ್ಲಿ ದ್ದನು. ಜಂಗ್‌ಪುರ, ಭಾಗಲಪ್ರರ, ರಾಂಗಡ ಮೊದಲಾದ ಡಿಸ್ಟ್ರಿಕ್ಕುಗಳಲ್ಲಿ ಶಿರಸ್ತೇದಾ ರನಾಗಿ ಹತ್ತು ಸಂವತ್ಸರಗಳು ಕೆಲಸಮಾಡಿ, ಜನರೆಲ್ಲರಿಗೂ ಹಿತನೆಂದು ಹೆಸರು ಪಡೆದನು. ಆದರೆ ಈ ಮಹಾತ್ಮನು ಸಾಮಾನ್ಯರಂತೆ ಎಲ್ಲಿಯೋ ಹೊಟ್ಟೆ ಹೊರೆದುಕೊಂಡು, ನಾಮ ರೂಪಗಳಿಲ್ಲದೆ ನಶಿಸುವುದಕ್ಕಾಗಿ ಜನ್ನಿಸಿದವನಲ್ಲ. ಆದುದರಿಂದ ಮುಂದೆ ತಾನು ಮಾಡ ಲಿಕ್ಕೆ ಸಂಕಲ್ಪಿಸಿರುವ ದುರ್ಘಟಕಾಕ್ಯಗಳಿಗೆ ಉದ್ಯೋಗದಲ್ಲಿದ್ದಾಗ ಸಿಕ್ಕುವ ಸ್ವಲ್ಪ ವೇಳೆ ಯು ಸಾಕಾಗುವುದಿಲ್ಲವೆಂದು ತಿಳಿದು, ತನ್ನ ಉದ್ಯೋಗವನ್ನು ಬಿಟ್ಟು, ಹೆಚ್ಚು ಕಾಲ ಕೆಲ ಸಮಾಡಿ ಕಾರೈ ಸಾಧನೆ ಮಾಡಬೇಕೆಂದು ನಿಶ್ಚಯಿಸಿ, 1813 ರಲ್ಲಿ ತನ್ನ ಅಧಿಕಾರದಿಂದ ನಿವೃತ್ತನಾದನು. ಇದುವರಿಗೆ ಉದ್ಯೋಗದಲ್ಲಿದ್ದು ಕೆಲಸಮಾಡಿದುದರಿಂದ ರಾಮಮೋಹನನು ತಾನು ಮುಂದೆ ಮಾಡಲುದ್ದೇಶಿಸಿದ ಕಾಕ್ಯಗಳಿಗೆ ಅಗತ್ಯವಾದ ವಿದ್ಯೆ, ಜ್ಞಾನ, ದ್ರವ್ಯ ಸಾಧನೆ ಇವು ಗಳನ್ನು ಸಂಪಾದಿಸಿದುದರಿಂದ ಇದೂ ಒಂದು ಲಾಭಹೇತುವೆಂತಲೇ ಹೇಳಬಹುದು, ಅಸೂ ಯಾ ಸರರಾದ ಕೆಲವರು ಈತನು ಅನ್ಯಾಯಮಾರ್ಗಗಳಿಂದ ಹಣವನ್ನು ಸಂಪಾದಿಸಿದ ನೆಂತಲೂ, ಇಲ್ಲದಿದ್ದರೆ ಆಷ್ಟು ಸ್ವಲ್ಪ ಕಾಲದಲ್ಲಿ ಹೆಚ್ಚು ಹಣವನ್ನು ಗಳಿಸುವುದಕ್ಕೆ ಅವಕಾ ಶವಿಲ್ಲವೆಂತಲ ಹೇಳುವರು. ಆದರೂ ಅದಕ್ಕೆ ತಕ್ಕ ಆಧಾರಗಳು ಯಾವುವೂ ಕಾಣಬಂ ದಿಲ್ಲ, ಮಿಸ್ಟರ್ ಲೀರ್ಮರೆಡ್ ಎಂಬುವರು ಬರಿದ ಬ್ರಹ್ಮ ಸಮಾ ಜದ ಚರಿತ್ರೆಯಲ್ಲಿ ಆ ಕಾ ಲದಲ್ಲಿ ನಿಯತವಾಗಿದ್ದ ವೇತನಗಳಲ್ಲದೆ ಕೆಲವು ಸಂದರ್ಭಗಳಲ್ಲಿ ನ್ಯಾಯಮಾರ್ಗದಿಂದ ಸುಂಕಗಳು ಬರುತ್ತಿದ್ದು ವೆಂತಲೂ, ಹಾಗೆ ಸುಂಕಗಳನ್ನು ಪಡೆಯುವದು ತಪ್ಪಲ್ಲವೆಂದು ಎಣಿ ಸಲ್ಪಟ್ಟದ್ದುದರಿಂದ ಆಗಿನ ಅಧಿಕಾರಿಗಳು ಸುದಾ ಅಂತವುಗಳನ್ನು ಕೊಡಿಸಲು ಸಹಾಯಕ ರಾಗಿದ್ದರೆಂತಲೂ ಬರೆಯಲ್ಪಟ್ಟಿರುವುದರಿಂದ ಈ ಆಧಾರದಮೇಲೆ ಆತನು ಅಧರ್ಮ ಮಾರ್ಗದಲ್ಲಿ ದ್ರವ್ಯ ಸಂಪಾದನೆ ಮಾಡಿದನೆಂಬ ಅಪಕೀರ್ತಿಗೆ ಗುರಿಯಾಗಲಾರನೆಂದು ನಾವು ಹೇಳಬಹುದು. 1793 ರಲ್ಲಿ ಲಾರ್ಡ್ ಕಾರನ್ನಾಲಿಸನು ವೈಸರಾಯಿಯಾಗಿದ್ದಾಗ ಜಾ೯ದಾರರಿಗೆ ಶಾಶ್ವತವಾದ ಪಟ್ಟಿಗಳನ್ನು ಕೊಡಲು ಆಲೋಚನೆಗಳು ನಡೆದುವು, ಒಬ್ಬೊಬ್ಬ ಮಂಡಲಾ ಧಿಪತಿಗೂ ಸ್ವಲ್ಪಸ್ವಲ್ಪ ಭೂಭಾಗಗಳು ನಿರ್ಣಯಿಸಲ್ಪಟ್ಟುವು. ಆಗ ರಾಮಮೋಹನನು ಡಿಗ್ಲಿಯವರ ಬಳಿ ಇದ್ದು, ಆತನಿಗೆ ಸಂತೋಷಕರವಾಗಿ ಕೆಲಸ ಮಾಡಿದುದಲ್ಲದೆ, ಉಸಕಾ ರಮಾಡಲಿಕ್ಕೆ ಅವಕಾಶ ದೊರೆತಾಗ ಪ್ರಜಾರಂಜಕಗಳಾದ ಕೆಲಸಗಳನ್ನು ಮಾಡಿ ಕೀರ್ತಿ