ತನಯ.' 'ಜಿನಾಕ್ಷರಮಾಲೆ' ಮೊದಲಾದ ಇತರ ಗ್ರಂಥಗಳನ್ನೂ ರಚಿಸಿರುವಂತೆ ದೇವ ಚಂದ್ರನು ರಾಜಾವಳೀ ಕಥೆಯಲ್ಲಿ ಹೇಳಿರುತ್ತಾನೆ. ಅಭಿನವ ಪಂಪನ ದೇಶ, ಕಾಲ, ವಂಶ ಮೊದಲಾದುವು ಯಾವುವೂ ಇವನ ಗ್ರಂಥಗಳಿಂದ ತಿಳಿಯಬರುವುದಿಲ್ಲ. ಆದರೆ ಅವನು ವಿಜಯಪುರದಲ್ಲಿ ಮಲ್ಲಿನಾಥ ಜಿನಾಲಯವನ್ನು ಕಟ್ಟಿಸಿ ಮಲ್ಲಿ ನಾಥಪುರಾಣವನ್ನು ಬರೆದಂತೆ ಆ ಪುರಾಣದಲ್ಲಿ ಹೇಳಿದೆ. ಈ ವಿಜಯಪುರವು ಈಗಿನ ಬಿಜಾಪುರವಾಗಿರಬಹುದು; ಇವನ ಊರೂ ಇದೇ ಇದ್ದಿರಬಹುದು. ಇವನು ಐಶ್ವರ್ಯವಂತನಾಗಿಯೂ ಉನ್ನತಸ್ಥಿತಿಯಲ್ಲಿದ್ದಂತೆಯೂ ತಿಳಿಯಬರುತ್ತದೆ, ಇವನ ಬಿರುದುಗಳು :-ಕವಿತಾಮನೋಹರ, ಭಾರತೀಕರ್ಣಪೂರ, ಸಾಹಿತ್ಯ ವಿದ್ಯಾಧರ, ಮೊದಲಾದುವು. ಇವುಗಳಲ್ಲೊಂದನ್ನು ರಾಮಚಂದ್ರಚರಿತ ಪುರಾಣದ ಪ್ರತಿ ಆಶ್ವಾ ಸದ ಕೊನೆಯ ಪದ್ಯದಲ್ಲಿ ಕವಿಯು ಕಥಾನಾಯಕನ ಪರವಾಗಿ ಉಪಯೋಗಿಸುತ್ತಾನೆ.
* ಕವಿಯ ಕಾಲ - ಈ ಕವಿಯ ಕಾಲವನ್ನು ಗೊತ್ತು ಮಾಡುವುದಕ್ಕೆ ಕೆಲವು ಆಧಾರಗಳಿರುವುವು : —
(೧) ಎರಡನೆಯ ನಾಗವರ್ಮನು (ಸುಮಾರು ಕ್ರಿ. ಶ. ೧೧೪೫) ತನ್ನ ಕರ್ಣಾಟಕ ಭಾಷಾಭೂಷಣದಲ್ಲಿ “ದ್ವಿತೀಯಾರ್ಥ ಚತುರ್ಥಿ ” ಎಂಬ ಸೂತ್ರಕ್ಕುದಾಹರಣವಾಗಿ “ ಬಹುತಾಪಕ್ಕೆ ಬಿಗುರ್ತ ವಿಷ್ಣು ಪಡೆವಂ ಮತ್ತಾವತಾರಕ್ಕೆ ” ಎಂಬ ರಾಮಚಂದ್ರಚರಿತ ಪುರಾಣದ ಪದ್ಯ (೭-೯೮) ಭಾಗವನ್ನು ಕೊಟ್ಟರು ವುದರಿಂದ ಅಭಿನವಪಂಪನು ಈ ನಾಗವರ್ಮನ ಕಾಲಕ್ಕೆ ಹಿಂದೆಯೇ ಪ್ರಸಿದ್ದಿಗೆ ಬಂದಿರಬೇಕು.
(೨) ಕರ್ಣಪಾರ್ಯನು (ಸು. ೧೧೪೦) ತನ್ನ ನೇಮಿನಾಥಪುರಾಣದಲ್ಲಿ-
ಕಂ|| ಅದ್ಯತನನಾಗಿಯುಂ ನೆಗ |
ಟ್ರಾದ್ಯರ ದೊರೆಯೆನಿಸಿ ಮೆರೆದು ಸಾಹಿತ್ಯ ಕಳಾ ||
ಹೃದ್ಯತೆಯಿನೆಸೆದನಾ ನಿರ |
ವದ್ಯ ಗುಣಂ ಸಂದ ನಾಗಚಂದ್ರ ಕವೀಂದ್ರಂ ||
ಎಂದು ಹೊಗಳಿರುತ್ತಾನೆ; ಆದುದರಿಂದ ಪಂಪರಾಮಾಯಣವು ೧೧೪೦ ಕ್ಕೆ ಮೊದಲೇ ಹುಟ್ಟಿರಬೇಕು.
(೩) “ಮುನಿನಾಥಂ ದಶಧರ್ಮ ಧಾರಿ-ಎಂಬ ರಾಮಚಂದ್ರಚರಿತಪುರಾಣದ ಪದ್ಯವು (೧-೨೦) ಶ್ರವಣಬೆಳೊಳದ ೪೭ ನೆಯ ಶಾಸನದಲ್ಲಿ ದೊರೆಯುತ್ತದೆ. ಈ
- ಕರ್ಣಾಟಕ ಕವಿಚರಿತೆ, ೧-೮೦-೮೨