ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೫

ಸಪ್ತಮಾಶ್ವಾಸಂ

ಅಕ್ಕರ || ಸಾವ ಪುಟ್ಟುವ ಭಯಮಂ ಸಂಸಾರಮಂ ಸಪ್ತಧಾತುಜಮಂ ದೇಹಸ್ಥಿ
ತಿಯ |

ನಾವವಸ್ತುವನುಂಡೊಡಂ ತಣಿಯದ ಕಾಂಕ್ಷೆಯಂ ಬಗೆದು ತನ್ನೋ ||
ಠೇವುದೀ ತೊಡರ್ಸೆನಗಿದೇಕೆಂದು ದಶರಥಂ ಭಾವಿಸಿ ಭಾವಿತಾತ್ಮನಂ |
ಭಾವಿತಾನಂ ಪರಮಯೋಗೀಂದ್ರನಂ ಬೀಜಿಂಡಯೋಧ್ಯೆಗೆ ಬಂದ
ನಾಗಳ್ || ೭೩ ||


ಅಂತರಮನೆಯನಧಿರಾಜಂ ಪೊಕ್ಕು ನಿರ್ವತಿ್ರತ ನಿತ್ಯ ನಿಯಮನಾಸ್ಥಾನ
ಮಂಟಪ ಮಧ್ಯ ಸ್ಥಿತ ಸಿಂಹಾಸನವನಲಂಕರಿಸಿ ರ್ಪುದುಂ-

ಚ || ನೆಲಸಿದ ರಾಜಮಂಡಲಿಯ ಮಂಡಳಿಕರ್ಕಳ ದಂಡನಾಥ ಮಂ |
ಡಲಿಯ ನಿಯೋಗಿ ವರ್ಗದ ಪುರೋಹಿತ ವರ್ಗದ ಮಂತ್ರಿ ವರ್ಗದು ||
ಜ್ವಲ ನವರತ್ನ ಭೂಷಣ ಕಿರೀಟ ಹಟದ್ರುಚಿಯಿಂದದೇಂ ಪಳಂ |
ಚಲೆದುದೊ ರಾಜರಾಜಸಭೆ ಕುಂಭಜನೀ೦ಟದ ತೋಯ ರಾಶಿಯಂ || ೭೪ ||

ಕ೦|| ಗುರು ಜನಮುಮಾಪ್ತ ಜನಮುಂ
ಪರಿಜನಮುಂ ಬಂಧು ಜನಮುಮಾಶ್ರಿತ ಜನಮುಂ ||
ಪರಿಜನಮುಂ ತಿ೦ತಿಣಿಯಾ
ಗಿರೆ ಸಭೆಪೋಲ್ಕತ್ತು ರತ್ನಮೇಳಾಸಕನಂ ||||೭೫ ||

ಅ೦ತೊಡೋಲಗಂಗೊಟ್ಟು ದಶರಥ ಮಹೀನಾಥಂ ನಿಜ ತನೂಭವರಂ ಬರವೇ
ಟ್ವಿಟ್ಟುವುದುಂ ತದಾಜ್ಞೆಯಂ ತಲೆಯೊಳಾಂತು-

ಚ || ಹಲ ಮುಸಲಾಯುಧಂ ನಡೆವ ತಾರ ನರೇಂದ್ರಮನೊಂದು ಕರ್ಮುಗಿಲ್ |
ಬಳಸಿದವೋಲ್ ವಿರಾಜಿಸೆ ವಿನೀಲಪಟಂ ನಡೆತಂದನೇಕ ಕುಂ ||
ಡಲಮುದಯಾರ್ಕ ಮಂಡಲಮನೇಳಿಸೆ ಶೇಷನಶೇಷ ಧಾತ್ರಿಯಂ |
ತಳೆವೆಡೆಯೊಳ್ ನೆರಂಬಡೆದವೋಲಿರೆ ದಕ್ಷಿಣ ವಾಮ ಬಾಹುಗಳ್ || ೭೬ ||

ಮ || ಘನ ದೋರ್ದಂಡ ವಿಮಂಡಿತಂ ಘನಗದಾ ದಂಡಂ ಬೃಹತ್ಕಾಲದ೦ |
ಡನಿಭಂ ಭೀಕರವಾಗೆ ಪೀತವಸನಂ ಸಂಧ್ಯಾ೦ಬುದಂ ಕೋದ ನೀ ||
ಲನಗೇಂದ್ರಂ ನಡೆತರ್ಪ ಮಾತ್ರೆಯಿನುಪೇಂದ್ರಂ ದುರ್ಜಯಂ ರಾಮಚಂ |
ದ್ರನ ಸಿಂದಂ ನಡೆ ತಂದನಾಯತ ಸಿತಾಂಭೋಜೇಕ್ಷಣಂ ಲಕ್ಷಣಂ || ೭೭ ||

ಚ || ಇದಿರ್ವರೆ ತತೃಭಾಜನದ ಕಲರುಂ ಮನಮುಂ ಕೆಲಕ್ಕೆ ವಂ |
ದೊದವಿದ ಭಕ್ತಿಯಿಂದೆಲಗಿದಂ ಪಿತೃ ಪಾದಯುಗಕ್ಕೆ ರಾಘವಂ ||
10