ದಾರುತ್ತುಂ ಗೆಲೆ ಕಾದೆ ಲಕ್ಷ್ಮಣನೊಳಂ ಕಂಡಂತದಂ ಲೋಕ ಸಂ|
ಹಾರಂಮಾಳ್ಪಿ ಕೃತಾಂತನಂತೆ ರಘುಜಂ ಕೊಂಡಂ ಧನುರ್ದಂಡಮಂ||೬೨||
ಚ॥ ಒದವಿದ ಚಾಪಟಂಕೃತಿ ಭಯಂಕರಮಾಗೆ ವರೂಥಭಾರದಿಂ|
ದದಿರೆ ನೆಲ ಮನಃಪವನವೇಗದಿನೆಯ್ದಿ ಬಲಂ ಮಹಾಬಲಂ||
ಕದನ ಮದಾವಿಲ೦ ಕರೆಯೆ ಬಲ್ಸರಿಯೆಂಬಿನಮಂಬನಂಬು ನ|
ಟ್ಟುದೆ ನೆರನಾಗೆ ಕೂಡೆ ಗತಜೀವಿತಮಾಯ್ತು ಕಿರಾತ೧ಸಾಧನಂ||೬೩||
ಆಗಳ್--
ಕಂ||ಗೆಲ್ದಾರೆ ಜನಕಸೇನೆ ಸ
ಡಿಲ್ದಗಿಯೆ ಕಿರಾತಸೇನೆ,ದಶರಥರಾಮಂ||
ಬಿಲ್ಲೆಗೆದಿಸೆ ಮಾರ್ಪಡೆಯೊಳ್
ಬಲ್ದಲೆಯರ್ ಶಬರನಾಯಕರ್ ಪಡಲಿಟ್ಟರ್||೬೪||
ಆ ಸಮಯದೊಳ್ ಲಕ್ಷ್ಮಣಂ ಲಯಸಮಯ ಸಮುತ್ಪಾದನ ಸಮಗ್ರ ವೀರ ಗ್ರಹಾವೇಶಮನಪ್ಪುಕೆಯ್ದು--
ಕಂ|| ಪಾರದೆ ಕೈದುವ ಬಲಮಂ
ಪಾರದೆ ನೆರವಲಮನೊಂದೆ ತೋಳ್ವಲಂ ಸಂ||
ಹಾರಿಸಿದಂ ಮಾರ್ಬಲಮಂ
ವಾರಿಜನಾಭಂಗೆ ಸಂಗರಕ್ಕಿದಿರುಂಟೇ||೬೫||
ಅ೦ತು ರಾಮಲಕ್ಷ್ಮಣರ್ ಕಡಂಗಿ ಕಾದುವಾಗಳವರ ಬಲಕ್ಕೆ ಸುಗಿದು
ಮೆಯ್ದೆಗೆವ ಬೇಡವಡೆಯಂ ಕೂಡಿಕೊಂಡು--
ಚ|| ಅದಿರದಿದಿರ್ಚಿ ತಾಗಿದ ತರಂಗತಮಂ ದಿನನಾಯಕ೦ಗಿದಿ|
ರ್ಚಿದ ತಮದಂತೆ ಮೆಯ್ದೆಗೆಯೆ ಮಾರ್ಬಲದಾನೆಗೆ ಕೂಟಪಾಕಳಂ||
ಕುದುರೆಗೆ ೨ಕರ್ಣದೂಷಿಕೆ ರಥಕ್ಕೆ ಸಿಡಿಲ್ ಭಟಮಂಡಲಕ್ಕೆ ಕೆಂ|
ಡದ ಮಳಿಯೆಂಬಿನಂ ಕರೆದನ೦ಬಿನ ಪೆರ್ಮಳಿಯಂ ಹಲಾಯುಧಂ||೬೬||
ಉ|| ಕಾದಲಿದಿರ್ಚಿ ಕೈದುವಿಡಿಯಲ್ಬಗೆದರ್ಪುದು ಮೊಗ್ಗೆ ಮಂಜಿನಂ|
ತಾದುದು ನಂಜನೆಂಜಲಿಸಿದಂತೆವೊಲಾದುದು ಬೇಗೆ ಪರ್ವಿದಂ||
1. ಸಂಕುಲಂ. ಕ, ಖ. ; ಸೈನಿಕ೦ ರ, ಫ.
2: ದಂತ, ಚ.