೨೩ ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ೨೩ ಪಾಶ್ಚಾತ್ಯರಿಗೆ ಈ ಮತದ ತತ್ವವು ತಿಳಿಯುವುದಕ್ಕಾಗಿಯ, ಹಿಂದೂ ಧರಗಳನ್ನು ಕೆಡಿಸ ಲಿಕ್ಕೆ ಏರ್ಪಟ್ಟ ಈಚಿನ ಗ್ರಂಧಗಳೆಲ್ಲವೂ ಪ್ರಾಮಾಣಿಕಗಳಲ್ಲವೆಂದು ತೋರಿಸುವುದಕ್ಕಾಗಿಯೂ ಈಗ ಈ ಗ್ರಂಧವನ್ನು ಇಂಗ್ಲಿಷಿನಲ್ಲಿ ಬರೆದಿರುವೆನೆಂದು ತನ್ನ ಉದ್ದೇಶವನ್ನು ವಿವರಿಸಿದನು. ವೇದಾಂತ ಸೂತ್ರಗಳನ್ನು ರಚಿಸಿದ ತರುವಾಯ ವ್ಯಾಖ್ಯಾನದೊಂದಿಗೆ ಪ್ರಚುರಿಸಿದ ಆ ಗ್ರಂಥವು ಬಹು ದೊಡ್ಡದಾಗಿದ್ದುದರಿಂದಲೂ ಪಂಡಿತರು ಹೊರತಾಗಿ ಇತರರು ಅದನ್ನು ತಿಳಿಯುವುದು ಕಷ್ಟವಾಗಿದ್ದುದರಿಂದಲೂ, ಅದರಲ್ಲಿನ ವಿಷಯಗಳನ್ನೆಲ್ಲ ಸಂಗ್ರಹಿಸಿ, ವೇದಾಂ ತಸಾರವೆಂಬ ಪುಸ್ತಕವನ್ನು ಬರೆದನು, ಇದು ಯಾವ ವರುಷದಲ್ಲಿ ಬರೆಯಲ್ಪಟ್ಟಿತೆಂಬುದು ತಿಳಿಯದು ; ಆದರೂ 1818 ರಲ್ಲಿ ಇದಕ್ಕೆ ಇಂಗ್ಲಿಷ್ ಭಾಷಾಂತರವು ಪ್ರಕಟಿಸಲ್ಪಟ್ಟುದ ರಿಂದ ವೇದಾಂತ ಸೂತ್ರಗಳನ್ನು ಬರೆದ ಸ್ವಲ್ಪ ದಿನಗಳಲ್ಲಿಯೇ ಇದನ್ನು ಬರೆದಿರಬಹುದೆಂದು ಕಾಣುವುದು, ಈ ಗ್ರಂಧವ ಕ್ರಿಸ್ತಮತ ಬೋಧಕರಿಗೆ ಹೆಚ್ಚಾಗಿ ಹಂಚಲ್ಪಟ್ಟಿತು. ಅವ ರು ಇದನ್ನೋದಿ ಅತ್ಯಾಶ್ಚರ್ಯಗೊಂಡು ಈ ಗ್ರಂಥಕರ್ತನ ಪ್ರಸಿದ್ದಿಯನ್ನು ಯೂರೋಪ್ ಖಂಡದಲ್ಲೆಲ್ಲ ಹರಡಿದರು. ಈ ಪುಸ್ತಕದಲ್ಲಿ ಆಸ್ತಿಕ್ಯವನ್ನೂ, ಬ್ರಸ್ಕೋಪಾಸನೆಯನ್ನೂ ಬಹಳವಾಗಿ ಚರ್ಚಿಸಿ, ಅನೇಕ ಕಾರಣಗಳಿಂದ (ಈಶ್ವರನ) ಸಾಕಾರ ಸಿದ್ದಾಂತವನ್ನು ಖಂಡಿ ಸಿರುವುದಲ್ಲದೆ ಸಕ॰) ವಿಧಗಳಿ೦ದಲೂ ಬ್ರಹ್ಮಜ್ಞಾನಿಯೇ ಶ್ರೇಷ್ಟನೆಂದು ನಿರೂಪಿಸಿರುವರು. ವೇದಾಂತ ಸೂತ್ರ, ವೇದಾಂತ ಸಾರಗಳು ಪ್ರಜೆಗಳಲ್ಲಿ ವ್ಯಾಪಿಸಿದ ಮೇಲೆ 1818 ರಿಂದ ಕೇನ, ಈಶ, ಕರ, ಮುಂಡಕ, ಮಾಂಡೂಕ್ಯ, ಛಾಂದೋಗ್ಯಗಳೆಂಬ ಉಪನಿಷತ್ತುಗಳನ್ನು ಬಂಗಾಳಿ ವ್ಯಾಖ್ಯಾನದೊಂದಿಗೆ ಒಂದೊಂದಾಗಿ ಪ್ರಚುರಪಡಿಸಿದನು. ಈ ಮೇಲೆ ಹೇಳಲ್ಪಟ್ಟ ಗ್ರಂಧಗಳೆಲ್ಲವೂ ಕ್ರಮಕ್ರಮವಾಗಿ ಪ್ರಕಟಿಸಲ್ಪಡುತ್ಯಾ ಸಾಮಾ ನ್ಯ ಜನರಿಂದ ಸುಧಾ ಓದಲ್ಪಡುತ್ತಿದ್ದುದನ್ನು ನೋಡಿ ಪೂರ್ವಾಚಾರಪರಾಯಣರಾದವರು ತುಂಬ ಕೋಪಗೊಂಚ ತ, ಮನುಷ್ಯ ವರ್ಗದಲ್ಲಿ ಆಗ್ರಗಣ್ಯರಾದ ಬ್ರಾಹ್ಮಣೋತ್ತಮರು ಹೊರತು ಉಳಿದವರು ಮುಟ್ಟಲಿಕ್ಕೆ ಸುದಾ ಅರ್ಹವಲ್ಲದೆ ಇರುವ ಪವಿತ್ರ ಗ್ರಂಥಗಳನ್ನು ಈಗ ಮೈಕ್ಷರು ಸುದಾ ಓದುತ್ತಲಿರುವರೆಂತಲೂ, ಮರವಿನಿಂದಲಾದರೂ 'ಓಂ' ಎಂಬ ಶಬ್ದವನ್ನು ಉಚ್ಚರಿಸಿದರೆ ನಾಲಗೆಯನ್ನು ಕೊಚ್ಚಿ ಕೊಳ್ಳುತ್ತಲಿದ್ದ ಶೂದ್ರರು ಈಗ ಗಾಯತ್ರಿಯ ಮಂತ್ರಾರ್ಧಗಳನ್ನು ಹೇಳತೊಡಗಿದರೆಂತಲೂ ಕೆಲವರು ಅಟ್ಟಹಾಸದಿಂದ ಕೂಗಿಕೊಳ್ಳುತ್ತಾ, ಭಟ್ಟಾಚಾರ್ಯನೆಂಬುವನನ್ನು ಮುಂದುಮಾಡಿಕೊಂಡು, ಘೋರ ಕಲಿಯುಗವು ಪ್ರಾಪ್ತವಾಯಿತೆಂದು ದಂಗೆಯೇಳಲಾರಂಭಿಸಿದರು. ಇಂತಹ ಕಾಲದಲ್ಲಿ ತಮ್ಮ ಮತವನ್ನು ಕನಸಿನಲ್ಲಿ ಸುದಾ ಸ್ಮರಿಸದೆ ಇದ್ದ ಬಂಗಳಾದೇಶೀಯರೆಲ್ಲರೂ ಒಂದೇಸಾರಿ ದೊಂಬಿ ಎದ್ದು ರಾಮಮೋಹನನನ್ನು ಎದುರಿ ಸುತ್ತಾ ಬಂದರು, ಆಕಾಲದಲ್ಲಿ ಪ್ರಚಾರವಾಗುತ್ತಲಿದ್ದ 'ಇಂಡಿಯಾ ಗೆಜೆಟ್'ಎಂಬ ವರ್ತ ಮಾನಪತ್ರದಲ್ಲಿ ಈತನ ಅಭಿಪ್ರಾಯಗಳನ್ನು ಕುರಿತು ಒಂದು ಲೇಖನವು ಒರೆಯಲ್ಪ ಟಿತು, ಆವ್ಯಾಸದಲ್ಲಿ ಇವನು 'ಹಿಂದು ರಿಫಾತ್ಮ (ಸಂಸ್ಕಾರಕ ರ್ತ)' ಎಂಬ ಬಿರುದಿ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೩೦
ಗೋಚರ