ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಪ೦ಚಮಾಶ್ವಾಸಂ
೧೨೬

ಜಿತಕಂತುಗೀ ಜಿತ ಮನೋಭವಕಾಂತೆಗೆನುತ್ತು ಮಂಗನಾ |
ರಾಜಿ ನಿರೀಕ್ಷಿಸಿತ್ತು ರಘುನಂದನನಂ ಜನಕಾತ್ಮಜಾತೆಯಂ ||೧೩೯||

ಚ || ತೋಡವುಗಳೇ ಸರೋಜದಳ ನೇತ್ರೆಯ ಮೆಯ್ಯೋಳಗಿಂದುಪಾಶ್ರಯಂ |
ಬಡೆದುವು ನೋಿರುಮ್ಮಳಿಸುವಂತಿರೆ ರತ್ನ ವಿಭೂಷಣಂಗಳಿ ||
ರ್ದೆಡೆಯ ವಿಳಾಸಮಂ ಮಣಿಸಿದ ಪ್ಪುವೆನಲ್ ತೊಡವಾಕೆಗೊಪ್ಪನಂ |
ಪಡೆವೆಡೆಗಲ್ಲಮಾ ವಧುಗೆ ಮಂಗಳಕಾರಣಮಲೆ ಭೂಷಣಂ || ೧೪೦||

ಎಂದು ಪುರಜನಂಗಳತಿ ಕುತೂಹಲದಿನವಲೋಕಿಸುತ್ತಿರ್ಪುದುಮಾ ವಿವಾಹ
ಮಂಗಲ ಮಹೋತ್ಸವ ಮಹಾಮಹಿಮೆಯೊಳ್ -

ಮ || ಸ್ನ | ಪೆಅರಾರಿಂತಿವರೆಂಬೀ ಜನದ ಕಳಕಳ೦ ಪೊಣ್ ಸಾಮ್ರಾಜ್ಯ ಚಿಹ್ನ೦|
ಫೋಜಿಗಾಗತ್ಯ೦ತ ವಸ್ತಾದಿಗಳನಖಿಲ ಲೋಕಕ್ಕೆ ಸಂಕಲ್ಪವರ್ಷ೦ |
ಕಳೆದತ್ತೆಂಬಂತು ಧಾತ್ರೀಪತಿ ಜನಕನುದಾತ್ತಂ ಮಹೋತ್ಸಾಹಚಿತ್ತಂ |
ನೆಜಿರೆದಲ್ಲೆನ್ನ ದಾನಕ್ಕಖಿಲ ಜನಮೆನುತ್ತುಂ ಮೊಗ೦ನೋಡದಿತ್ತ ||೧೪೧||

ಅ೦ತು ಜನಕಂ ಬೀಯದ ಚಾಗದ ಪೆರ್ಮೆಯಂ ಮೆರೆವುದುಂ ರಾಮ
ಚಂದ್ರಂ ಚಂದ್ರೋದಯದ ಸಮುದ್ರದಂತೆ ಪೆರ್ಚುವಡೆದು -

ಮ || ಪಡೆದಂ ಶಾಶ್ವತಲಕ್ಷ್ಮಿಯಂ ಪರಹಿತ ವ್ಯಾಪಾರಮಂ ಪಾಲಿಸ೮೯ |
ಪಡೆದಂ ಪನ್ನಗರಾಜ ದಿವ್ಯ ಧನುವಂ ಭೂಚಕ್ರಮಂ ರಕ್ಷಿಸಲ್ |
ಪಡೆದಂ ದರ್ಪಕ ರೂಪ ದರ್ಪಮನದಿರ್ಪಲ್ ಮೂರ್ತಿಯಂ ಕೀರ್ತಿಯಂ |
ಪಡೆದಂ ಕೀಬ್ಸಿಡಿಸಲ್ ಸುಧಾಜಲಧಿಯಂ ಸಾಹಿತ್ಯ ವಿದ್ಯಾಧರಂ || ೧೪೨||

ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರ ಬಾಳಚಂದ್ರ
ಮುನೀಂದ್ರ ಚರಣ ನಖ ಕಿರಣ ಚಂದ್ರಿಕಾಚಕೋರ ಭಾರತೀ
ಕರ್ಣಪೂರ ಶ್ರೀಮದಭಿನವಪಂಪ ವಿರಚಿತಮಪ್ಪ
ರಾಮಚಂದ್ರ ಚರಿತ ಪುರಾಣದೊಳ್
ಸೀತಾ ಸ್ವಯಂವರ ವರ್ಣನಂ
---ಪಂಚಮಾಶ್ವಾಸಂ---