ಪುಟ:ರಾಣಾ ರಾಜಾಸಿಂಹ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫] ನಿಜನೃತ್ಯ ೯೩ ಕೂಡಲೆ ' ಹರಹರಮಹಾದೇವ ” ಈ ಏರೋತ್ಪಾದಕ ಗರ್ಜನೆಯಿಂದ ಪರಸ್ಪರ ಪ್ರೋತ್ಸಾಹನಕೊಡುತ್ತ ಅವರೆಲ್ಲರು ರೂಪನಗರದ ಮಾರ್ಗದ ಕಡೆಗೆ ತಮ್ಮ ಕುದುರೆಗಳನ್ನು ನಡೆಸಿದರು. Gay ಹದಿನೈದನೆಯ ಪ್ರಕರಣ. ನಿಜ ಭ ತ್ಯ ರಾಣಾರಾಜಸಿಂಹನು ಆವೇಶದಿಂದ ಹೊರಟುಹೋದನು. ಜಯ ಸಿಂಹನ ಸ್ಮರಣೆಯು ಆತನಿಗೆ ಉಳಿಯಲಿಲ್ಲ, ಜಯಸಿಂಹನು ವಿಚಾರ ದಲ್ಲಿ ಬಿದ್ದನು ರಾಣಾನಸಂಗಡ ಹೋಗುವುದಕ್ಕೆ ಕುದುರೆ ಇದ್ದಿಲ್ಲ. ಈಹೊತ್ತಿನವರೆಗೆ ತನ್ನ ಕಾಲವನ್ನು ಕಳ್ಳತನದಲ್ಲಿ ಕಳೆದಿದ್ದನು ಅದೇ ಕಾಲವನ್ನು ಒಂದು ರಾಜಸಭೆಯಲ್ಲಿ ಕಳೆದಿದ್ದರೆ ಒಬ್ಬ ದೊಡ್ಡ ಮುತ್ಸದ್ಧಿ ಯಾಗುತ್ತಿದ್ದನು - ಆತನು ರಾಣಾನ ಹಿಂದೆ ಕಾಲುನಡಿಗೆಯಿಂದ ಹೋಗುವದನ್ನು ಗೊತ್ತುಮಾಡಿದನು. ಗೊತ್ತುಮಾಡಿದಂತೆ ಹೊರಟನು ನಡುವೆ ಎಲ್ಲಿಯಂ ವಿಶ್ರಾಂತಿಯನ್ನು ತಕ್ಕೊಳ್ಳಲಿಲ್ಲ, ರಾಣಾನ ಹಾಗೂ ಅವನ ಸೇವಕರ ಹೊರ್ತು ಬೇರೆಯಾವ ವಿಚಾರವೂ ಆತನಿಗೆ ಉಂಟಾಗಲೊಲ್ಲದು, ಸ್ವಾಮಿ ಕಾರ್ಯವನ್ನು ಉತ್ತಮರೀತಿಯಿಂದ ಮಾಡಿತೀರಿಸಬೇಕೆಂದು ಅವನು ನಿಶ್ಚಯಿಸಿದನು, ಹಸಿವೆ ನೀರಡಿಕೆಗಳ ಪರವೆಯಿಲ್ಲದೆ ರೂಪನಗರದ ಕಡೆ ಗಿರುವ ಪರ್ವತದ ಮಗ್ಗಲಿಗೆ ಹೋದನು. ಮೊದಲುರೂಪನಗರಕ್ಕೆ ಹೋಗಿ ಅಲ್ಲಿಯಸ್ಥಿತಿಯನ್ನು ತಿಳಿದು ರಾಣಾನನ್ನು ಕಾಣುವ ಯೋಚನೆ ಮಾಡಿದನು. « ರಾಣಾನು ರೂಪನ 1ರದ ಕಡೆಗೆ ಬಂದಿರಬೇಕು, ಇದ ಕೋಳಗೆ ಸಂದೇಹವಿಲ್ಲ, ಯಾಕಂದರೆ ಆತನು ರಾಜಕನ್ನಯ ಕತ್ರವನ್ನು