ರಾಜಾ ರಾಮಮೋಹನರಾಯರ ಜೀವಿತ ಕರಿತ್ರ. » ಚಿಕ್ಕನಾಭಿವೃದ್ಧಿಗೆ ಸಾಧಕಗಳಾದ ಸುಲಭಶೈಲಿಯ ವಚನಗ್ರಂಥಗಳು ಒಂದಾದರೂ ಇರ ಲಿಲ್ಲ, ಯೌವನಸ್ಥರು ಗಾಳಿಯಪಠಗಳನ್ನಾಡಿಸುವುದರಲ್ಲಿಯ ಪಾರಿವಾಳಗಳನ್ನು ಹಾರಿಸು ವುದರಲ್ಲಿಯ ಪದ್ಯಗಳನ್ನು ಕಟ್ಟುವುದರಲ್ಲಿಯೂ, ತಮ್ಮ ಕಾಲಗಳನ್ನು ವಿನಿಯೋಗಿಸು ತಿದ್ದರು. ಹೀಗೆ ಇದ್ದರೂ ಈಗಿನ ನಾಗರಿಕರಲ್ಲಿ ಪ್ರಒಲಿಸಿರುವ ಸ್ವದೇಶ ಪರದೇಶಗಳ ಮದ್ಯಗಳು ಮಾತ್ರ ಆಗಿನ ಕಾಲದಲ್ಲಿ ನಿಷಿದ್ಧ ಪದಾರ್ಥಗಳಾಗಿ ನೋಡಲ್ಪಡುತ್ತಿದ್ದು ವೆಂಬುದು ತುಂಬ ಸಂತೋಷಕರವಾದುದು, ಒಂದಾನೊಂದು ಕಾಲದಲ್ಲಿ ಇಂಗ್ಲಿಷರಿಗೆ ಕೆಲವು ದೊಡ್ಡ ಮನುಷ್ಯರು ಔತನಗಳನ್ನು ಮಾಡಿಸುವಾಗ ಪಶ್ಚಿಮದೇಶದ ನಾಗರಿಕತೆಯನ್ನನುಸರಿಸಿ ಅ ತಿಥಿಗಳಿಗೆ ಪಾನದ್ರವ್ಯಗಳನ್ನು ತಂದು ಒದಗಿಸಿದರೂ ತಾವುಮಾತ್ರ ಅದನ್ನು ಮುಟ್ಟಿದೆ ಇದ್ದರು. !! ಬಂಗಾಳ ರಾಜ್ಯವು ಈ ಸ್ಥಿತಿಯಲ್ಲಿದ್ದಾಗ ರಾಮಮೋಹನನು ಕತ್ತಾ ಪಟ್ಟಣವ ನ್ನು ಸೇರಿ, ಮಾನಿಕೆತಲಾವ್ ಲೋಯರ್ ಸರ್ಕ್ಯುಲರ್ ರೋಡ್'ಎಂಬ ಬೀದಿಯಲ್ಲಿ ಒಂದು ಮನೆಯನ್ನು ಕ್ರಯಕ್ಕೆ ತೆಗೆದುಕೊಂಡು ಅದನ್ನು ಇಂಗ್ಲೀಷರ ಪದ್ಧತಿಯಂತೆ ಅಲಂಕರಿಸಿ ಅಲ್ಲಿ ವಾಸಮಾಡುತ್ತಾ, ಕೆಲವು ಕಾಲದಿಂದಲೂ ತನ್ನ ಮನಸ್ಸಿನಲ್ಲಿದ್ದ ದ್ವೇಚ್ಛಾವಲಂಬನಾ ಭಿಲಾಷೆಯುಳ್ಳವನಾಗಿ ದೇಶಸೇವೆಯನ್ನು ಮಾಡಬೇಕೆಂದು ಸಂಕಲ್ಪಿಸಿಕೊಂಡನು. ಹೀಗೆ ಸ್ಥಿರನಾಗಿ ಅಂದಿನಿಂದ ವಿಗ್ರಹಾರಾಧನೆಯು ಅನಾಚಾರವೆಂಬ ಭೇರಿಯನ್ನು ಮೊಳಗಿಸತೊಡ ಗಿದನು. ಇದರಿಂದ ಕಲ್ಕತೆಯಲ್ಲಿ ಮಾತ್ರವಲ್ಲ, ಇಡೀ ಬಂಗಾಳದೇಶದಲ್ಲೆಲ್ಲ ಒಂದು