ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೨೫

ಉ || ಕತ್ತುರಿಬೊಟ್ಟನಿಟ್ಟು ಬಿಡುಮುತ್ತಿನ ಸೇಸೆಯನಿಕ್ಕಿ ಮಾಲೆವೂ |
ವೆತಿ ವಿಚಿತ್ರ ವಸ್ತ್ರ ಮಣಿಭೂಷಣಮಂ ಮಣಿಭಾಜನಂಗಳಿ೦ ||
ದಿತ್ತು ವಿದೇಹಿ ಸಾರ ಘನಸಾರದ ರನ್ನದ ಬಾಯಿನ೦ಗಳಿ೦ |
ಚಿತ್ತ ವಿಕಾಸಮಂ ಪಡೆದಳಂದಪರಾಜಿತೆಗಂ ಸುಮಿತ್ರೆಗಂ || ೧೨೮ ||


ಆ ಸಮಯದೊಳ್ ಜನಕನಭಿಜನ ಸನಾಭಿಜನ ಸಮನ್ವಿತಂ ಗಣಕ ಗಣ
ಪುನಃಪುನರುಚ್ಚರಿತ ಪುಣ್ಯಾಹ ಪ್ರಶಸ್ತ ರವದೊಡನೆ ಅಗಣ್ಯ ಪುಣ್ಯ ಪುಣ್ಯಾ೦ಗನಾ
ಜನದಾಶೀರ್ವಾದನಾದಮೊದವೆಯುಂ, ಮಾಂಗಲ್ಯ ಗೀತ ಮಧುರ ಧ್ವನಿಗಳೊಡನೆ
ಮಂಗಲ ಪಾಠಕ ಪಠನ ಧ್ವನಿಗಳು ಪೊಣೆಯುಂ , ರಘುಕುಲ ರಾಜ ಭವನ ಕಲ
ಶೋದ್ಧರಣಮೆನಿಸಿ ಶುಚಿ ಸುರಭಿ ಸಲಿಲ ಪೂರ್ ಸುವರ್ಣ ಕಲಶಮನೆತ್ತ -

ಮ || ಜಗತೀ ಜಂಗಮ ಕಲ್ಪವೃಕ್ಷಮಿದೆ ಕೈವಂದನಲ್‌ ಬಾಹು ಶಾ |
ಖೆಗಳೊಳ್ ಪೊಂಗಳಸಂ ಮನಂಗೊಳಿಸೆ ಭೂಪಂ ತನ್ನ ಸಂತಾನ ವೃ ||
ದ್ವಿಗೆ ಪೊಯ್ಯಾರೆಜಿವಂತೆ ಹರ್ಷ ಪುಲಕಂ ಕೈಗ ಹರ್ಷಾಶ್ರು ಕೈ |
ಮಿಗೆ ಕೈನೀರೆರೆದಂ ಪಳಂಚೆ ದೆಸೆಯಂ ಮಾಂಗಲ್ಯ ತೂರ್ ಸ್ವನಂ || ೧೨೯ ||

ಅಂತು ಪಾಣಿಗ್ರಹಣಂಗೆಯಿಸುವುದುಂ-

ಕಂ || ತೆಂಕಣ ಗಾಳಿಯ ಸೋಂಕಿನೊ
ಳಂಕುರಿಸಿದ ಚೂತಲತೆಯವೊಲ್ ಕೆಂದಳಮಂ ||
ಸೋ೦ಕೆ ಬಲ ಕರತಳಂ ಪುಳ
ಕಾಂಕುರ ಮೊದವಿದುವು ಜಾನಕಿಯ ತನುಲತೆಯೊಳ್ || ೧೩೦ ||


ಅಪಮಾನಿಸಿದಂ ಬಾಲಾ
ತಪಮೆಳಸಿದ ಪುಂಡರೀಕ ಷಂಡದ ಸೊಬಗಂ ||
ಚಪಲಾಕ್ಷಿಯ ಕೋಮಳ ಪಾ
ಣಿಪಲ್ಲವ ಸ್ಪರ್ಶ ಹರ್ಷದಿಂ ರಘುರಾಮಂ ||೧೩೧||

ಅತಿ ಲಲಿತಾಕೃತಿಯಂ ದಂ
ಪತಿಯಂ ನೋಡಿದುದು ಪುರಜನಂ ನೋಡುವವೋಲ್ ||
ಶತಮಖನಂ ಶಚಿಯಂ ರತಿ
ಪತಿಯಂ ರತಿಯಂ ಹಿಮಾಂಶುವಂ ರೋಹಿಣಿಯಂ ||೧೩೨ ||

ಅ೦ತು ನೆರೆದು ನೋಟ್ಯಾಗಳ್-


1. ನಿಸಿದ ರಾಮಚಂದ್ರಂಗ ಸುರುಚಿರ. ಗ. ಘ.