ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

34

ರಾಮಚಂದ್ರಚರಿತಪುರಾಣಂ

      ಕಂ|| ವೀನ ಕುಚಾನನದೊಳ್ ಕ
            ರ್ಪಾನನದೊಳ್ ಬೆಳ್ಪು ತೋರೆ ತೋರಿದುದಾ ಚ೦|
            ದ್ರಾನನೆಗೆ ಗರ್ಭಚಿಹ್ನಂ
            ಮಾನಸದೊಳ್ ತೋರೆ ಬೇರೆ ಹರ್ಷವಿಷಾದಂ||೩೩||

ಉ|| ಸಂತತಿ ರಾಜ್ಯ ರಕ್ಷಣೆಗೆ ಪುಟ್ಟಿದ ಸಂತಸಮು೦ಮಹೀಭುಜಂ|
     ಸಂತತಿ ಪುಟ್ಟೆ ಬಿಟ್ಟು ಧರೆಯಂ ತಪದೊಳ್ ತರಿಸಲ್ಗುಮೆಂಬ ಚಿ೦||
     ತಾಂತರಮುಂ ಮನಕ್ಕೆ ಬರೆ ಮಾಡಿದಳಾಕ್ಷಣದೊಳ್ ನರೇಂದ್ರಸೀ|
     ಮಂತಿನಿ ತದ್ವಿರುದ್ದ ರಸ ನಾಟಕ ರಂಗಮನಂತರಂಗಮಂ||೩೪||

     ಅಂತಾಕೆ ಗೂಢಗರ್ಭದಿಂ ಕೆಲವಾನುಂ ದಿವಸಕ್ಕೆ ಬಡವಂ ನಿಧಾನಮಂ ಪಡೆ
ದಂತೆ ಮಗನಂ ಪಡೆದು ಪೆರರರಿಯದಂತೆ ನಡಪುತಿರ್ಪುದುಂ--

     ಕಂ|| ಭೇದಿಸಿ ಸಹದೇವಿಗೆ ಮಗ
           ನಾದುದನೊರ್ವ೦ ಧನಾರ್ಥಿ ಮೆಚ್ಚಂ ಪಡೆವೊ೦||
           ದಾದರದಿನರಿಪೆ ಭೂಪತಿ
           ಗಾದುದು ಬಗೆ ಶ್ರೀರ್ದುದೀಗಳೆಂಬನುರಾಗಂ||೩೫||

ಮ|| ಮಗನಾದಂ ಸಹದೇವಿಗೆಂದೊಸಗೆದ೦ದಾತಂಗೆ ಚೆಂಬೊನ್ನರಾ|
     ಶಿಗಳಂ ವಸ್ತ್ರವಿಲೇಪನಾಭರಣಮಂ ಸಾಲ್ವನ್ನೆಗಂ ಕೊಟ್ಟನಾ||
     ಜಗತೀ ವಲ್ಲಭನೆನ್ನ ಪೂಣ್ಕೆ ತುದಿಗೆಯಿತ್ತೆಂಬ ಸಂಪ್ರೀತಿ ಕೈ|
     ಮಿಗೆ ಸಂಸಾರ ಶರೀರಭೋಗ ಪರಿನಿರ್ವೇಗಂ ತಪಃಪೀತಿಯಿಂ||೩೬||

ಕಂ||ತೊಟ್ಟಿಲ ಮಗಂಗೆ ಪಟ್ಟಂ
     ಗಟ್ಟಿ ಜರತ್ತೃಣ ಸಮಾನಮೆನೆ ವಸುಮತಿಯಂ।
     ಬಿಟ್ಟು ಜಿನದೀಕ್ಷೆಗೊಂಡಂ
     ಮುಟ್ಟುವಿನಂ ಕೀರ್ತಿ ದೆಸೆಗಳಂ ಕೀರ್ತಿಧರಂ

ಉ|| ಇತ್ತ ಸುಕೌಶಲಕ್ಕೊಡೆಯನಾಗಿ ಸುಕೌಶಲನೆಂಬ ನಾಮಮಂ|
     ಪೆತ್ತು ನಿರಂತರೋಪಚಯದಿಂ ನವಯೌವನನಾಗಿ ಮೀರಿದು||
     ದ್ವೃತ್ತರನಿಕ್ಕಿ ಸುತ್ತಣ ಕಡಲ್ವರೆಗಂ ನೆಲನಂ ನಿಮಿರ್ಚಿ ಭೂ।
     ಪೋತ್ತಮನಿಂತು ತನ್ನ ಜಸಮಂ ದೆಸೆಯಂತುವರಂ ನಿಮಿರ್ಚಿದಂ ||೩೮||


೧. ದೊಳ್, ಕ. ಖ. ಗ, ಘ.
೨. ವೇಳ್ದಾ, ಗ, ಘ