ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪ೦ಚಮಾಶ್ವಾಸಂ

೧೧೩

ಯಂತೆಯುಂ ಕನ್ಯಕಾ ಕದಂಬದ ಬಳಸಿ೦ ಬಗೆಗೊಳಿಸಿ ನಿಖಿಲಜನ ಮನಃಪೀಠ
ದೊಳ್ ಮನಸಿಜಂ ಪ್ರತಿಷ್ಠೆಗೆ ರತಿಯಂತೆ ನಿರತಿಶಯವಾಗಿರ್ಪುದುಂ

ಕಂ || ಸಕಳೇಂದು ಮುಖಿಯನಾ ಕ
ನಿಕೆಯಂ ಕಣ್ಣಲ್ಲು ನೋಡಿ ಮತ್ತೊಲ್ವಂ ಕೌ ||
ತುಕದಿಂದೆಮೆಯಿಕ್ಕದೆ ರಾ
ಜ ಕುಮಾರಂ ಸುರ ಕುಮಾರನಂ ಗೆಲೆವಂದಂ ||೫೮||

ತರುಣಿಯ ಲಾವಣ್ಯ ರಸಾಂ
ಬುರಾಶಿಯೊಳ್ ತೇಂಕೆ ತನ್ನ ಕಣ್ಣ ಮನಮುಂ ||
ಮರವಾನಸನ೦ತೋರ್ವ೦
ಸ್ಮರ ಸಮ್ಮೋಹನ ಶರಕ್ಕೆ ಗುರಿಯಾಗಿರ್ದಂ || ೫೯ ||

ಅಳವಡಿಸುವಂತೆ ಮಣಿಕುಂ
ಡಳಮಂ ನಸು ಮುರಿದು ಜನಕಸುತೆಯ ಕಪೋಲ ||
ಸ್ಥಳಮಂ ಮೃಗಮದ ಪತ್ರಾ
ವಳಿ ವಿಳಸಿತಮಂ ಮರುಳು ನೋಡಿದನೊರ್ವ೦ || ೬೦ ||

ತಳವೆಳಗಾದಂ ವನಿತಾ
ತಿಳಕದ ಪೆಜತೆ ನೊಸಲ ರೋಚನಾ ತಿಲಕದ ಚೆ ||
ಲೈಕುಳಿಗೊಳೆ ಸಮ್ಮೋಹನ
ತಿಳಕದವೋಲ್ ಮನಮನವನಿಪಾಲಕ ತಿಲಕಂ || ೬೧ ||

ಬಾಳೆಯ ಸೋರ್ಮುಡಿ ಮನಸಿಜ
ಕಾಳೊರಗನಂತೆ ಮನದೊಳಾ ಕಂಪನಮಂ ||
ಮೇಳಿಸೆ ಮತ್ತೊರ್ವ೦ ಭೂ
ಪಾಳಂ ಪಾವಡರ್ದನಂತೆ ಬೆಳಗಾಗಿರ್ದ೦ || ೬೨ ||

ಮ || ತನು ರೋಮಾಂಚಮನಸ್ಸು ಕೆಯ್ಕೆ ನೃಪನೊರ್ವ೦ ಕನ್ಯಕಾರೂಪ ದ |
ರ್ಶನದಿಂ ತತ್ಪುಲಕಂಗಳಂ ಕಲ ವಿಸಂಚೀ ನಾದಮಂ ಕೇಳು ಭೋಂ ||
ಕನೆ ಮೇಲ್ವಿರ್ಚಿದುವೆಂದು ಬಂಚಿಸಿಯುಮೇಂ ಮೇಲ್ವಾಯ್ಯದಂಲೋಲಲೋ |
ಚನಮಂ ತಾಂಗಿದನಿಲ್ಲ ಜಾನಕಿಯ ಸೌಂದರಕ್ಕಿದಾಶ್ಚರ ಮೇ || ೬೩ ||

ಉ || ಪಲ್ಲವ ಪಾಟಲಾಧರೆಯ ಪೀವ ಪಯೋಧರ ಮಂಡಲಂಗಳಾ |
ಪಲ್ಲಹರೀ ಪರಂಪರೆಯನೀಯ ಸಮುತ್ತು ಕ ಲೋಚನ ಪ್ರಭಾ || 8