೧೩೮
ಮ|| ಮಣಿಘಂಟಾ ಮಣಿಕಿಂಕಿಣೀ ಮಣಿವಿತಾನ ಸ್ವರ್ಣ ಲಂಭೂಷ ಭೂ |
ಷಣಮಂ ರತ್ನ ವಿಮಾನನಂ ಭರತನುಂ ಶತ್ರುಘ್ನನುಂ ರಾಮಲ ||
ಕ್ಷಣರುಂ ತನ್ನೊಡನೇ ಸೋ೦ಕಿ ಬರೆ ಸೋತ್ಸಾಹ ಹರಿದತ್ನ ತೋ |
ರಣ ಶೋಭಾವಹಮಂ ನರೇಂದ್ರ ಗೃಹಮಂ ಪೊಕ್ಕಂ ಪ್ರಭಾಮಂಡಲ೦ ||೪೩||
ಅ೦ತು ಪುಗುವುದುಂ ಕುಮಾರನಂ ಮಣಿಮಯಾಸನದೊಳಿರಿಸಿ ಮಧುಪರ್ಕ
ಪೂರ್ವಕಮಪಾರ ಸಾರ ವಸ್ತ್ರಾಭರಣ ವಸ್ತು ವಾಹನಂಗಳಿಂ ಪೂಜಿಸಿ ಬಲಿಯಂ ಜನ
ಕಂಗೆ ಬಲಿಯನಟ್ಟುವುದು, ವಿದ್ಯಾಧರಮಹತ್ತರಂ ಪವನವೇಗನೆಂಬಂ ಮನಃ
ಪವನವೇಗದಿಂ ಮಿಥಿಳೆಯನೆ ರಾಜಮಂದಿರಮಂ ಪೊಕ್ಕು-
ಕಂ || ನಮಿತಂ ಖಚರಾನುಚರಂ
ಕ್ರಮದಿಂ ತಿಳಿವಂತು ತನಗೆ ತನಯನ ವೃತ್ತಾ೦ ||
ತಮನಸೆ ಜನಕನತಿ ಸಂ
ಭ್ರಮಚಿತ್ತಂ ಪದೆದು ಪಲವುಸೂತ್ಸೆಸಗೊಂಡಂ || ೪೪ ||
ಮ || ಕೊಲಲೆ೦ದುಯ್ದ ನಿಶಾಚರಂ ಖಚರರಾಜಂಗುದ್ದು ಕೊಟ್ಟಂ ಗಡಂ |
ಕುಲನಿಸ್ತಾರಕನೆನ್ನ ದಾರಕನನಾ ತಂ ಬಂದು ಸಾಕೇತದೊಳ್ ||
ನೆಲಸಿರ್ದ೦ ಗಡ ಸೈಪು ಕಣ್ಣೆದುದೆಂದಾನಂದಬಾಷ್ಪಾಂಬು ಕ |
ಟ್ರೈಲರಿಂ ಕೈಗುಣವಾಗಿ ಪೊಣೋ ಜನಕಂ ರೋಮಾಂಚಮಂ ತಾಳಿದಂ ||೪೫ ||
ಅ೦ತು ಹರ್ಷರಸ ತರಂಗಿತಾಂತರ೦ಗನಾಗಿ-
ಕಂ || ತನುಜಾಗವನೋತ್ಸವವುಂ
ತನಗಱಸಿದ ಖೇಚರಂಗೆ ನಿಜರಾಜ್ಯಮನೀ||
ವನಿತುವರಮಧಿಕರಾಗಂ ಜನಿಯಿಸೆ ಜನಕಂ ನಿಜಾಂಗಚಿತ್ತಮನಿತ್ತಂ||೪೬||
ಅನಂತರಂ-
ಕಂ || ರವಿರಥಮನುತ್ಸವ ಧ್ವಜ
ನಿವಹಂ 'ತುಡುಕಿದುವು ಕೆದಅದುವು ಪೂವಲಿಗಳ್ ||
ಕಿವಿ ಶಬ್ದಂಗೆಟ್ಟರೆ ಬ
ದೃವಣಂ ಬಾಜಿಸಿದುವೊಡನೆ ಮಿಥಿಳಾಪುರದೊಳ್ ||೪೭ ||
1. ವಿಸ್ತಾರಕ. ಗ. 2. ವತಿದುವು. ಚ.