40 ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ಗಾಗಿ ಕಟ್ಟಲ್ಪಡುವ ಕಟ್ಟಡದಲ್ಲಿ ಒಂದು ಭಾಗವಾಗಿರಿಸುವುದಕ್ಕೂ ಅದರ ಹೆಚ್ಚು ಕುಂದು ಗಳನ್ನು ವಿಮರ್ಶಿಸುವುದಕ್ಕೂ ಮಾತ್ರ ಒಪ್ಪಿಕೊಂಡರು. ಇಂಗ್ಲಿಷ್ ಮತಬೋಧಕರು ತಮ್ಮ ಮತಪ್ರಾಬಲ್ಯವನ್ನು ಅಪೇಕ್ಷಿಸಿದಲ್ಲಿ ಮೊತ್ತ ಮೊದಲು ಇಂಗ್ಲಿಷ್ ಸ್ಕೂಲುಗಳನ್ನು ಸ್ಥಾಪಿಸಿ ಪ್ರಜೆಗಳಲ್ಲಿ ಪಾಶ್ಚಾತ್ಯ ವಿದ್ಯಾ ವ್ಯಾಪನೆ ಯಾಗುವಂತೆ ಮಾಡುವುದು ಅಗತ್ಯವೆಂದು ತನ್ನ ಅಭಿಪ್ರಾಯವನ್ನು ರಾಮಮೋಹನನು ತಿಳಿಸಿರುವನೆಂದು ಹಿಂದೆ ಹೇಳಿದ್ದೇವೆ. ಈ ಅಭಿಪ್ರಾಯವನ್ನನುಸರಿಸಿ ಕೆಲವರು ಪಾದಿರಿ ಗಳು ಅಲ್ಲಲ್ಲಿ ಸಣ್ಣ ಸಣ್ಣ ಪಾಠಶಾಲೆಗಳನ್ನೇರ್ಪಡಿಸಿದರು, ಶ್ರೀರಾಮಪುರದಲ್ಲಿ ಕೂಡ ಒಂದು ಪಾಠಶಾಲೆ ಸ್ಥಾಪಿತವಾಯಿತು, ಆದರೂ ಈ ಪಾಠಶಾಲೆಗಳಲ್ಲಿ ಹಿಂದೂ ಬಾಲ ಕರು ಓದುವಂತೆ ಪ್ರೋತ್ಸಾಹ ಕೊಡತಕ್ಕೆ ಸ್ವದೇಶೀಯರು ಯಾರೂ ಅವರಿಗೆ ಸಹಾಯಕ ರಾಗದೆ ಇದ್ದುದರಿಂದ ಪ್ರಜೆಗಳು ಆ ಪಾಠಶಾಲೆಯನ್ನಾದರಿಸದೆ ಅವುಗಳೆಲ್ಲವೂ ಪ್ರಾರಂಭ ದೆಶೆಯಲ್ಲಿಯೇ ಇದ್ದುವು. ಹೀಗಿರುವಲ್ಲಿ 1830 ರಲ್ಲಿ ಡಾಕ್ಟರ್ ಡಫ್ ಎಂಬ ಅಪಾರ ಸುಜ್ಞಾನಪಂಡಿತನಾದ ಪಾದರಿಯೊಬ್ಬನು ಕಲ್ಕತ್ತಾ ಪಟ್ಟಣಕ್ಕೆ ಬಂದನು. ಈತನು ಹಿಂ ದೂದೇಶಕ್ಕೆ ಬರುವಾಗ್ಗೆ ಹಿಂದೂಮತನಿರ್ಮೂಲನವನ್ನೂ ಕ್ರೈಸ್ತಮತವ್ಯಾಪನೆಯನ್ನೂ ಮಾಡತಕ್ಕುದೇ ತನ್ನ ಜೀವಿತದ ಪರಮಾರ್ಥವೆಂದು ದೃಢಪಡಿಸಿಕೊಂಡು ಏನೇನೋ ಮಾ ಡಬೇಕೆಂದು ಯೋಚಿಸುತ್ತಿದ್ದನು, ಇಂಡಿಯಾಕ್ಕೆ ಬಂದಮೇಲೆ ಇಲ್ಲಿನ ಪಾದರಿಗಳ ಪ್ರಯ ತ್ನಗಳೆಲ್ಲವೂ ವ್ಯರ್ಥವಾಗುತ್ತಿರುವುದನ್ನು ನೋಡಿ ಹಿಂದುಗಳಲ್ಲಿ ಪ್ರಮುಖರಾದವರ ಸಹಾ ಯವಿಲ್ಲದಿದ್ದರೆ ತಾನು ಸಂಕಲ್ಪಿಸಿದ ಕಾಠ್ಯವು ನೆರವೇರುವುದು ಕಷ್ಟವೆಂದು ತಿಳಿ ಮಕೊಂ ಡನು, ತರುವಾಯ ಕೆಲವು ಬೋಧಕರ ಆಲೋಚನೆಯನ್ನನುಸರಿಸಿ ಕ್ರಮಕ್ರಮವಾಗಿ ರಾಮಮೋಹನನೊಂದಿಗೆ ಸ್ನೇಹವನ್ನು ಬೆಳೆಸಿ ಕೆಲವು ದಿನಗಳಾದಮೇಲೆ ತನ್ನ ಅಭಿಪ್ರಾ, ಯವನ್ನು ತಿಳಿಸಲು ರಾಮಮೋಹನನು ಹೇಗಾದರೂ ಹಿಂದೂಪ್ರಜೆಗಳಿಗೆ ಇಂಗ್ಲಿಷ್ ಭಾ ಪಾಜ್ಞಾನವುಂಟಾಗುವಂತೆ ಮಾಡಬೇಕೆಂಬ ಕೋರಿಕೆಯುಳ್ಳವನಾಗಿದ್ದುದರಿಂದ ಪಾಠಶಾಲೆ ಗಳನ್ನು ಸ್ಥಾಪಿಸುವ ಪದ್ಧತಿಗೆ ಆತನನ್ನು ಒಡಂಬಡಿಸಿದನು, ಆದರೆ ಬೈಬಿಲ್ಲನ್ನು ಒಂದು ಪಾಠವಾಗಿ ಏರ್ಪಡಿಸಬೇಕೆಂತಲೂ, ಹತ್ತು ಮಂದಿ ವಾಸಮಾಡುವ ಕಡೆಯಲ್ಲಿ ಈ ಪಾಠಶಾಲೆ ಇಡಬೇಕೆಂತಲೂ, ಹಾಗಿಲ್ಲದೆ ಇದ್ದರೆ ತನ್ನ ಮತವ್ಯಾಪನೆಯ ಉದ್ದೇಶವು ನೆರವೇರಲಾರ ದೆಂತಲೂ, ಆ ಪಾದರಿಯು ಸಂದೇಹಪಡುತ್ತಿದ್ದನು. ಅದರಮೇಲೆ ರಾಮಮೋಹನನು ಆತನಿಗೆ ಚಿತ್ತೂರು ರಸ್ತೆಯಬಳಿ ಇರುವ ಬ್ರಹ್ಮ ಸಮಾಜಮಂದಿರವನ್ನು ಪಾಠಶಾಲೆಗಾಗಿ ಬಿಟ್ಟು ಕೊಟ್ಟು, ತಾನು ಇಂಗ್ಲೆಂಡಿಗೆ ಹೊರಡುವುದಕ್ಕೆ ಮುಂಚೆ ಕಟ್ಟಿಸಿದ್ದ ಹೊಸಮನೆ ಯನ್ನೇ ಬ್ರಹ್ಮ ಸಮಾಜಮಂದಿರವಾಗಿ ಏರ್ಪಡಿಸಿದನು. ಹೀಗೆ ಪಾಠಶಾಲೆಗೆ ಸ್ಥಳನಿರ್ದೇಶ ಮಾಡಿಕೊಟ್ಟು, ತನ್ನ ಸ್ನೇಹಿತರ ಮಕ್ಕಳಲ್ಲಿ ಐದುಮಂದಿಯನ್ನು ಸೇರಿಸಿ ಪಾಠಶಾಲೆಯ ನೇರ್ಪಡಿಸಿದನು, ಕೆಲವು ದಿನಗಳಲ್ಲಿಯೇ 'ಇಂಗ್ಲಿಷ್ ಕಲಿಯಬೇಕೆಂದು ಆಶಿಸಿ ಅನೇಕ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೭೭
ಗೋಚರ