ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೯

ಚತುರ್ಥಾಶ್ವಾಸಂ

ಉ|| ಮುತ್ತಿನ ಪೊನ್ನ ಪೆರ್ದುಡುಗೆಯಂ ವಸನಂಗಳನಿತ್ತರಣ್ಯದೊಳ್||
     ನಿತ್ತರಿಪಂತು ನಾಡ ಗಡಿಯಂ ಮುರಿದುಂ ಪುಗದಂತವಂಗೆ ಭೂ||
     ಪೋತ್ತಮನಾಜ್ಞೆಯೆಂಬ ಮಣಿಮಂಡನಮಂ ನಡುನೆತ್ತಿಗಿತ್ತು ದಿ|
     ಗ್ಭಿತ್ತಿಗೆ ಕೀರ್ತಿಚಂದನ ವಿಲೇಪಮನಿತ್ತನಿದೇನುದಾತ್ತನೋ||೭೪||

     ಕಂ|| ಪ್ರಬಲನಬಲನವೊಲಂತಾ
           ಶಬರಂ ಬೀಳ್ಕೊಂಡು ಬೇಗನೆಂದುದನೇಗೊ೦||
           ಡು ಬರ್ದು೦ಕಿ ಪೋದನೆನೆ ರಾ
           ಮಬಾಣಮಂ ಕದನಭೂಮಿಯೋಳ್ ಮೀರುವರಾರ್||೭೫||

      ಆಗಳನೇಕಮಂಗಳಾನಕ ರವಂಗಳೊಡನೆ--
      
      ಕಂ॥ ನಗುವಂತೆ ಪೆರರ ಬಿಲ್ಬ
           ಲ್ಮೆಗಳಂ ತಣ್ಬೆಳಗನುಗುಳೆ ಪೂಜಿಪ ನೆವದಿ೦||
           ಜಗದಧಿಪ ಧನುರ್ಗುಣಮಂ
           ತ್ರಿಗುಣಿಸಿದಂ ತೋರಮುತ್ತಿನೇಕಾವಳಿಯಿಂ||೭೬||

      ಅಂತು ಪೂಜಿಸಿ--

ಉ|| ಮಾರಣಮಂತ್ರ ನಾದಮೆನಿಸಿತ್ತು ವಿರೋಧಿಗೆ ಶಾ೦ತಿಕಕ್ರಿಯಾ|
     ಕಾರಣ ಮ೦ತ್ರನಾದಮೆನಿಸಿತ್ತು ಧರಿತ್ರಿಗೆ ಮೃತ್ಯು ವಂಚನೋ||
     ಚ್ಚಾರಣ ಮಂತ್ರನಾದಮೆನಿಸಿತ್ತೆಮಗಚ್ಚರಿ ನಿನ್ನ ಚಾಪ ಟಂ|
     ಕಾರ ನಿನಾದಮೊಂದೆ ಪಲವುಂ ತೆರನಂ ತಳೆದಂದಮಾವುದೋ||೭೭||
 
     ಕಂ||ಏನಂ ಪ್ರತ್ಯುಪಕಾರಮ
          ನಾನೊಡರಿಸುವೆಂ ಕುಮಾರ ಕನ್ನೆಯನಿತ್ತೆ೦||
          ಮೇನಕೆಯಿಂ ಮಿಗಿಲೆನಿಸಿದ
          ಜಾನಕಿಯಂ ಮದನ ವಶ್ಯ ಮಣಿದೀಪಿಕೆಯಂ||೭೮||

          ಅನುಬಂಧಮನ್ವಯಾ ಗತ
          ಮೆನಿಸಿದುದದನಧಿಕಮಾಗೆ ಮಾಲ್ಪೆನುನಯದಿಂ||
          ದನನುಗುಣ ಸಸ್ಯ ಸಂಪಾ
          ದನ ಸೀತೆಯೆನಿಪ್ಪ ಸೀತೆಯಂ ನಿನಗಿತ್ತೆಂ||೭೯||

      ಎಂದು ನುಡಿದು ರಾಮನುಮಂ ಸೌಮಿತ್ರಿಯುಮಂ ವಿಚಿತ್ರ ವಸ್ತ್ರಭೂಷಣಾದಿ