ವಿಷಯಕ್ಕೆ ಹೋಗು

ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ೪೫ ಗಳೂ ವಿದ್ಯಾವಂತರೂ ಸೇರುತ್ತ ಬರುವುದರಿಂದ ಅವನ ಪಕ್ಷವು ಬಲವಾಗುತ್ತಿರುವುದೆಂ ತಲೂ, ಈ ಪ್ರಯತ್ನಗಳನ್ನೆಲ್ಲ ಒಡನೊಡನೆ ಮುರಿಯುವುದಕ್ಕೆ ಇದುವರೆಗೆ ಮಾಡಿದ ಸಣ್ಣ ಸಭೆಗಳಿಂದ ಯಾವ ಫಲವೂ ಉಂಟಾಗಲಿಲ್ಲವಾದುದರಿಂದ ಪುರಾತನ ಧರ್ಮರಕ್ಷಣಾರ್ಧವಾಗಿ ನಮ್ಮ ಪಕ್ಷ ದಲ್ಲಿ ಬೇರೊಂದು ಸಭೆಯನ್ನು ಸ್ಥಾಪಿಸಬೇಕೆಂತಲೂ, ಆಲೋಚಿಸಿ ಧರ್ಮಸಭೆ ಎಂಬ ಹೆಸರಿನಿಂದ ರಾಮಮೋಹನನಿಗೆ ಪ್ರತಿಕೂಲವಾಗಿ ಕೆಲಸಮಾಡಲಿಕ್ಕೆ ಒಂದು ಸಮಾ ಜವನ್ನು ಸ್ಥಾಪಿಸಿದರು. ಮಂದಿರಸ್ಥಾಪನೆಯಾದಮೇಲೆ ರಾಮಮೋಹನನು ಪ್ರಜೆಗಳಲ್ಲಿ ತನ್ನ ಮತಧರ್ಮಗಳನ್ನು ಪ್ರಕಾಶಪಡಿಸುವುದಕ್ಕಾಗಿ, “ ಸಂವಾದ ಕೌಮದಿ” ಎಂಬ ವಾ ರ್ತಾಪತ್ರಿಕೆಯೊಂದನ್ನು ಪ್ರಕಟಿಸುತ್ತ ಬಂದನು. ಅದಕ್ಕೆ ಪ್ರತಿಯಾಗಿ ಈ ಧರ್ಮಸಭೆಯ ವರು “ಚಂದ್ರಿಕೆ” ಎಂಬ ಪತ್ರವನ್ನು ಹೊರಡಿಸಿದರು, ರಾಮಮೋಹನನು ಬಂಗಾಳಿ ಭಾ ಷೆಯು ಹಿಂದೂದೇಶದವರಿಗೆಲ್ಲ ತಿಳಿಯದ ಭಾಷೆಯಾದುದರಿಂದ ಸಮಸ್ಯರಿಗೂ ತಿಳಿಯತಕ್ಕ ರಾಜಭಾಷೆಯಾದ ಫಾರಸಿಯಲ್ಲಿ ಒಂದು ಪತ್ರಿಕೆಯನ್ನು ಪ್ರಚುರಿಸುತ್ತಿದ್ದನಂತೆ, ಆದರೆ ಅದರ ಹೆಸರು ಯಾವುದೋ ನಮಗೆ ತಿಳಿಯಬಂದಿಲ್ಲ, ಧರ್ಮಸಭೆಯವರು ಬ್ರಹ್ಮ ಸಮಾಜದಲ್ಲಿ ವಿಶೇಷವಾದ ವಿರೋಧವನ್ನು ತೋರಿಸತೊ ಡಗಿದರು, ಕಲ್ಕತ್ತಾದಲ್ಲಿನ ಜರ್ಮೀದಾರರು, ಬಡಬಗ್ಗರು, ಸ್ವಲ್ಪ ಹೆಚ್ಚು ಕಡಿಮೆ ಎಲ್ಲರ ಅವರಿಗೆ ಸಹಾಯಪರರಾದರು. ರಾಜಾರಾಧಾಕಾಂತದೇವನು ಸಭಾಧ್ಯಕ್ಷನಾಗಿಯೂ, ಉಳಿದ ದೊಡ್ಡ ಮನುಷ್ಯರು ಸಭಿಕರಾಗಿಯೂ ನಿಯಮಿಸಲ್ಪಟ್ಟರು. ಸಭೆಯ ಅಭಿವೃದ್ಧಿ ಗಾಗಿ ನಗರವಾಸಿಗಳಿಂದ ಕೊಡಲ್ಪಡುತ್ತಿದ್ದ ಸಹಾಯ ದ್ರವ್ಯವು ಸ್ವಲ್ಪ ದಿವಸಗಳಲ್ಲಿಯೇ ಒಂದುಲಕ್ಷ ರೂಪಾಯಿಗಳಾದವು, ಮತ್ತು ಈ ಸಭೆಯು ಕಾಠ್ಯದರ್ಶಿಯಾಗಿದ್ದ ಬಾಬೂ ಭವಾನೀಚರಣಬೆನರ್ಜಿ ಎಂಬಾತನು ಮನೆಮನೆಗೂ ಹೋಗಿ ರಾಮಮೋಹನ ಮತ್ತು ಬ್ರಹ್ಮ ಸಮಾಜದ ಆಕ್ಷೇಪಗಳನ್ನು ವಿವರಿಸಿ ನೀವು ಯಾವಾಗಲಾದರೂ ಅಲ್ಲಿಗೆ ಹೋಗಲೇಕೂಡ ದೆಂದು ಹೇಳುತ್ತಿದ್ದು, ಇದನ್ನು ಮಾರಿ ಅಲ್ಲಿಗೆ ಹೋದವರಿಗೆ ಬಹಿಷ್ಕಾರ ಹಾಕುತ್ತಿ ದ್ದರು. ಹೀಗಿದ್ದರೂ ಠಾಕೂರ್ ವಂಶದವರೂ, ಶಿಂಗ'ವಂಶದವರೂ, ಗಂಗೆಯ ಪಶ್ಚಿಮ ತೀರದ ಮಿಲ್ಲರಿನಲ್ಲಿದ್ದ ಬಾಬುಗಳೂ, ಟೋಕಿಯಲ್ಲಿದ್ದ ಕಾಳೀನಾಧನೆಂಬುವನೂ, ಆನಂದಪ್ಪ ಸಾದ ಬೆನರ್ಜಿ ಎಂಬುವನೂ ಇನ್ನೂ ಕೆಲವರು ತಾವು ಎಂತಹ ಇಕ್ಕಟ್ಟುಗಳನ್ನಾದರೂ ಸಹಿಸಿಕೊಂಡು ತಮ್ಮ ಅಂತರಾತ್ಮಕ್ಕೆ ಅಂಗೀಕೃತವಾಗಿರುವ ರಾಮಮೋಹನನ ಸಂಬಂಧ ವನ್ನು ಅಗಲದೆ ಹೀನಸ್ಥಿತಿಗೆ ಬರುತ್ತಿದ್ದ ಆ ಸಮಾಜಕ್ಕೆ ಆಧಾರಭೂತರಾಗಿ ನಿಂತಿದ್ದರು. ಸತ್ಯಕ್ಕೆ ಎಂದಿಗೂ ಪರಾಜಯವಿಲ್ಲ ಎಂಬುದಕ್ಕೆ ಇದೊಂದು ಪ್ರಬಲನಿದರ್ಶನವಾಗಿದೆ. ಇಂತಹ ಪ್ರಬಲವಿರೋಧಕಾಲದಲ್ಲಿ ಬ್ರಹ್ಮ ಸಮಾಜಕ್ಕೂ ಅದರ ಅಭಿಮಾನಿಯಾದ ರಾಮ ಮೋಹನನಿಗೂ ಹೇಗೆ ಜಯ ಸಿಕ್ಕಿತು ? ಈ ಜಯವನ್ನು ಪಡೆಯಲು ಆತನು ಎಷ್ಟು ಕಷ್ಟ ಗಳನ್ನು ಅನುಭವಿಸಿದನು ? ಯಾವ ಯಾವ ಸಾಧನಗಳನ್ನು ಆಯುಧಗಳಾಗಿ ಮಾಡಿಕೊಂಡು ಈ ಮಹಾ ರಣರಂಗದಲ್ಲಿ ಆತನು ಜಯಶೀಲನಾದನು ? ಎಂಬ ವಿಷಯವನ್ನು ಕುರಿತು ಮ