ವಿಷಯಕ್ಕೆ ಹೋಗು

ಪುಟ:ರಾಣಾ ರಾಜಾಸಿಂಹ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ ರಾಣು ರಾಜಸಿಂಹ [ಪ್ರಕರಣ • 1 ಈ ಪತ್ರವನ್ನು ಬರೆದು ಮುಂದೆ ಮಾಡುವ ಯುಕ್ತಿಯನ್ನೆಲ್ಲ ಅವಳಿಗೆ ತಿಳಿಸಿ ಮುಸಲ್ಮಾನರ ಛಾವಣಿಗೆ ಹೊರಟುಹೋದನು, ಛಾವ ಣಿಯಲ್ಲಿ ಮಹಮ್ಮದಖಾನನ ಹೆಸರಿನವನನ್ನು ಶೋಧ ಮಾಡವತ್ತಿದನು | ಮುಸಲ್ಮಾನರಲ್ಲಿ ಬಹಳಜನ ಖಾನರು, ಯಾವನಾದರೊಬ್ಬ ಮಹಮ್ಮದ ಖಾನನು ದೊರೆಯಬಹುದೆಂದು ಜಯಸಿಂಹನು ಆ ಪತ್ರವನ್ನು ಒರೆ ದಿದ್ದನು ಅದರ ಪರಿಣಾಮವೂ ನೆಟ್ಟಗಾಯಿತು ಛಾವಣಿಯಲ್ಲಿ ಹುಡು ಕುವುದರಲ್ಲಿ ಒಬ್ಬ ಮಹಮ್ಮದ ಖಾನನು ದೊರೆತನು. ಆತನು ಚೀಟಿ ಯನ್ನು ಓದಿ ನೋಡಿದನು ಒದಿದಮೇಲೆ ಆತನ ಮುಖವು ಆನಂದದ ಕಳಯಿಂದ ತುಂಬಿಹೋಗಿತು “ ನೀನು ಇಲ್ಲಿಯೇ ಸ್ವಲ್ಪ ನಿಲ್ಲು, ನಾನು ಈಗ ಬರುತ್ತೇನೆ ' ಎಂದು ಜಯಸಿಂಹನಿಗೆ ಹೇಳಿ ಡೇರೆಯೊಳಗೆ ಹಕ್ಕು ಉತ್ತಮ ಪೋಷಾಕು ಹಾಕಿಕೊಂಡು ಹೊರಗೆಬಂದನು ಹೊರಗೆಬಂದು “ಎಷ್ಟು ದೂರ ಹೋಗುವುದು? ಒ೦ದು ಕೇಳಿದನು. ಅದಕ್ಕೆ ಜಯಸಿಂಹನು ಕೈಮುಗಿದು 6° ಹೂಜೂರ, ಸಮೀಪದಲ್ಲಿದ ಆದರೆ ಕುದುರೆಯ ಮೇಲೆ ಕುಳಿತು ಆಯುಧಸಹಿತವಾಗಿ ಹೋಗುವುದು ಯೋಗ್ಯವಾದದ್ದೆಂದು ತೋರುವುದು, ತಾವು ದೊಡ ಸ್ಥಳಕ್ಕೆ ಹೋಗಬೇ ಕಾಗಿದೆ ” ಎಂದನು. ಶಿಪಾಯಿಯು ವಿಚಾರಿಸಿ 64 ಸರಿಯೆ, ನಾನು ಶಿಪಾಯಿಯು, ಆಯುಧವಿಲ್ಲದೆ ಹೋಗುವದು ಲಾಂಛನಾಸ್ಪದವ " ಎಂದು ಆಯುಧಸಹಿತವಾಗಿ ಕುದುರೆಯನ್ನು ಹತ್ತಿದನು ಜಯಸಿಂ ಹನು ಮುಂದಾದನು. ಇತ್ತ ಜಯಸಿಂಹನು ಹೊರಟುಹೋದಮೇಲೆ ಎಲೆಗಾರ್ತಿಯು ಒಂದು ಏಕಾಂತವಾದ ಮನೆಯನ್ನು ಬಾಡಿಗೆಗೆ ಹಿಡಿದಳು. ಆದ ನ್ನು ಶ್ರಿಂಗರಿಸಿ ಜಯಸಿಂಹನ ಮಾರ್ಗ ನಿರೀಕ್ಷಿಸುತ್ತ ಅಲ್ಲೆ ಕುಳಿತು ಬಿಟ್ಟಳು. ಇಷ್ಟರಲ್ಲಿ ಜಯಸಿಂಹನೊಡನೆ ಖಾನಸಾಹೇಬರು ಬಂದರು. ಸಂಕೇತಸ್ಥಳದಲ್ಲಿ ಎಲೆಗಾರ್ತಿಯು ನಿಂತಿರುವುದನ್ನು ತೋರಿಸಿ, ಕೈ ಕೊಟ್ಟು ಆತನನ್ನು ಕುದುರೆಯಿಂದಿಳಿಸಿದನು ಅನಂತರ “ ಸ್ವಾಮೀ,