ಪುಟ:ರಾಣಾ ರಾಜಾಸಿಂಹ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫] ಗುಪ್ತವಾರ್ತೆಯ ಪರಿಸ್ಟೋಟ ೧೮೩ ರಿಗ ಅರವಲಿ ಪರ್ವತದ ಸಾಲು, ಆ ಸಾಲುಗಳ ಮೇಲಿನ ವನರಾಜಿ ಯನ್ನು ನೋಡಿ ಯಾರುತಾನೇ ಆಶ್ಚರ್ಯಚಕಿತರಾಗಲಿಕ್ಕಿಲ್ಲ ? ನಮ್ಮ ಸುಂದರಿಯೂ ಆ ವೃಕ್ಷಶೇಣಿಯ ಸೌಂದರ್ಯದ ಶೋಭಾರಾಶಿಯನ್ನು ಕಂಡು ಪರವಶಯಾಗುವದು ಸೋಜಿಗವಲ್ಲಿ ಈಶ ನಿರ್ಮಿತವಾದ ಪ್ರತಿಯೊಂದು ವಸ್ತುವನ್ನು ಸೂಕ್ಷ್ಮ ರೀತಿಯಿಂದ ನಿರೀಕ್ಷಿಸುವದರಿಂದ ಒಂದಿಲ್ಲೊಂದು ತರಹದ ಚಮತ್ಕಾರವು ಕಂಡಕಾಣುವದು, ಅದರಲ್ಲಿ ಅವಳ ಮನಸ್ಸು ತಲ್ಲೀನವಾದದ್ದು ಆಶ್ಚರ್ಯವಾ ಸಪಾಟಪ್ರದೇಶದ ಮೇಲೆ ಒಂದಕ್ಕಿಂತ ಒಂದು ಹೆಚ್ಚು ಎತ್ತರವಾದ ಪರ್ವತಶ್ರೇಣಿಯು ಅಲ್ಲಲ್ಲಿಗೆ ಒಡೆದ ದೊಡ್ಡ ದೊಡ್ಡ ಒಂಡೆಗಳು , ಅಲ್ಲಲ್ಲಿ ನಾನಾತ ರದ ವೃಕ್ಷಗಳು, ಆನಿರ್ಜನ ಪ್ರದೇಶದಲ್ಲಿ ಒಂದು ಝರಿಯು ಹರಿಯ ತಿತ್ತು ಒತ್ತಟ್ಟಿಗೆ ನೀರಿನ ಸಂಚಯವು ಸರೋವರದಂತೆ ಮನೋಹ ರವಾಗಿತ್ತು ಆ ಸರೋವರದಲ್ಲಿ ಆನಂದದಿಂದ ಕ್ರೀಡಿಸುವ ಹಂಸ, ಕೌಂಜಿ, ಮೊದಲಾದ ಪಕ್ಷಿಗಣವು ಮಧ್ಯದಲ್ಲಿ ನೀರಿನಮೇಲೆ ಮುಖವೆತ್ತಿ ತೆರೆಗಳಿಂದ ಅಲ್ಲಾಡುತ್ತಿರುವ ಪ್ರಫುಲ್ಲಿತವಾದ ಅನೇಕ ತರದ ಕಮಲಗಳು ಈ ಸೃಷ್ಟಿ ಸೌಂದರ್ಯವನ್ನು ಕಂಡು ಯಾವ ಮಾನವನು ಈಶ್ವರನ ಅಸ್ತಿ ತ್ವವನ್ನು ನಿಶ್ಚಯಿಸಲಿಕ್ಕಿಲ್ಲ ? ಮನುಷ್ಯನ ಮನಸಿಗ ಕ್ಷಣ ಕಾಲ ಆನಂದ ವನ್ನು ೦ಟುಮಾಡುವ ವಸ್ತುವು ತನ್ನಿಂದ ತಾನೇ ಉಂಟಾಗಿರಲಿಕ್ಕಿಲ್ಲ ಇದರೊಳಗೆ ಏನೋ ಒಂದು ಗೂಢಎರುವದೆಂದು ಯಾವ ಜಾಣರು ಹೇಳಲಿಕ್ಕಿಲ್ಲ ? ಈ ತರದ ಶೋಭಾರಾಶಿಯನ್ನು ನೋಡುವದರಲ್ಲಿ ಆ ತರುಣೀಮ ಇಯು ತಲ್ಲೀನಳಾಗಿರುವಳು ಅವಳಿಗೆ ತನ್ನ ದೇಹದ ಪರವೆ ಸಹಉಳಿ ದಿಲ್ಲ ಅವಳಹಿಂದ ಇಬ್ಬರು ಮನುಷ್ಯರು ಬಂದು ಅವಳ ವಿಕಾರದ ಅಂ ಗಚೇಷ್ಟೆಗಳನ್ನು ನೋಡುತಿದ್ದರು ಅವಳಿಗೆ ತಿಲಮಾತ್ರವೂ ಗೊತ್ತಿಲ್ಲ. ಆಗಂತುಕ ವ್ಯಕ್ತಿಗಳು ಅವಳ ಲೀನತೆಗೆ ಅಡ್ಡಿಯನ್ನು ಮಾಡಲಿಲ್ಲ, ಆ ವ್ಯ ಕ್ರಿಗಳಿಬ್ಬರೂ ತಮತಮ್ಮೊಳಗೆ ಏನೋ ಸನ್ನೆ ಯನ್ನು ಮಾಡಹತ್ತಿದರು.