ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yಆ ಕಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಮನುಷ್ಯನ ಜೀವಿತವು ನಿಸ್ಸಂಶಯವಾಗಿ ಪರವಾರ್ಧ ವಿಷಯದಲ್ಲಿಯೇ ವಿನಿಯೋಗಿಸ ಲಾಗುವುದು. ಯಾವ ಮತವೇ ಆದರೂ ಕೆಲವು ಕಟ್ಟುಪಾಟುಗಳಿಗೆ ಒಳಪಟ್ಟಿರಬೇಕು. ಸಂಸ್ಕರಣವೆಂಬುದು ಉಚಿತವಾದ ನಿಬಂಧನೆಯನ್ನನುಸರಿಸಿ ಕಾಲಾನುಗುಣವಾಗಿ ಮಾಡಲ್ಪ ಟ್ಟರೆ ಫಲದಾಯಕವಾಗಿರುವುದು ಸಂಸ್ಕಾರ ಜ್ಞಾನದಿಂದಲೇ ಯುಕ್ತಾಯುಕ್ತ ವಿವೇಚ ನೆಯ ಪ್ರಾಪಂಚಿಕ ಧರ್ಮಗಳಲ್ಲಿ ಆಸಕ್ತಿಯೂ ಉಂಟಾಗುವವು. ಯಾವನು ಸಂಪೂರ್ಣ ವಾಗಿ ಪರಮೂರ್ಧವನ್ನು ತಿಳಿಯುವನೋ ಇವನು ಮನುಷ್ಯರ ಕರ್ತವ್ಯಗಳಲ್ಲಿ ಎರಡನೆಯ ಭಾಗವಾದ ಪ್ರಾಪಂಚಿಕಧರ್ಮಗಳಲ್ಲಿ ಸ್ವಭಾವವಾಗಿಯೇ ಮನಸ್ಸಿಡುವನು. ಬುದ್ದಿವಂತರಾದ ಕೆಲವರು ಆಗಾಗ ಲೋಕದಲ್ಲಿ ಹುಟ್ಟಿ ಮದಜನಗಳನ್ನೆಲ್ಲಾ ಸನ್ಮಾರ್ಗಕ್ಕೆ ತಿರುಗಿಸಬೇ ಕೆಂದು ಯತ್ನಿಸಿದರು, ಅದು ಸತ್ರ ಪ್ರಯೋಜನಕಾರಿಯಾಗದೆ ಕೆಲವು ಕಡೆಗಳಲ್ಲಿ ನಷ್ಟಕ್ಕೆ ಕಾರಣವಾಗುತ್ತಾ ಬಂತು. ಮುಂದೆ ನಿಜವಾಗಿ ಸಂಸ್ಕಾರವನ್ನು ಮಾಡಿ ಸನ್ಮಾರ್ಗವನ್ನು ತೋರಿಸುವನಾವನೆಂದು ವಿಚಾರ ಮಾಡುವಲ್ಲಿ ಸರ್ವ ವಿಷಯ ಸಂಸ್ಕಾರ ಶಕ್ತಿಯುಳ್ಳ ವನೊಬ್ಬನೇ ಆ ಕಾಠ್ಯಕ್ಕೆ ಅರ್ಹನೆಂದು ಹೇಳದೆ ತೀರದು. ಅಂಧವರೇ ದೇಶವನ್ನ ಅಭಿವೃದ್ಧಿಗೆ ತರತಕ್ಕ ವರು ಯಾವಾಗಲಾದರೂ ದೇಶವು ಸರ್ವವಿಧಗಳಲ್ಲಿಯೂ ಅಭಿವೃದ್ಧಿಗೆ ತರಲ್ಪಡಬೇಕಾದರೆ ಇಂತ ವರ ಸಹಾಯವು ಅಗತ್ಯವಾದುದು, ಹಿಂದೂ ದೇಶವು ಉನ್ನತಸ್ಥಿತಿಗೆ ಬಂದಿದ್ದ ಪೂರೈಕಾ ಲದ ಕಡೆಗೆ ನಾವು ದೃಷ್ಟಿ ಇಟ್ಟು ನೋಡಿದರೆ ಇದುವರೆಗೆ ನಾವು ಹೇಳಿದ ಮಾತಿನಲ್ಲಿ ಎಷ್ಟರ ಮಟ್ಟಿಗೆ ಸತ್ಯವಿರುವುದೆಂಬುದು ಸ್ಪಷ್ಟವಾಗುವುದು, ಆ ಕಾಲದಲ್ಲಿ ಯಾರು ಮತ ವಿಧಗಳನ್ನೆಲ್ಲ ನಿರ್ಣಯಿಸಿದರೋ ಅವರೇ ಇತರ ಸಂಸ್ಕಾರಗಳಿಗೂ, ರಾಜ್ಯಾಂಗದ ಯೋಚೆ ನೆಗಳಿಗೂ ಮಾರ್ಗದರ್ಶಕರಾಗಿದ್ದರು. - ಮಹರ್ಷಿಗಳೆಲ್ಲರೂ ಬ್ರಹ್ಮಜ್ಞಾನವನ್ನೂ, ದರ್ಮ ತತ್ವವನ್ನೂ ಕುರಿತು ಹೇಗೆ ಉ ತಮ ಗ್ರಂಧಗಳನ್ನು ಬರೆದರೋ ಹಾಗೆಯೇ ಅವರು ರಾಜನೀತಿ, ಮಾನವ ಧರ್ಮ ಮುಂ ತಾದ ಐಹಿಕ ವ್ಯವಹಾರಗಳನ್ನು ಕುರಿತು ಗ್ರಂಥಗಳನ್ನು ಕೂಡ ಒರೆದಿಟ್ಟರು. ಅವರು ಕೇವಲ ವನವಾಸಿಗಳಾಗಿ ಅಲ್ಲಿಯೇ ಕುಳಿತಿದ್ದು ಬ್ರಹ್ಮಜ್ಞಾನ ವಿಚಾರದಲ್ಲಿ ಮಾತ್ರ ಆಸಕ್ತ ರಾಗಿರದೆ, ಅವರಲ್ಲಿ ಕೆಲವರು ದೊಡ್ಡವರು ಗೃಹಸ್ಸಧರ್ಮವನ್ನ ವಲಂಬಿಸಿ ಸಂದರ್ಭ ದೊರೆತ ಹಾಗೆಲ್ಲಾ ದೇಶ ಮತ್ತು ಸಂಘಗಳ ಕ್ಷೇಮಾಭಿವೃದ್ಧಿಯಲ್ಲಿ ತುಂಬ ಶ್ರದ್ದೆಯನ್ನು ತೆಗೆದು ಕೊಂಡು ಮಾತುಗಳಿಂದಲೂ, ಕಾಠ್ಯಗಳಿಂದಲೂ ಅವುಗಳನ್ನು ವೃದ್ಧಿಗೆ ತರಲು ಯತ್ನಿಸುತ್ತಿ ದೃರು. ಇದಕ್ಕೆ ಶ್ರುತಿಗಳೂ ಶಾಸಗಳೂ ಪ್ರಬಲವಾದ ಸಾಕ್ಷಿಗಳಾಗಿವೆ, ಆಗಿನ ರಾಜರೆಲ್ಲರೂ ರಾಜ್ಯದ ವ್ಯಾವಹಾರಿಕ ಕಾವ್ಯಗಳಲ್ಲಿ ಇಂತವರ ಆಲೋಚನೆಗಳನ್ನು ಕೇಳಿ ತಿಳಿದುಕೊಂಡು ಪುಷ್ಕರಿಸುತ್ತಿದ್ದಂತೆ ಪೂರ್ವದ ಗ್ರಂಥಗಳಿಂದ ನಮಗೆ ತಿಳಿಯಬರು ವುದು. ಇದು ಹೀಗಿರಲಿ; ನಮ್ಮ ದೇಶವನ್ನು ಬಿಟ್ಟು ಪರದೇಶಗಳ ಕಡೆಗೆ ದೃಷ್ಟಿಕೊಟ್ಟು ನೋಡೋಣ, ಅರೇಬಿಯಾ ದೇಶದಲ್ಲಿ ದೊಡ್ಡ ಸಂಸ್ಕರಣಕರ್ತನೆನಿಸಿದ ಝಾಲ್ ಆರಬ್‌' ಎಂಬಾತನು ಪರಮಾರ್ಥೋಪದೇಶದ ಜತೆಗೆ ಸಂಘ ಸಂಸ್ಕರಣವನ್ನೂ ರಾಜ್ಯಾಂಗ