ಬಗೆಯ ಕಲ್ಲೋಲವು ವ್ಯಾಪಿಸಿತು. ಪಂಡಿತಸಭೆಗಳಲ್ಲಿಯೂ, ಪಾಠಶಾಲೆಗಳಲ್ಲಿಯ, ಹಳ್ಳಿಯ ಮನೆಗಳಲ್ಲಿಯೂ, ನಾಲ್ವರು ಗುಂಪುಕೂಡಿದ ಸ್ಥಳಗಳಲ್ಲಿಯೂ ರಾಮಮೋಹನ ನನ್ನು ಕುರಿತ ಚರ್ಚೆಯೇ ಪ್ರಾರಂಭವಾಗಿ, ಪುರುಷ ಸಭೆಗಳಲ್ಲಿ ಮಾತ್ರವಲ್ಲದೆ, ಮನೆಗಳಲ್ಲಿ ಹೆಂಗಸರ ಸಂಭಾಷಣೆಗಳಲ್ಲಿ ಕೂಡ ಇದೇ ವಿಷಯವು ಹಬ್ಬಿತು. ಆಗ ರಾಮಮೋಹನನ ಅಭಿಪ್ರಾಯಾನುಸಾರಿಗಳಾಗಿ, ಆತನ ಕೆಲಸಕ್ಕೆ ಸಹಾಯಮಾಡತಕ್ಕವರು ಕೆಲವರು ಸಿದ್ದರಾ ದರು. ಹಾಗೆ ಮುಂದಾದವರಲ್ಲಿ ರಾಜಾ ಕಾಳೇಶಂಕರಘೋಪಾಲ್, ಪ್ರಸನ್ನ ಕುಮಾರ ಠಾಕೂರ್, ಗೋಪೀನಾಥ ಮುನಷಿ ಎಂಬುವರು ಮುಖ್ಯರು, ಇವರಲ್ಲದೆ ಇನ್ನೂ ಕೆಲವರು ಪಂಡಿತರಿದ್ದರು, 1812ರಲ್ಲಿ ಜಂಗ' ಪ್ರರದಿಂದ ಅನೇಕ ಶಾಸ್ತ್ರ ಪಾರಂಗತನಾಗಿ, ಬ್ರಹ್ಮಮತಾ ವಲಂಬಿಯಾಗಿದ್ದ ಹರಿಹರಾನಂದತೀರ್ಧನೆಂಬ ಯೋಗಿಯೊಬ್ಬನು ಇಲ್ಲಿಗೆ ಬಂದು ಸೇರಿದನು. ಆತನು ರಾಮಮೋಹನನಿಗೆ ಬಂಗಪುರದಲ್ಲಿ ಪರಿಚಿತನಾಗಿ ಕ್ರಮಕ್ರಮವಾಗಿ ಇವನ ಅಂತ ರಂಗಮಿತ್ರನಾದನು. ಬ್ರಹ್ಮ ಸಮಾಜದಲ್ಲಿ ಮೊದಲು ಆಚಾರ ಪೀಠವನ್ನಲಂಕರಿಸಿ ಪ್ರಸಿದ್ಧ ಪುರುಷನಾದ ರಾಮಚಂದ್ರವಿದ್ಯಾವಾಗೀಶನು ಇವನ ಸಹೋದರನು, ಉಪನಿಷದರ್ಥಗ ಳನ್ನು ಚೆನ್ನಾಗಿ ತಿಳಿದ ಶಿವಪ್ರಸಾದನೆಂಬ ಉತ್ತರಹಿಂದುಸ್ಥಾನದ ನಿವಾಸಿಯ ಒಬ್ಬನಾಗಿ ದನು, ಇವಲ್ಲದೆ ಇನ್ನೂ ಅನೇಕರು ರಾಮಮೋಹನನ ಶಿಷ್ಯರಾದರು, ಇವನ ಎನಯ ಶಾಂತ್ಯಾದಿ ಸದ್ಗುಣಗಳೂ ಸತ್ಯ ಸ್ವಭಾವವೂ ಅನೇಕ ಜನರನ್ನು ಇವನ ಕಡೆಗೆ ಆಕರ್ಷಿಸುತ್ತಿ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೨೮
ಗೋಚರ