ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪ೦ಚಮಾಶ್ವಾಸಂ


ಗಳ ಸವನಂ ವಿಳಾಸವತಿ ಸೀತೆಗೆ ದಿಕ್ಕಟಮಂ ಪಳಂಚೆ ಮಂ |
ಗಳ ಪಟಹ ಸ್ವನಂ ಪುದಿಯೆ ಮಂಗಳ ಗಾಯಕ ಗೀತ ನಿಸ್ವನಂ || ೩೯ ||

ಕ೦ || ಹಿಮ ಕಿರಣ ಮಾಲೆ ಮುಸುಕಿದ
ಕುಮುದಿನಿಯ ಬೆಡಂಗು ತನಗೆ ಪುದುವೆನೆ ಮೃಗನೇ ||
ತೈ ಮನಂಗೊಂಡ೪೯ ಮಲಯಜ
ಹಿಮ ಕರ್ದಮ ಕಲಿಲ ಸಲಿಲ ಸವನೋತ್ಸವದೊಳ್ || ೪೦ ||

ಆ ಮಂಗಲಸವನ ಸಮಯಾನಂತರಂ ಜಾನಕಿ ನೀರಾಜನ ವಿರಾಜಮಾನೆ ಧಾರಾನಿಳಯ ಜಲಯಂತ್ರ ಪುತ್ರಿಕೆಯಂತೆ ನಯನ ಪುತ್ರಿಕೆಗೆ ಮಣಿಭೂಷಣಮೆನಿಸಿ ಪಳಿಕಿನ ಪಟ್ಟವಣೆ ಕೇಸಡಿಯ ಕೆಂಪಿನಿ೦ದರುಣಮಣಿಯನೊಟ್ಟಿಗೆ ಮೆಟ್ಟಿ ನಿಲ್ಲು ದುಮಾ ನಿತಂಬಿನಿಯ ನಿತಂಬ ಸೂತ್ರದೊಳ್ ತೊಡರ್ಚಿದ ತೋರಮುತ್ತುಗಳಂತೆ ಯುಂ, ಆ ವೃತ್ತ ಕುಚೆಯ ಕುಚಕಳಶದೊಳೊಸರ್ವ ಲಾವಣ್ಯರಸ ಬಿಂದುಗಳಂತೆ ಯುಂ, ಆ ಕನಕ ಕೇತಕೀ ದಳನಖೆಯ ನಖಮುಖದೊಳುಣ್ಮುವ ಮಯೂಖ ಮಂಜರಿ ಯಂತೆಯುಂ, ಆ ಪಲ್ಲವಾಧರೆಯಧರಪಲ್ಲವದೊಳ್ ಪೊಳೆವ ದರಹಾಸ ಕಳಿಕೆಯಂತ ಯು೦, ಆ ಚಳಾಳಕೆಯಳಕವಲ್ಲರಿಯೊಳ್ ಬೆಳರ್ತ ಬಿರಿಮುಗುಳಂತೆಯುಂ, ಓರೊಂದೆ ಜಲಬಿಂದು ಬಿಡುತರ್ಪುದುಂ-

ಕಂ || ಆ ರಮಣಿಯ ತನುಲತೆಯಿಂ
ವಾರಿಕಣ ಪ್ರಚ ಯಮರ ದುಕೂಲಾಂಚಲದಿ೦ ||
ವಾರಾಂಗನೆಯರ್ ತೊಡೆದರ್
ನೀರ೦ಜಿಸುವಂತೆ ಮಣಿಶಲಾಕೆಯನಾಗಳ್ || ೪೧||

ಮ || ನಗೆಗಣ್ ಸೂಸೆ ವಿಳಾಸಮಂ ನಗೆಮೊಗಂ ಲಾವಣ್ಯವಂ ಬೀಜತಿ ಸಾ |
ವಗಿಸುತ್ತುಂ ಕಚ ಬಂಧಮಂ ಶಿಥಿಲ ನೀವೀಬಂಧಮಂ ಕಾಂಚಿಯೊಳ್ ||
ತೆಗೆಯುತ್ತುಂ ಸ್ಮರಮಂತ್ರ ದೇವತೆಯವೋಲ್‌ ಬಾಹಾ ಲತಾಂದೋಳನಂ |
ಬಗೆಯ ಬಲ್ಸೆ ಜತೆಗೆಯ್ಯ ಬಾಲೆ ಮೆಜದಳ ಲೀಲಾ ಪದನಾ ಸಮo ||೪೨

ಅಂತು ಬಂದು ಚೆಂಬೊನ್ನ ಕನ್ನೆ ಮಾಡದ ಮೊಗಸಾಲೆಯೊಳಿಕ್ಕಿದ ಮುತ್ತಿನ ಬಿತ್ತರಿಕೆಯೊಳ್ ಕುಳ್ಳಿ ರ್ಪುದುಂ ಮೇಳದಂಗನೆಯರ್ ಮಂಗಳ ಪಸದನ೦ಗೊಳಿಸಲ ವಸರಂಬಡೆದು ವಿಚಿತ್ರ ಚೀನಾ೦ಬರಮಂ ನಿವಿಡಿದುಡಿಸಿ, ಕೆಂದಾವರೆಯನೆಳವಿಸಿ ಲೆಳಸಿದ೦ದಮಾಗೆ ಲಾಕ್ಷಾರಸದಿನಡಿಯೂಡಿಯುಂ, ಚರಣನಖ ಚಂದ್ರ ಮಾಲೆಗೆ ನಕ್ಷತ್ರಮಾಲೆಯನೋಲಗಿಸುವಂತೆ ಮುಕ್ತಾಫಲ ನೂಪುರಮಂ ತುಡಿಸಿಯುಂ, ಪುಳಿನ ವಳಯಮಂ ಪೊಂದಾವರೆಯ ಬಳ್ಳಿ ಬಳಸಿದಂತೆ ನಿತಂಬ ವಳಯದೊಳ ಮಣಿ