ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೪

ದ್ವಿತೀಯಾಶ್ವಾಸಂ



     ಕಂ||ಚತುರುದಧಿ ಮೇಖಲಾಲಂ
          ಕೃತ ವಸುಧಾದೇವಿಗಜ್ಜಗಾಪಿನವರ್ ದಿ||
          ಕೃತಿಗಳೆನೆ ಸಾರ್ವಭೌಮೋ
          ನ್ನತಿಯಂ ತಳೆದಂ ಸುಕೌಶಲ ಕ್ಷಿತಿನಾಥಂ||೩೯||

      ಆ ಸುಕೌಶಲನ ಜನನಿಯಪ್ಪ ಸಹದೇವಿ ಸಹಚರೀಸಮನ್ವಿತೆ ಮಣಿಮಾಡದ
ನೆಲೆಯ ಮಣಿಮಯಾಸನದ ಮೇಲೆ ಲೀಲೆಯಿಂ ಕುಳ್ಳಿರ್ಪುದುಮೊಂದುದಿವಸಂ--

      ಕಂ||ಊರಡವಿಯೆಂಬ ಬಗೆಯಂ
           ತಾರದತಿತ್ವರಿತಮಂದಮಲ್ತೆನೆ ಗತಿ,ಬಂ||
           ದೂರಂ ಯತಿಪತಿ ಪೊಕ್ಕಂ
           ತಾರಾಪತಿಯ೦ತೆ ಪಡೆದು ನಯನೋತ್ಸವಮಂ||೪೧||
        
      ಕಂ||ಮುನಿಯಂ ಕಂಡಾ ಕ್ಷಣದೊಳೆ
           ತನೂಭವಂ ದೀಕ್ಷೆಗೊಳ್ಗು ಮೆಂಬಾವೇಶಂ||
           ಮನದೊಳಿರೆ ಲೋಚನಾತಿಥಿ
           ಯನತಿಥಿಯಂ ಕಂಡು ಕಲುಷಮಂ ಕೈಕೊಂಡಳ್||೪೧||
  
           ಗುಣಹೀನೆ ಧರ್ಮಹಾನಿಯ
           ನೆಣಿಸದೆ ಪಾಪಕ್ಕೆ ಮಣಿಯದುಪವಾಸದ ಪಾ||
           ರಣೆಯಾಳೆ ಪೊಳಿಲಿಂದತಿ ದಾ
           ರುಣಮತಿ ಪೊರಮಡಿಸಿ ಕಳೆದಳಾ ಯತಿಪತಿಯಂ||೪೨||

ಮ|| ಸತಿ ಮುನ್ನಂ ತನಗೆಂಬಿದಂ ಬಗೆದಳಿಲ್ಲಿಕ್ಷ್ವಾಕುವಂಶಾವನೀ|
     ಪತಿ ಲೋಕ ಸ್ತುತನೆಂಬುದಂ ನೆನೆದಳಿಲ್ಲೀಗಳ್ ತಪೋಮಾರ್ಗ ವಿ||
     ಶ್ರುತನೆಂಬುನ್ನತಿಯಂ ವಿಚಾರಿಸಿದಳಿಲ್ಲಾ ಕಾಂತೆ ದುರ್ಮೋಹದಿಂ|
     ಮತಿಗೆಟ್ಟಾ ಯತಿಯಂ ಪರಾಭವಿಸಿ ಚರ್ಯಾವಿಘ್ನಮಂ ಮಾಡಿದಳ್||೪೩||

     ಆಗಳದಂ ಕಂಡು ಸುಕೌಶಲನ ದಾದಿಯಪ್ಪ ವಸಂತಮಾಲೆ ಕೀರ್ತಿಧರ
ನರೇಂದ್ರನಪ್ಪುದನರಿದು--
     ಕಂ||ಅಪಮಾನಮಂ ಸುಕೌಶಲ
          ನೃಪಾಲ ಜನಕಂಗೆ ಪತಿಗೆ ಕೀರ್ತಿಧರ ಕ್ಷ|
          ತ್ರ ಪವಿತ್ರಂಗೊಡರಿಸಿದಳ್
          ವಿಪರೀತಮಿದೆಂದು ನೊಂದು ಶೋಕಂಗೆಯ್ದಳ್||೪೪||

ಆಗಳ್--