ಪುಟ:ರಾಣಾ ರಾಜಾಸಿಂಹ.djvu/೧೬೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪e ರಾಣಾ ರಾಜಸಿಂಹ [ಪ್ರಕರಣ YYYVVV JVVVVyyyyyVs v \ \ YV\ vvvvvvvvvvvvvvvvs VVVYYVV\ VVy ೨೭ ನೆಯ ಪ್ರಕರಣ. ದಾರಿಮೇಲಿನ ಸವಾರ. ಸಾಯಂಕಾಲದ ಆಹ್ಲಾದಕಾರಕಸಾಯ, ಗಾಳಿಯು ಮಂದ ಮಂದವಾಗಿ ಬೀಸುತ್ತಿದೆ, ಬೇಸಿಗೆಯ ಕಾಲವಾದುದರಿಂದ ಶರೀರಕ್ಕೆ ಅತ್ಯಾನಂದವೆನಿಸುತ್ತಿತ್ತು. ಸೂರ್ಯಾಸ್ತಮಯದ ಅಪ್ರತಿಮ ಸೃಷ್ಟಿಸೌಂ ದರ್ಯ, ವನಲತಾದಿಗಳ ಮೇಲೆ ಚಿಮುಕಿತವಾಗುವ ಸೂರ್ಯನ ಕಾಂತಿ ಯಿಂದ ಯಾರಿಗೆತಾನೆ ಅನಂದವೆನಿಸಲಿಕ್ಕಿಲ್ಲ, ಯಾವಾತನು ತನ್ನ ದುಃಖ ವನ್ನು ಮರೆಯಲಿಕ್ಕಿಲ್ಲ ? ಇಂಥ ರಮಣೀಯ ಕಾಲದಲ್ಲಿ ಇಬ್ಬರು ಸವಾ ರರ ಹಿಂದಿಂದ ಸ್ವಲ್ಪ ಅಂತರದ ಮೇಲೆ ಕಪ್ಪುವಸ್ತ್ರದಿಂದ ಮುಖಾಚಾ. ದಿತರಾದ ಇಪ್ಪತ್ತು ಸಾವಿರ ಸವಾರರು ಸುಮ್ಮನೆ ನೆಟ್ಟಗೆ ಮಾರ್ಗವನ್ನು ಕ್ರಮಿಸುತ್ತಿರುವರು, ಮುಂದಿನ ಸವಾರರೂ ಮುಖವನ್ನು ಆಚ್ಛಾದಿಸಿ ಕೊಂಡಿದ್ದರು. ಇಷ್ಟು ದೊಡ್ಡ ಸಮುದಾಯವಾದಾಗ್ಯೂ ಪರಸ್ಪರವಾಗಿ ಮಾತಾಡಿಕೊಳ್ಳುವ ಧ್ವನಿಯು ಸ್ವಲ್ಪವೂ ಕೇಳಬರುತ್ತಿರಲಿಲ್ಲ, ಕುದುರೆ ಯ ಕೊಳಗುಗಳಿಗೆ ತಾಕಿದ ತರಗೆಲೆಗಳು ಮಾತ್ರ ' ಸರಸರ' ಶಬ್ದ ಮಾ ಡುತ್ತಿದ್ದವು. ಇದರಮೇಲಿಂದಲೆ ಅವರು ಕುದುರೆಯ ಸವಾರರೆಂದು ಗುರ್ತಿಸಬಹುದಾಗಿತ್ತು, ಇವರೆಲ್ಲರು ದಿಲ್ಲಿಯ ಕಡೆಯಿಂದ ಉದೇಶ್ರಕದ ಮಾರ್ಗದಿಂದ ನಡೆದಿದ್ದರು. ಬಹಳಹೊತ್ತಿನವರೆಗೆ ಶಾಂತತೆಯಿಂದ ನಡೆದು ಹೋದಮೇಲೆ ಮುಂದಿನವರಲ್ಲಿ ಒಬ್ಬನನ್ನು ಕುರಿತು ಪ್ರತಾಪ ರಾಯಾ, ಈಕಾಲದಲ್ಲಿ ಸೃಷ್ಟಿ ಸೌಂದರ್ಯವು ಎಷ್ಟು ಮನೋಹರವಾಗಿ ಕಾಣುತ್ತದೆ. ಇಂಥ ಸಮಯದಲ್ಲಿ ತಾಸು ತಾಸಿನವರೆಗೆ ಅದನ್ನು ನೋಡು ತ್ರ ನಿಲ್ಲಬೇಕೆಂದು ಯಾರಿಗೆ ಅನಿಸಲಿಕ್ಕಿಲ್ಲ.? ಪ್ರತಾಪ-* ಸರಿ, ಅದೆಲ್ಲ ನಿಜವಾದದ್ದು, ನಮ್ಮಂಥ ವೀರರು ಸೃಷ್ಟಿಸೌಂದರ್ಯವನ್ನು ನೋಡಿ ಸಮಧಾನಪಡುವಂತಿಲ್ಲ, ನಾವು ಇಂಥ