ವಿಷಯಕ್ಕೆ ಹೋಗು

ಪುಟ:ರಾಣಾ ರಾಜಾಸಿಂಹ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಣಾ ರಾಜಸಿಂಹ [ಪ್ರಕರಣ ೧೦ • • • •••• • • • • • • , - ಪ್ರಸಂಗವು ಒದಗಿರಲು ವೀರಪ್ರತಾಪರಾಯನೂ ಅವನ ಸ್ನೇಹಿತನೂ ನನ್ನನ್ನು ಬಿಡಿಸಿದರು. ಇಸ್ಥಿತಿಯನ್ನು ನೋಡಿ ನಾವು ಸುಮ್ಮನೆ ಕೂಡ ಬೇಕೆ ? ಎಂದೂ ಆಗದು, ಮೊಗಲರ ಈ ಬಾಲಾತ್ಕಾರದಿಂದ ಬಿಡಿ ಸಿಕೊಳ್ಳಲಿಕ್ಕೆ ನಾವು ಹೊಡೆದಾಡುವದು ನ್ಯಾಯವಾದದ್ದು ಸತ್ಯಗಿಂದ ನಡೆದರೆ ಈಶ್ವರನು ನಮಗೆ ನಿಶ್ಚಯವಾಗಿ ಫಲಕೊಡುವನು. ” ಈಶಬ್ದ ವನ್ನು ಉಚ್ಚರಿಸುವಷ್ಟರಲ್ಲಿ ಆದಿವಾಣಖಾನೆಯು 'ಹರಹರ ಮಹಾದೇವ' ಎಂಬ ವೀರಶ್ರೀಗೆ ಪ್ರೋತ್ಸಾಹನಕೊಡುವ ಧ್ವನಿಯಿಂದ ತುಂಬಿತು. ಹನ್ನೆರಡನೆಯ ಪ್ರಕರಣ ಮಧ್ಯದಲ್ಲಿ ಏನಾಯಿತು ? ರೂಪನಗರದಿಂದ ಉದೇಪುರಕ್ಕೆ ಹೋಗುವ ಮಾರ್ಗವು, ಅತಿಶಯ ತ್ರಾಸದಾಯಕವಾದದ್ದು, ಹೊಸಮನುಷ್ಯರಂತೂ ಅಲ್ಲಿ ಹೋಗುವಾಗ ಎಶೇಷ ಕಷ್ಟಗಳಿಗೆ ಗುರಿಯಾಗುವರು. ಸರಳಮಾರ್ಗವು ಗೊತ್ತಾಗದೆ ಪರ್ವತದ ಮೇಲಿನ ಸಣ್ಣ ಕಾಲುದಾರಿಗಳಿಂದ ಅರವಲಿ ಪರ್ವತದ ಸಾಲು ಗಳಲ್ಲಿ ಎಷ್ಟೊದಿವಸ ನಡೆಯ ಬೇಕಾಗುವದು. ಪರ್ವತದ ಮೇಲೆ ಹತ್ತು ವಕಾಲಕ್ಕೆ ಅಲ್ಲಲ್ಲಿಗೆ ನಾಲ್ಕು ಮಾರ್ಗಗಳೊಡೆದದ್ದು ಕಂಡು ಬರುತ್ತದೆ ಅದರೊಳಗೆ ಯಾವ ದಾರಿಯಿಂದ ಹೋಗಬೇಕೆಂಬದು ಹೊಸಬರಿಗೆ ಗೊತ್ತಾಗುವಂತಿಲ್ಲ, ವಿಶೇಷವಾಗಿ ಸ್ವಲ್ಪ ಜನರಿಗೆ ಈ ಸರ್ವತದ ಮೇಲಿಂದ ಹಾಯ್ದು ಹೋಗುವದಕ್ಕೆ ಎಂದೂ ಧೈರ್ಯವಾಗುವಂತಿಲ್ಲ. ವಿಸ್ತಾರವಾದ ಅರಣ್ಯ ಮನುಷ್ಯರ ವಸತಿಯೆ ಇಲ್ಲ: ಹಿಂಸ್ರಪಶುಗಳು ಬಹಳ ಅಲ್ಲಲ್ಲಿಗೆ ಕಳ್ಳರ ಅಂಜಿಕೆ, ಈ ಸಂಕಟಗಳು ಎಲ್ಲರ ಅನುಭ ವಕ್ಕೂ ಬರುತ್ತವೆ. ಮುಂಜಾನೆ ಹತ್ತು ಘಂಟೆಯ ಕಾಲ , ಈ ಪರ್ವತದೊಳಗಿಂದ ಉದೇಪುರದ ಮಾಗವಾಗಿ ಐದು ಜನ ಪ್ರಾವಾಸಿಕರು ಹೋಗುತ್ತಿದ್ದರು.