ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು


೩೩

ದ್ವಿತೀಯಾಶ್ವಾಸಂತನ್ನ ಮೊಮ್ಮನಪ್ಪ ಪುರಂದರಂಗೆ ನಿಜರಾಜ್ಯಮನಿತ್ತು ನಿರ್ವಾಣಘೋಷರೆಂಬ ಮುನಿ
ಮುಖ್ಯರ ಸಮಿಾಪದೊಳ್ ತಪೋರಾಜ್ಯದೊಳ್ ನಿಂದನಿತ್ತಲಾ ಪುರಂದರಂ ಸಕಲ
ಸಾಮ್ರಾಜ್ಯಸುಖ ಸುಧಾರಸದಿಂ ತಣಿದು ವಿಷಯವೈರಾಗ್ಯತತ್ಪರಂ ಕ್ಷೇಮಂಕರ
ಮುಮುಕ್ಷುಗಳ ಸಮಕ್ಷದೊಳ್ ದೀಕ್ಷೆಯಂ ಕೈಕೊಂಡು ನಿಲ್ವುದುಂ--

       ಕ೦|| ಕೀರ್ತಿಮುಖದಂತೆ ಕೀಲಿಸೆ
             ಕೀರ್ತಿ ದಿಶಾದಂತಿದಂತಮಂ ತದಪತ್ಯಂ||
             ಕೀರ್ತಿಧರನೆಂಬನರಸಂ
             ಕಾರ್ತಸ್ವರ ಕುಧರದಂತಿರಿಳೆಯಂ ತಳೆದಂ||೨೯||

        ಆ ಕೀರ್ತಿಧರ ನರೇ೦ದ್ರನೊಂದುದಿವಸಂ ಮಣಿಮಾಡದ ಮೇಲೆ ಮಣಿಮಯಾ ಸನದೊಳಾಪ್ತ ಪರಿಜನ ಪರಿವೃತನೊಡ್ವೋಲಗದೊಳಿರ್ಪುದುಮಾ ಸಮಯದೊಳ್---

        ಕಂ|| ಇನಮಂಡಲಮಂಸ್ವರ್ಭಾ
              ನು ನುಂಗೆ ಕಡುಗಂದಿ ಕುಂದುಗೊಂಡಿರ್ಪುದುಮಾ|
              ಜನನಾಥನದುವೆ ನಿರ್ವೇ
              ಗ ನಿಮಿತ್ತಮೆನಲ್ ವಿರಾಗಮಂ ಕೊಂಡಂ||೩೦||

              ಜಗಮಂ ಬೆಳಗುವ ಚೆ೦ಡಾ೦
              ಶುಗಮೀ ಸ್ಥಿತಿ ರಾಹುವಿಂದಮಾದತ್ತೆನಲೇ||
              ನುಗಿಬಗಿಮಾಡದೆ ಕಾಲೋ
              ರಗಮಸ್ಮದ್ವಿಧಮನನ್ಯ ರಾಜನ್ಯಕಮಂ||೩೧||

ಎಂದು ವೈರಾಗ್ಯ ಪರಿಣತಿಯಿಂ ಚತುರುದಧಿ ವಲಯ ವಲಯಿತ ಧರಿತ್ರಿಯಂ
____ಣಮಂ ಬಗೆವಂತೆ ಬಗೆಯೆ ಮಂತ್ರಿಮಂಡಲ ಮಹಾ ಸಾಮಂತರತಿ ಚಕಿತ
ಚಿತ್ತರಾಗಿ---

     ಮ|| ಪರಚಕ್ರಕ್ಕೆಡೆಮಾಡಿ ಭೂವಲಯಮಂ,ಬಂಡಾರಮಂ ಬಾಲ ವೃ
           ದ್ಧರನೀಡಾಡಿತಪಕ್ಕೆ ಪೋಪುದನಯಂ ಭೂಪಾಲ ನಿನ್ನಂ ಪುರ೦||
           ದರನೀ ರಾಜ್ಯಭರಕ್ಕೆ ಯೋಜಿಸಿ, ತಪೋರಾಜ್ಯಕ್ಕೆ ಮೆಯ್ದಂದನಂ
           ತಿರೆ, ನೀನಾಚರಿಸ್ಟಲ್ಲದಂದು ಧರೆ ಮಾತ್ಸ್ಯನ್ಯಾಯಮೇನಾಗದೇ

     ಅದರಿನನ್ವಯ ರಾಜ್ಯ ರಕ್ಷಣಾರ್ಥಮಾತ್ಮಜನಂ ಪಡೆದು ತಪಂಬಡುವುದೆಂಮ ಮಂತ್ರಿಮಂಡಲಮೊಡಂಬಡಿಸೆ ಕೀರ್ತಿಧರನೊಡಂಬಟ್ಟು ಪಲವುಕಾಲಮರಸುಗೆಯ್ಯು
ತಿರಲಾ ಮಹೀವಲ್ಲಭನ ಸಹದೇವಿವೆಸರ ಮಹಾದೇವಿಗೆ----