ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಕಲೆ ಕಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಈ ಬಾಧೆಯು ಸ್ವಲ್ಪಮಟ್ಟಿಗೆ ಶಾಂತವಾದಕೂಡಲೇ ತನ್ನ ಮನೆಯಲ್ಲಿ ಪೂರ್ವಮತಾಚಾ ರವನ್ನೇ ಗಟ್ಟಿಯಾಗಿ ಹಿಡಿದಿದ್ದ ತಮ್ಮ ತಾಯಿಯ ತೊಂದರೆಯು ಹೆಚ್ಚಾಯಿತು, ಪ್ರತಿ ದಿನವೂ ತನ್ನ ಉಪನ್ಯಾಸಗಳಿಂದ ಉಂಟಾಗುತ್ತಿದ್ದ ವಿರೋಧಭಾವಗಳಿಗೆ ಜತೆಯಾಗಿ, ವಿರೋಧಗಳ ಹೇಳಿಕೆಗಳು ಇವರ ತಾಯಿಯ ಅಸೂಯೆಯನ್ನು ಹೆಚ್ಚಿಸಿದುವು. ತಾರೆ ಣೀದೇವಿಯು ಪ್ರತಿಪಕ್ಷದವರ ಬೋಧನೆಗಳಿಗೊಳಗಾಗಿ, ತಮ್ಮ ಕುಲಾಚಾರಗಳಿಗೆ ವಿರೋಧವಾಗಿ ನಡೆಯುತ್ತಿರುವ ತನ್ನ ಮಗನನ್ನೂ, ಅವನ ಹೆಂಡತಿ ಮಕ್ಕಳನ್ನೂ, ಮನೆ ಯಿಂದ ಹೊರಡಿಸಿಬಿಡಬೇಕೆಂದು ನಿಶ್ಚಯಿಸಿ, ಒಂದು ದಿನ ಮಗನಿಗೆ ಆಸಂಗತಿಯನ್ನು ಸ್ಪಷ್ಟವಾಗಿ ಹೇಳಿಬಿಟ್ಟಳು. ಪಾಪ ! ಈತನು ಪ್ರೇಮಲತೆಯನ್ನು ಒಂದೇಸಾರಿಗೆ ಕೊಯ್ದು ಬಿಡಲಿಕ್ಕೆ ಮನಸ್ಸು ಬಾರದೆ, ನೆರೆಯಲ್ಲಿಯೇ ಒಂದು ಮನೆಮಾಡಿಕೊಂಡು, ತಾಯಿ ಮತ್ತು ಸಹೋದರಿಯರ ಸಮಿಾಪದಲ್ಲಿಯೇ ಇರಬೇಕೆಂದು ಯತ್ನಿಸಿದನು, ಆದರೆ ಆ ಊರಿನವರು ಅವನ ತಾಯಿಗೆ ಬೋಧಿಸಿ, ಅವನನ್ನು ಆ ಊರಿನಲ್ಲಿಯೇ ಇರಕೂಡ ದೆಂದು ಹೇಳಿಸಿದರು. ಇವನು ಅಲ್ಲಿಯೇ ಇರಲು ತಕ್ಕ ವ್ಯವಹಾರಗಳನ್ನು ನಡಿಸಿ, ಜಯಿ ಸಬಲ್ಲವನಾಗಿದ್ದರೂ, ವಿವಾದಮಾಡುವುದಕ್ಕೆ ಮನಸ್ಸಿಲ್ಲದೆ ತನ್ನ ಕುಟುಂಬದೊಡನೆ ಲಾಂ ಗೋಲ್‌'ಪಾದಾದಿಂದ ಹೊರಟು, ಸವಿಾಪದಲ್ಲಿರುವ ರಘುನಾಧಪುರವೆಂಬ ಗ್ರಾಮವನ್ನು ಸೇರಿ, ಆ ಊರಹೊರಗಿನ ಸ್ಮಶಾನದ ಹತ್ತಿರ ಒಂದು ಸಣ್ಣ ಗುಡಿಸಲು ಕಟ್ಟಿ ಕೊಂಡು, ಅದರ ಎದುರಿಗೆ ಒಂದು ಜಗತಿಯ ಕಟ್ಟಿ ಯನ್ನು ಕಟ್ಟಿ, ಅದಕ್ಕೆ ಒಂದು ಚಪ್ಪರವನ್ನು ಹಾಕಿ, ಅದರ ಸುತ್ತಲೂ ಸುಂದರವಾದ ಹೂವಿನ ತೋಟವನ್ನು ಬೆಳಸಿ ಮನೋಹರ ವಾದ ಬಳ್ಳಿಗಳನ್ನು ಹಬ್ಬಿಸಿ, ಒಳಗಡೆ 'ಓಂ ತತ್ಸತ್' 'ಏಕಮೇವಾ ದ್ವಿತೀಯಂ' ಮೊದಲಾದ ಮಹಾವಾಕ್ಯಗಳನ್ನು ಚಿತ್ರಿಸಿದ ಪಟಗಳಿಂದ ಅಲಂಕರಿಸಿ, ಆ ಸ್ಥಳವನ್ನೇ ತನ್ನ ಉಪಾಸನಾಗೃಹವನ್ನಾಗಿ ಮಾಡಿಕೊಂಡು ಅಲ್ಲಿ ಕೆಲವುಕಾಲ ವಾಸಮಾಡುತ್ತಿದ್ದನು. - ಈತನು ಮಸಣದ ಹತ್ತಿರ ವಾಸಮಾಡಿಕೊಂಡಿದ್ದುದರಿಂದ ಜನರು ಯಾವ ಅಭಿ ಪ್ರಾಯವುಳ್ಳವರಾಗಿದ್ದರೋ ತಿಳಿಯದು, ಆದರೂ ಈ ಕಾರ್ಯವು ಆತನ ಧೈರ್ಯ ಸೈ ರ್ಯಗಳಿಗೆ ಒಂದು ಸಾಕ್ಷ್ಯ ವಾಗಿದೆ. ಈ ಸ್ಥಳಕ್ಕೆ ಬಂದಮೇಲೆ ಸುದಾ ಈತನು ಆಗಾಗ್ಗೆ ಮುರಷದಾಬಾದ್ ಪಟ್ಟಣಕ್ಕೆ ಹೋಗಿ ಅಲ್ಲಿ ಕೆಲವು ದಿನಗಳಿದ್ದು ಉಪನ್ಯಾಸಗಳನ್ನು ಕೊಡುತ್ತಲಿದ್ದನು. ಆಗಲೇ “ತೋಹಫತುಲ್ ಮೌಹರ್ದೀ") ಎಂಬ ಹೆಸರಿನಿಂದ ಫಾರಸಿಭಾಷೆಯಲ್ಲಿ ಒಂದು ಮತ ಗ್ರಂಥವನ್ನು ಬರೆದನು. ಅದರ ಉಪೋದ್ಘಾತವು ಅರಬ್ಬಿ ಭಾಷೆಯಲ್ಲಿ ಬರೆಯಲ್ಪ ಟೈತು, ಈ ಗ್ರಂಥವು ಮುದ್ರಿಸಲ್ಪಡದಿದ್ದರೂ ಮೌಲ್ವಿ ಅಬೀದುಲ್ಲಾ ಎಂಬ ಪಂಡಿ ತನು ಕಲ್ಕತ್ತೆಯಲ್ಲಿ ಇದನ್ನು ಇಂಗ್ಲೀಷ್ ಭಾಷೆಗೆ ಪರಿವರ್ತಿಸಿದನೆಂದು ಹೇಳುವರು. ನಮಗೆ ಈ ಗ್ರಂಥಗಳು ಯಾವುವೂ ದೊರೆತಿಲ್ಲವು.